ಹುಣಸಗಿ: ದೇಶದಲ್ಲಿ ಒಂದೇ ತೆರಿಗೆ ಪದ್ಧತಿ ಜಾರಿ ಮಾಡಿರುವ ಪ್ರಧಾನಿ ಮೋದಿ ಅವರ ಕ್ರಮ ಸ್ವಾಗತಾರ್ಹ ಎಂದು ಮಾಜಿ ಸಚಿವ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ಗುಳಬಾಳ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೋಟ್‌ಬ್ಯಾನ್‌ನಿಂದ ಹಲವೂ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿದಂತಾಗಿದೆ. ಕಪ್ಪುಹಣ ಸಂಗ್ರಹಿಸಿದ ಹಲವರಿಗೆ ದಿಕ್ಕು ತೋಚದಂತಾಗಿದೆ. ನಮ್ಮ ಕ್ಷೇತ್ರದ ಕೆಲವರಿಗೂ ಇದರ ಬಿಸಿ ಮುಟ್ಟಿದೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ಬಡವರು ಹಾಗೂ ರೈತರನ್ನು ಕಡೆಗಣಿಸಿದೆ. ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ ಅವರ ಬಿಜೆಪಿ ಸರಕಾರದ ಆಡಳಿತ ಅವಧಿಯಲ್ಲಿನ ಸಾಧನೆಯನ್ನು ಜನರಿಗೆ ತಿಳಿಸಿ ಮತ್ತೂಮ್ಮೆ ಅಧಿಕಾರಕ್ಕೆ ತರಬೇಕು ಎಂದು
ಹೇಳಿದರು.
ಇದೇ ಸಂದರ್ಭದಲ್ಲಿ 35 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಜಿಪಂ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಜಿಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ, ಜಿಪಂ ಮಾಜಿ ಸದಸ್ಯ ಎಚ್.ಸಿ. ಪಾಟೀಲ ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಅಮರಣ್ಣ ಹುಡೇದ ಅಧ್ಯಕ್ಷತೆ ವಹಿಸಿದ್ದರು.
ಎಪಿಎಂಸಿ ಸದಸ್ಯ ದೇವಣ್ಣ ಮಲಗಲದಿನ್ನಿ, ಜಿಪಂ ಮಾಜಿ ಅಧ್ಯಕ್ಷ ಹಣುಮಪ್ಪ ನಾಯಕ (ತಾತಾ), ಸಂಗಣ್ಣ ವೈಲಿ, ನಾನಾಗೌಡ ಪಾಟೀಲ, ಸಿದ್ದನಗೌಡ ಕರಿಭಾವಿ, ಜಿಪಂ ಸದಸ್ಯ ಎನ್.ಡಿ. ನಾಯಕ, ಡಾ| ವಿ.ಬಿ. ಬಿರಾದಾರ, ಭೀಮನಗೌಡ ತೀರ್ಥ, ರುದ್ರಗೌಡ ಗುಳಬಾಳ, ವೀರಸಂಗಪ್ಪ ಹಾವೇರಿ, ತಾಪಂ ಸದಸ್ಯ ಸೋಮಣ್ಣ ಮೇಟಿ, ಭೀಮರಾಯ ಶ್ರೀನಿವಾಸಪುರ, ಹುಣಸಗಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಹಮೀದಸಾಬ ಡೆಕ್ಕನ್, ಗುರಣ್ಣ ಸಾಹು ಇಬ್ರಾಹಿಮಪುರ, ಬಲಭೀಮ ನಾಯಕ ಬೈರಮಡ್ಡಿ, ಪ್ರಭುಗೌಡ ಗದಿಗೆಪ್ಪಗೋಳ ಇದ್ದರು.