Advertisement

ಕುಂಚಾವರಂನಲ್ಲಿ ಮಕ್ಕಳ ಮಾರಾಟ-ಖಂಡನೆ

01:05 PM Mar 17, 2018 | Team Udayavani |

ಸೇಡಂ: ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ಹೆಣ್ಣು ಮಕ್ಕಳ ಮಾರಾಟ ನಡೆಯುತ್ತಿದ್ದು, ರಾಜ್ಯ ಸರ್ಕಾರ ಗಮನಹರಿಸಬೇಕು ಎಂದು ಕರವೇ ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಆಗ್ರಹಿಸಿದರು.

Advertisement

ಕುಂಚಾವರಂನ ಮಕ್ಕಳ ಮಾರಾಟ ಘಟನೆ ಖಂಡಿಸಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಿದ ಅವರು, ಮಕ್ಕಳ ಮಾರಾಟದ ಹಿಂದಿರುವ ಮರ್ಮ ಅರಿಯಬೇಕು. ಅಲ್ಲಿನ ಜನತೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿ, ಬಡತನದಿಂದ ಮುಕ್ತಿ ಕೊಡಿಸಬೇಕು ಎಂದು ಒತ್ತಾಯಿಸಿದರು.

ಮಕ್ಕಳ ಮಾರಾಟದಂತಹ ಕೀಳು ಮಟ್ಟದ ಸ್ಥಿತಿಗೆ ಜನ ತಲುಪಿರುವುದು ಇಡೀ ರಾಜ್ಯಕ್ಕೆ ಆದ ಅವಮಾನ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕುಂಚಾವರಂ ಭಾಗದ ಬಡ ಕುಟುಂಬಗಳಿಗೆ ವಿಶೇಷ ಯೋಜನೆಗಳನ್ನು ಘೋಷಿಸಬೇಕು. ಸೇಡಂನ ಕಲಬುರಗಿ ವೃತ್ತಕ್ಕೆ ಬಸವೇಶ್ವರ ಹೆಸರನ್ನಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕಾರ್ಯದರ್ಶಿ ವಿದ್ಯಾಸಾಗರ ದುದ್ದೇಲಿ, ಮಹೇಶ ಪಾಟೀಲ, ಶ್ರೀನಿವಾಸರೆಡ್ಡಿ, ದೇವು ನಾಟೀಕಾರ, ಮಹೇಶ ಇಮಡಾಪುರ, ಸುಭಾಶ ಇಮಡಾಪುರ, ರವಿ ಮದರಿ, ರವಿಸಿಂಗ ಇಮಡಾಪುರ, ಮಹಿಪಾಲ, ಭಗವಂತ ನಾಟೀಕಾರ, ಭೀಮಾಶಂಕರ, ಕಾಶಿನಾಥ ಮದರಿ, ಶಶಿ ಪಾಟೀಲ ಮುಗನೂರ, ಭೀಮರೆಡ್ಡಿ ಮಲ್ಕಾಪಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next