ಹುಬ್ಬಳ್ಳಿ: ರಾಜ್ಯಾದ್ಯಂತ ಜಾರಿಯಲ್ಲಿರುವ ಕರ್ಫ್ಯೂ ಅಲ್ಪ ಸಡಿಲಿಕೆ ಆಗಿದ್ದು, ಬೆಳಗ್ಗೆ 6 ರಿಂದ 10 ಗಂಟೆಗೆ ಇದ್ದ ಅಗತ್ಯ ವಸ್ತುಗಳ ಖರೀದಿಗೆ 2 ತಾಸು ಹೆಚ್ಚು ಅವಕಾಶ ನೀಡಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದರು. ನಗರದ ವಿವಿಧ ಮಾರುಟ್ಟೆಗಳಲ್ಲಿ ದಿನಕ್ಕಿಂತ ಎರಡು ಗಂಟೆಗಳ ಕಾಲ ಹೆಚ್ಚು ಅವಕಾಶ ಇದ್ದ ಕಾರಣ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿರುವುದು ಕಂಡು ಬಂತು.
ಎಪಿಎಂಸಿಯಲ್ಲಿ ಹೆಚ್ಚಿನ ಜನ: ನಗರದಲ್ಲಿ ಶನಿವಾರ ಬೆಳಗ್ಗೆ ಎಪಿಎಂಸಿ, ಸಿದ್ಧಾರೂಢಮಠ, ಗಿರಣಿಚಾಳ ಮಾರುಕಟ್ಟೆಗಳಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಎಲ್ಲರಿಗೂ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ್ದರು. ಆದರೆ ರವಿವಾರ ಮತ್ತೆ ಅದೇ ರಾಗ ಅದೇ ಹಾಡು ಎನ್ನುವಂತಾಗಿದ್ದು ಎಪಿಎಂಸಿ, ಸಿದ್ಧಾರೂಢಮಠ ಮಾರುಕಟ್ಟೆಗಳಲ್ಲಿ ಎಲ್ಲಿ ನೋಡಿದರಲ್ಲಿ ಜನವೋ ಜನ ಕಂಡು ಬಂದರು.
ಮಾಂಸದಂಗಡಿ ಮುಂದೆ ಕ್ಯೂ: ರವಿವಾರ ಇದ್ದುದರಿಂದ ನಗರದಲ್ಲಿರುವ ಬಹುತೇಕ ಮಾಂಸದಂಗಡಿಗಳ ಮುಂದೆ ಜನರು ಸರದಿಯಲ್ಲಿ ನಿಂತು ಚಿಕನ್, ಮಟನ್ ಖರೀದಿಸುತ್ತಿರುವುದು ಕಂಡು ಬಂತು. ನಗರದಾದ್ಯಂತ ಅಂಗಡಿಗಳು ಇದ್ದರೂ ತಮ್ಮ ಇಷ್ಟದ ಹಾಗೂ ಸದಾ ಖರೀದಿಸುವ ಅಂಗಡಿಗಳು ಲಗ್ಗೆ ಇಡುತ್ತಿರುವುದು ಕಂಡು ಬಂತು. ಇನ್ನು ಗಣೇಶಪೇಟೆ ಮೀನು ಮಾರುಕಟ್ಟೆಯಲ್ಲಿ ಹೆಚ್ಚಿನ ಜನರಿರುವುದು ಕಂಡು ಬಂತು.
ಬಿಸಿ ಮುಟ್ಟಿಸಿದ ಪೊಲೀಸರು: ನಗರದ ಕಿತ್ತೂರ ಚನ್ನಮ್ಮ ವೃತ್ತ, ನ್ಯೂ ಇಂಗ್ಲಿಷ್ ಸ್ಕೂಲ್, ಹೊಸೂರ ವೃತ್ತ, ಸವೂìದಯ ವೃತ್ತ, ಸ್ಟೇಶನ್ ರಸ್ತೆ, ಮರಾಠ ಗಲ್ಲಿ ಸೇರಿದಂತೆ ವಿವಿಧೆಡೆ ಅನಗತ್ಯವಾಗಿ ತಿರುಗಾಡುತ್ತಿರುವ ಜನರನ್ನು ತಡೆದ ಪೊಲೀಸರು ದಂಡ ಹಾಕುತ್ತಿರುವುದು ಕಂಡು ಬಂತು. ಅಗತ್ಯತೆ ಕಾರಣ ಸರಕಾರ ಒಂದಿಷ್ಟು ಅವ ಧಿ ವಿಸ್ತರಿಸುವುದನ್ನು ನೆಪ ಮಾಡಿಕೊಂಡು ವಿನಾಕಾರಣ ಓಡಾಡುವುದು ಸರಿಯಲ್ಲ. ಅಗತ್ಯವಿದ್ದರೆ ಮಾತ್ರ ಹೊರ ಬರಬೇಕು. ಅಗತ್ಯ ವಸ್ತುಗಳ ಖರೀದಿ ನೆಪ ಮಾಡಿಕೊಂಡು ಎಲ್ಲಿ ಬೇಕಾದಲ್ಲಿ ಓಡಾಡುವುದಲ್ಲ. ಅಕ್ಕಪಕ್ಕದ ಅಂಗಡಿಗಳಲ್ಲಿ ಖರೀದಿಸಬೇಕು. ವಿನಃ ಮಾರುಕಟ್ಟೆ ನೆಪ ಮಾಡಿಕೊಂಡು ಓಡಾಡುವುದಲ್ಲ. ಅನಗತ್ಯ ಸಂಚರಿಸಿದರೆ ವಾಹನ ಜಪ್ತಿ ಮಾಡಿ ದಂಡ ಹಾಕುವ ಎಚ್ಚರಿಕೆ ನೀಡಿದರು. ಕೆಲವೆಡೆ ಪೊಲೀಸರು ವಾಹನಗಳನ್ನು ವಶಕಪಡಿಸಿಕೊಂಡರು. ಇನ್ನೂ ಮಾಸ್ಕ್ ಧರಿಸಿದವರಿಂದ ದಂಡ ವಸೂಲಿ ಮಾಡಿರುವುದು ಕಂಡು ಬಂತು.