Advertisement
ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝೆಡ್) ವ್ಯಾಪ್ತಿಯ ಎಂಟು ದಿಬ್ಬಗಳಲ್ಲಿದ್ದ 7,96,55,03 ಮೆಟ್ರಿಕ್ ಟನ ಮರಳು ತೆರವಿಗೆ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (ಕೆಎಸ್‌ಸಿಝಡ್‌ಎಂಎ) 170 ಪರವಾನಿಗೆದಾರರಿಗೆ ನೀಡಿದ್ದ ನಿರಾಕ್ಷೇಪಣಾ ಪತ್ರದ ಅವಧಿ ಫೆ.3ಕ್ಕೆ ಕೊನೆಯಾಗಲಿದೆ. ಫೆ.4ರಿಂದ ಮರಳು ದಿಬ್ಬ ತೆರವಿಗೆ ಅವಕಾಶವಿಲ್ಲ.
ದಿನಕ್ಕೆ 50 ಮೆಟ್ರಿಕ್ ಟನ್, ಮೂರು ತಿಂಗಳಿಗೆ ತಲಾ 500 ಮೆಟ್ರಿಕ್ ಟನ್‌ನಂತೆ 3,15,425 ಮೆಟ್ರಿಕ್ ಟನ್ ಮರಳು ಪರವಾನಿಗೆದಾರರಿಗೆ ವಿಂಗಡಿಸಿದ್ದು, 14,864 ಮೆಟ್ರಿಕ್ ಟನ್ ಬಾಕಿಯಿದೆ. ಮೂರು ದಿಬ್ಬದಲ್ಲಿ 2,28,483 ಮೆಟ್ರಿಕ್ ಟನ್ ಮರಳು ತೆರವಿಗೆ ಯಾರೂ ಮುಂದೆ ಬಂದಿಲ್ಲ.
Related Articles
Advertisement
ಶೀಘ್ರ ಹೊಸ ಪರವಾನಿಗೆಸಿಆರ್ಝೆಡ್ ವ್ಯಾಪ್ತಿಯ 3 ಮರಳು ದಿಬ್ಬಗಳಲ್ಲಿ ಮರಳಿದ್ದರೂ ತೆರವಿಗೆ ಯಾರು ಕೂಡ ಪರವಾನಿಗ ಪಡೆದುಕೊಂಡಿಲ್ಲ. ನೀಡಿರುವ ಪರವಾನಿಗೆದಾರರ ಅವಧಿ ಮುಗಿದಿದೆ. 10 ಮರಳು ದಿಬ್ಬಗಳ ಪ್ರಸ್ತಾವನೆಯನ್ನು ಕೆಎಸ್‌ಝೆಡ್‌ಎಂಎಗೆ ಸಲ್ಲಿಸಲಾಗಿದೆ. ಅಂಗೀಕಾರವಾದರೆ ಶೀಘ್ರದಲ್ಲೇ ಹೊಸದಾಗಿ ಪರವಾನಿಗೆ ನೀಡಲಾಗುವುದು.
-ರಾನಿj ನಾಯಕ್,
ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಡುಪಿ ನಾನ್‌ಸಿಆರ್‌ಝೆಡ್‌ನಲ್ಲೂ ಖಾಲಿ
ನಾನ್ ಸಿಆರ್‌ಝೆಡ್ ವ್ಯಾಪ್ತಿಯ ಕಾವ್ರಾಡಿ ಬ್ಲಾಕ್‌ನಲ್ಲಿ 56,821 ಮೆಟ್ರಿಕ್ ಟನ್ ಮರಳಿನ ಪೈಕಿ ಕೇವಲ 8,800 ಮೆಟ್ರಿಕ್ ಟನ್ ಬಾಕಿಯಿದ್ದರೂ ಬಂದ್ ಮಾಡಲಾಗಿದೆ. ಹಲಾ°ಡು ಬ್ಲಾಕ್‌ನಲ್ಲಿದ್ದ 27,218 ಮೆಟ್ರಿಕ್ ಟನ್ ಮರಳು ಖಾಲಿಯಾಗಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಬೆಳ್ಳಂಪಳ್ಳಿಯಲ್ಲಿ ಎರಡು ಬ್ಲಾಕ್ ಶೀಘ್ರ ಆರಂಭವಾಗಲಿದೆ. ನಾನ್ ಸಿಆರ್‌ಝೆಡ್ ವ್ಯಾಪ್ತಿಯ ಮರ್ಣೆ, ಹಿರ್ಗಾನದ ಬ್ಲಾಕ್ ಸಿದ್ದವಾಗಿದೆ. ಲೋಕೋಪಯೋಗಿ ಇಲಾಖೆ ಮರಳುಗಾರಿಕೆಗೆ ಮುಂದಾಗದಿದ್ದರೆ ಅನ್ಯ ಇಲಾಖೆಯ ಮೂಲಕ ಮರಳುಗಾರಿಕೆಗೆ ವಿಚಾರ ವಿಮರ್ಶೆ ನಡೆದಿದೆ. ಕಾರ್ಕಳದಲ್ಲಿ 14 ಕಿಂಡಿ ಅಣೆಕಟ್ಟಿನ ಹೂಳೆತ್ತುವ ಪ್ರಕ್ರಿಯೆ ಆರಂಭವಾಗಿದ್ದು, ಮುಂಡ್ಲಿ ಜಲಾಶಯ, ಬಸೂÅರು(1.20 ಲಕ್ಷ ಮೆಟ್ರಿಕ್ ಟನ್) ಜಲಾಶಯದಿಂದ ಹೂಳೆತ್ತಿ ಮರಳು ಒದಗಿಸಲು ಆ್ಯಪ್ ಮೂಲಕ ಬುಕ್ಕಿಂಗ್ ನಡೆಯಲಿದೆ. ಬಜೆ ಅಣೆಕಟ್ಟಿನ ಎರಡನೇ ಹಂತದ ಹೂಳೆತ್ತುವ ಪ್ರಕ್ರಿಯೆಗೂ ಚಾಲನೆ ಸಿಗಲಿದೆ.