Advertisement
ಅಂದು ಬಂಧನಕ್ಕೊಳಗಾದ ತೆಲಗಿ ಈಗ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಆದರೆ ಬಂಧನಕ್ಕೊಳಗಾದ ನಂತರ ಆತ ಹೇಳಿದ ಸತ್ಯ ಹಾಗೂ ಡೈರಿಯಲ್ಲಿ ಬರೆದಿಟ್ಟ ಪ್ರಭಾವಿಗಳ ಹೆಸರು ಇನ್ನೂ ಬಹಿರಂಗವಾಗಿಲ್ಲ. ಆದರೆ ತೆಲಗಿಯ ಭಾರಿ ಪ್ರಮಾಣದ ಹಗರಣವನ್ನು ಬಯಲಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಾನಾಪುರದ ಸಾಮಾಜಿಕ ಹೋರಾಟಗಾರಜಯಂತ ತಿನೇಕರಗೆ ಸರ್ಕಾರದಿಂದ ಬರ ಬೇಕಾಗಿದ್ದ ಬಹುಮಾನದ ಮೊತ್ತ ಇದು ವರೆಗೂ ಬಂದಿಲ್ಲ. ಕಾಂಗ್ರೆಸ್ ಪ್ರಭಾವಿ ರಾಜಕಾರಣಿಗಳ ಅಕ್ರಮ ಬಯಲಿಗೆಳೆದ ಕಾರಣಕ್ಕೆ ನೀಡಿದ್ದ ಭದ್ರತೆಯನ್ನೂ ಕಾರಣ ವಿಲ್ಲದೆ ಹಿಂಪಡೆಯಲಾಗಿದೆ. ಈ ಕುರಿತು ಪೊಲೀಸ್ ಇಲಾಖೆಗೆ ಪ್ರತ್ರ ಬರೆದರೂ ಉತ್ತರ ಸಿಕ್ಕಿಲ್ಲ.
Related Articles
ಕೋಟಿಗಟ್ಟಲೇ ಹಣ ಸಂಪಾದಿಸಿ ಮುಂಬೈನಲ್ಲಿಯೇ ಮೆಟ್ರೋ ಕಾರ್ಪೊರೇಶನ್ ಎಂಬ ಆಮದು ಮತ್ತು ರಫ್ತು ಸಂಸ್ಥೆ ಆರಂಭಿಸಿದ್ದ.
Advertisement
ಸುಳಿವು ಕೊಟ್ಟವರಿಗೆ ಜೀವಭಯ17 ವರ್ಷಗಳ ಹಿಂದೆ ತೆಲಗಿ ನಕಲಿ ಛಾಪಾ ಕಾಗದ ತಯಾರಿಕೆ ಅವ್ಯವಹಾರವನ್ನು ಖಾನಾಪುರದ ಜಯಂತ ತಿನೇಕರ ಜಗಜ್ಜಾಹೀರು ಮಾಡಿದ್ದರು. ಭ್ರಷ್ಟರ ಕೃತ್ಯ ಬಯಲಿಗೆ ಎಳೆದಿದ್ದಕ್ಕೆ ಸಿಕ್ಕಿದ್ದು ಜೀವ ಬೆದರಿಕೆ. ರಕ್ಷಣೆಗಾಗಿ ನೀಡಿದ್ದ ಸಿಬ್ಬಂದಿ ವಾಪಸ್. ಆದರೆ ಅದೇ ಜೈಲು ಶಿಕ್ಷೆಗೆ ಗುರಿಯಾಗಿರುವ ಆರೋಪಿಗೆ ರಾಜೋಪಚಾರ. ಈ ಕಡೆ ಹಗರಣದಲ್ಲಿ ಸಿಲುಕಿರುವ ಪ್ರಭಾವಿಗಳ ಹೆಸರೂ ಹೊರಬರಲಿಲ್ಲ. ಅವರಿಗೆ ಶಿಕ್ಷೆಯನ್ನೂ ನೀಡಲಿಲ್ಲ. ಇನ್ನೊಂದೆಡೆ ನನಗೆ ಸಿಗುವ ಬಹುಮಾನ 17 ವರ್ಷವಾದರೂ ಸೇರಿಲ್ಲ
ಎಂದು ಜಯಂತ್ “ಉದಯವಾಣಿ’ಯೊಂದಿಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ತೆಲಗಿಗೆ ಡಯಾಲಿಸಿಸ್
ಬೆಂಗಳೂರು: ನಕಲಿ ಛಾಪಾ ಕಾಗದ ಹಗರಣದ ಅಪರಾಧಿ ಅಬ್ದುಲ್ ಕರೀಂಲಾಲ್ ತೆಲಗಿ ಆರೋಗ್ಯ ಕೋಮಾ ಸ್ಥಿತಿ ತಲುಪಿದ್ದು, ಬುಧವಾರ ಡಯಾಲಿಸಿಸ್ ಮಾಡಲಾಗಿದೆ. ಮೆದುಳು ಜ್ವರ , ಎಚ್‌ಐವಿ ಸೇರಿದಂತೆ ಬಹುಅಂಗಾಂಗ ವೈಫಲ್ಯಗಳಿಂದ ಬಳಲುತ್ತಿರುವ ಕರೀಂಲಾಲ್ ತೆಲಗಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ, ಇನ್ನೂ ಚೇತರಿಕೆ ಕಂಡು ಬಂದಿಲ್ಲ. ತೆಲಗಿಯ ಪುತ್ರಿ ಮತ್ತು ಅಳಿಯ ಆಸ್ಪತ್ರೆಯಲ್ಲಿ ಇದ್ದು ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ವಿಕ್ಟೋರಿಯಾ ಆಸ್ಪತ್ರೆ ಹೊರ ವಿಭಾಗದ ಪೊಲೀಸರು ತೆಲಗಿ ಚಿಕಿತ್ಸೆ ಪಡೆಯುತ್ತಿರುವ ಕೊಠಡಿಗೆ ಬೆಳಗ್ಗೆ ಮತ್ತು ಸಂಜೆ ಭೇಟಿ ನೀಡಿ ಆತನ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೇಂದ್ರ ಸರ್ಕಾರವೇ ಹೇಳಿದಂತೆ ತೆಲಗಿಯಿಂದ ವಶಪಡಿಸಿಕೊಂಡಿದ್ದ ಆಸ್ತಿಯಲ್ಲಿನ ಒಟ್ಟು ಮೌಲ್ಯದಲ್ಲಿ ತಮಗೆ 44 ಕೋಟಿ ರೂ. ಬಹುಮಾನ ಬರಬೇಕಿತ್ತು. ಆದರೆ ಇದುವರೆಗೆ ಹಣ ಬಂದಿಲ್ಲ. ಇದರ ಬದಲಾಗಿ ಆಗಾಗ ನನಗೆ ಜೀವ ಬೆದರಿಕೆಗಳು ಬರುತ್ತಿವೆ. ಈ ಮೊದಲು ನನಗೆ ನೀಡಿದ್ದ ಭದ್ರತೆಯನ್ನು ಸಹ ಹಿಂದಕ್ಕೆ ಪಡೆಯಲಾಗಿದೆ. ಬಹುಮಾನದ ಮೊತ್ತ ನೀಡದಿರುವ ಬಗ್ಗೆ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಆಲ್ಲಿಂದಲೂ ಇನ್ನು ಉತ್ತರ ಬಂದಿಲ್ಲ.
●ಜಯಂತ ತಿನೇಕರ್, ಸಾಮಾಜಿಕ ಕಾರ್ಯಕರ್ತ ಕೇಶವ ಆದಿ