Advertisement

ಹಳಕಟ್ಟಿ ತ್ಯಾಗ-ಪರಿಶ್ರಮ ಅಪಾರ

02:46 PM Jul 08, 2017 | Team Udayavani |

ಭಾಲ್ಕಿ: ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಅವರ ತ್ಯಾಗ ಮತ್ತು ಪರಿಶ್ರಮದಿಂದಾಗಿ ಇಂದು ನಮಗೆ ಸಮಗ್ರ ವಚನ ಸಾಹಿತ್ಯ ಪುಸ್ತಕ ರೂಪದಲ್ಲಿ ದೊರೆತಿದೆ ಎಂದು ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ.

Advertisement

ಪಟ್ಟಣದ ಚನ್ನಬಸವಾಶ್ರಮದಲ್ಲಿ ಡಾ| ಫ.ಗು. ಹಳಕಟ್ಟಿ ಜಯಂತಿ ಮಹೋತ್ಸವ ನಿಮಿತ್ತ ನಡೆದ “ನವಿಲೂರು ನಿಲ್ದಾಣ’ ನಾಟಕ
ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡಾ| ಫ.ಗು.ಹಳಕಟ್ಟಿಯವರ ಜೀವನದ ಬಹುಭಾಗ ಬಸವಾದಿ ಶರಣರ ವಚನ
ಸಾಹಿತ್ಯದ ಸಂಗ್ರಹದಲ್ಲಿಯೇ ಕಳೆದಿದೆ. ಇದಕ್ಕಿಂತ ಪೂರ್ವದಲ್ಲಿ ವಚನ ಸಾಹಿತ್ಯ ತಾಡೋಲೆಗಳಲ್ಲಿ ಬಿಡಿ ಬಿಡಿಯಾಗಿತ್ತು. ಹಳಕಟ್ಟಿಯವರ ಪರಿಶ್ರಮದಿಂದ ಇಂದು ವಚನ ಸಾಹಿತ್ಯವನ್ನು ನಾವು ಪುಸ್ತಕ ರೂಪದಲ್ಲಿ ಓದುವಂತಾಗಿದೆ. ಅವರ ಶ್ರಮ ನಮ್ಮೆಲ್ಲರಿಗೆ ಆದರ್ಶವಾಗಿದೆ ಎಂದು ಹೇಳಿದರು.

ಶ್ರೀ ರೇವಣಸಿದ್ದ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಅ.ಭಾ.ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಚಂದ್ರಕಾಂತ ಬಿರಾದಾರ,
ಬಸವಕೇಂದ್ರ ಭಾಲ್ಕಿ ಅಧ್ಯಕ್ಷ ಕಿರಣ ಖಂಡ್ರೆ ಉಪಸ್ಥಿತರಿದ್ದರು. ಇದೇವೇಳೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪುರ
ಗ್ರಾಮದ ನಾಟ್ಯ ಯೋಗ ಕಲಾ ತಂಡದವರಿಂದ ಪ್ರದರ್ಶನಗೊಂಡ “ನವಿಲೂರು ನಿಲ್ದಾಣ’ ನಾಟಕ ಗಮನ ಸೆಳೆಯಿತು. ಗಾಂವಕರ್‌ ನಿರೂಪಿಸಿದರು. ವೀರಣ್ಣ ಕುಂಬಾರ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next