Advertisement

ಸಕ್ಕರೆ ಗೊಂಬೆಗಳ ಮಾರಾಟ ಜೋರು

01:07 PM Nov 12, 2019 | Suhan S |

ಬಂಕಾಪುರ: ಮಹಿಳೆಯರ ಅಚ್ಚುಮೆಚ್ಚಿನ ಹಬ್ಬಗಳಲ್ಲೊಂದಾದ ಗೌರಿ ಹುಣ್ಣಿಮೆ ಅಂಗವಾಗಿ ಪಟ್ಟಣದಲ್ಲಿ ಸಕ್ಕರೆ ಗೊಂಬೆಗಳ ಮಾರಾಟ ಭರದಿಂದ ಸಾಗಿದೆ.

Advertisement

ಭಾರತದಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನಮಾನವಿದ್ದು, ಮಹಿಳಾ ಪ್ರಧಾನವಾದ ಹಬ್ಬಗಳಲ್ಲಿ ಗೌರಿ ಹುಣ್ಣಿಮೆಯೂ ಕೂಡಾ ಒಂದಾಗಿದೆ. ತನ್ನಿಮಿತ್ಯ ಮಾರುಕಟ್ಟೆ ಜನ ಜಂಗುಳಿಯಿಂದ ಕೂಡಿದ್ದು, ವಿವಿಧ ಆಕಾರದ ಭಾರತೀಯ ಜಾನಪದ ಸಂಸ್ಕೃತಿ, ಕಲೆಯನ್ನು ಬಿಂಬಿಸುವ ತರ ತರದ ಬಣ್ಣಗಳಿಂದ ಕೂಡಿದ ಸಕ್ಕರೆ ಗೊಂಬೆಗಳ ಮಾರಾಟ ಬರದಿಂದ ಸಾಗಿದೆ.

ಮಂಗಳವಾರ ನಡೆಲಿರುವ ಗೌರಿಹುಣ್ಣಿಮೆ ಸಂಭ್ರಮಕ್ಕೆ ಯುವತಿಯರು ಸಜ್ಜಾಗುತ್ತಿದ್ದು, ಸಕ್ಕರೆ ಗೊಂಬೆಗಳ ಜತೆಗೆ ಹೂವಿನ ದಂಡೆ, ಕೋಲು ಮಾರಾಟ ಭರದಿಂದ ಸಾಗಿದೆ. ಪ್ರತಿ ಮನೆ ಮನೆಗಳಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಹೆಂಗಳೆಯರು ತಯಾರಿ ನಡೆಸಿದ್ದು, ಹೆಂಗಳೆಯರಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ಹೊಸದಾಗಿ ನಿಶ್ಚಿಯಮಾಡಿದ ಕನ್ಯಾಮಣಿಗಳಿಗೆ ಗಂಡನ ಮನೆಯವರು ಸಕ್ಕರೆಗೊಂಬೆ ಹೂವಿನ ದಂಡೆ ತೆಗೆದುಕೊಂಡು ಹೋಗಿ ಹೊಸ ಸೀರೆ, ಕುಪ್ಪಸ, ಹಸಿರು ಬಳೆ, ಅರಿಷಣ ಕುಂಕುಮ, ಫಲ, ಉಡಿ ತುಂಬಿ ನೆರೆ ಹೊರೆಯವರನ್ನು ಕರೆದು ಆರತಿ ಬೆಳಗುವ ಸಂಪ್ರದಾಯ ಅನಾದಿಕಾಲದಿಂದಲೂ ಮುಂದುವರೆದುಕೊಂಡು ಬಂದಿರುವುದು ಭಾರತೀಯರ ಸಂಸ್ಕೃತ ಸಂಪ್ರದಾಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next