Advertisement
ಶೈಕ್ಷಣಿಕ ವರ್ಷ ಆರಂಭಗೊಂಡು ಒಂದೂವರೆ ತಿಂಗಳು ಕಳೆಯುತ್ತ ಬಂದಿದೆ. ಮುಖ್ಯವಾಗಿ ಆಧಾರ್ ಕಾರ್ಡ್ ಲಿಂಕ್ ಆಗದಿರುವ ಸಮಸ್ಯೆ ಯಿಂದ ಸ್ಕಾಲರ್‌ಶಿಪ್ ಪಡೆಯಲು ಅರ್ಹತೆ ಹೊಂದಿರುವ ವಿದ್ಯಾರ್ಥಿಗಳ ವಿವರ ಇನ್ನೂ ಅಪ್‌ಡೇಟ್ ಆಗಿಲ್ಲ. ವಿವರ ತುಂಬಿರುವ ಮಕ್ಕಳಿಗಷ್ಟೇ ವಿದ್ಯಾರ್ಥಿ ವೇತನ ಪಾವತಿಸಿದ್ದು, ಉಳಿದ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ.
Related Articles
Advertisement
ಆಧಾರ್ ಕಾರ್ಡ್ ಸಮಸ್ಯೆ ಸಹಿತ ಜಾತಿ, ಆದಾಯ ಪ್ರಮಾಣ ಪತ್ರದಲ್ಲಿರುವ ಲೋಪಗಳಿಂದ ತಾಲೂಕಿನ 89 ವಿದ್ಯಾರ್ಥಿ ಗಳಿಗೆ ಸ್ಕಾಲರ್‌ಶಿಪ್ ಅರ್ಜಿ ತುಂಬಲು ಸಾಧ್ಯವಾಗಿಲ್ಲ. ಸರಿಪಡಿಸುವಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸೂಕ್ತ ದಾಖಲೆ ಸಿಕ್ಕಿದರೆ ಮಾತ್ರ ಅಪ್ಲೋಡ್ ಮಾಡಲು ಸಾಧ್ಯವಿದೆ.
– ಮಹಾದೇವ, ಕ್ಷೇತ್ರ ಶಿಕ್ಷಣಾಧಿಕಾರಿ, ಸುಳ್ಯ
ಗೃಹಾಧಾರಿತ ಕೆಲವು ಮಕ್ಕಳಲ್ಲಿ ದೃಷ್ಟಿ, ಅಂಗ ವೈಕಲ್ಯದ ಸಮಸ್ಯೆ ಇದೆ. ಅಂತಹವ ರಿಗೆ ಆಧಾರ್ ಕಾರ್ಡ್ ನೋಂದಣಿ ಸಾಧ್ಯ ವಾಗುತಿಲ್ಲ. ಇನ್ನು, ಕೆಲವು ವಿದ್ಯಾರ್ಥಿಗಳು ಸಲ್ಲಿಸಿರುವ ಮಾಹಿತಿ, ದಾಖಲೆಯಲ್ಲಿ ಸಮಸ್ಯೆ ಇದೆ. ತಾಲೂಕಿನ 217 ವಿದ್ಯಾರ್ಥಿಗಳ ಅರ್ಜಿ ತುಂಬಲು ಸಾಧ್ಯವಾಗಿಲ್ಲ.
– ವಿಷ್ಣುಪ್ರಸಾದ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು
ಏನು ಸಮಸ್ಯೆ?: ಕೆಲವು ವಿದ್ಯಾರ್ಥಿಗಳಲ್ಲಿ ಆಧಾರ್ ಕಾರ್ಡ್ ಇಲ್ಲ. ಎರಡೂ ತಾಲೂಕುಗಳಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಕೇಂದ್ರಗಳು ಸಮರ್ಪಕವಾಗಿಲ್ಲ. ಇನ್ನೊಂದೆಡೆ ಅಂಗವೈಕಲ್ಯ, ದೃಷ್ಟಿ ಸಮಸ್ಯೆ ಇರುವ ವಿದ್ಯಾರ್ಥಿಗಳಲ್ಲಿ ಹೆಬ್ಬೆಟ್ಟು, ಕಣ್ಣಿನ ಬಿಂಬ ಸಮರ್ಪಕವಾಗಿ ದಾಖಲಾಗದೆ ಆಧಾರ್ ಕಾರ್ಡ್ ದೊರೆಯುತ್ತಿಲ್ಲ. ಹೀಗಾಗಿ ಅಂತಹವರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.
ಆಧಾರ್ ಕಾರ್ಡ್ ಇರುವವರಲ್ಲಿ ಬ್ಯಾಂಕ್ ಖಾತೆ ಲಿಂಕ್ ಆಗದಿರುವುದು, ವಿಳಾಸ ಅದಲು ಬದಲಾಗಿರುವುದು, ಹೆತ್ತವರು ನೀಡಿದ ಮಾಹಿತಿ, ಆಧಾರ್ ಮಾಹಿತಿ ತಾಳೆ ಆಗದಿರುವುದು ಹೀಗೆ ಹತ್ತಾರು ಸಮಸ್ಯೆಗಳಿಂದ ಸ್ಕಾಲರ್‌ಶಿಪ್ ಆನ್‌ಲೈನ್ ಅರ್ಜಿ ತುಂಬಲು ಸಾಧ್ಯವಾಗುತ್ತಿಲ್ಲ.
– ಕಿರಣ್ ಪ್ರಸಾದ್ ಕುಂಡಡ್ಕ