Advertisement
ಜುಲೈ 4ರಿಂದ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರವಾಸದಲ್ಲಿರುವುದು ಒಂದು ಐತಿಹಾಸಿಕ ಕ್ಷಣವೇ ಸರಿ. ಇಸ್ರೇಲ್- ಭಾರತದ ನಡುವೆ ಆಪ್ತ ಸಂಬಂಧವೊಂದು ಅನುಗಾಲದಿಂದ ಹಸಿರಾ ಗಿದ್ದರೂ ಈ ದೇಶದ ಪ್ರಧಾನಿ ಗಳಾರೂ ಅವರ ಆಡಳಿತಾವಧಿಯಲ್ಲಿ ಇಸ್ರೇಲಿಗೆ ಭೇಟಿ ನೀಡಿರಲಿಲ್ಲ. ಇದೀಗ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ನೆಲೆಗೊಂಡ 25 ವರ್ಷಗಳ ಸಂದರ್ಭದಲ್ಲಿ, ಭಾರತದ ಪ್ರಧಾನಿಯೊಬ್ಬರ ಮೊದಲ ಇಸ್ರೇಲ್ ಭೇಟಿ ಇದಾಗಿದೆ.
ಗಳ ಪರಿಶ್ರಮದ ಬದುಕು ನಮ್ಮಲ್ಲೊಂದು ಮೆಚ್ಚುಗೆಯನ್ನು ಕಟ್ಟಿಕೊಟ್ಟಿದೆ. ಸುತ್ತಲೂ ಆಕ್ರಮಣಕಾರಿ
ಮುಸ್ಲಿಂ ದೇಶಗಳನ್ನೇ ಇಟ್ಟುಕೊಂಡು ಇಸ್ರೇಲ್ ಎಂಬ ಅತಿ ಚಿಕ್ಕ ದೇಶ ತನ್ನ ಅಸ್ತಿತ್ವವನ್ನು ಕಾಪಿಟ್ಟು ಉಗ್ರರನ್ನು ಸದೆಬಡಿ ಯುತ್ತಿರುವ ರೀತಿ, ನದಿಗಳಿಲ್ಲದ ನೆಲದಲ್ಲಿ ಅದು ಸಾಧಿಸಿರುವ ಕೃಷಿ ಪ್ರಗತಿ, ಜಗತ್ತನ್ನು ಮಾರುಕಟ್ಟೆಯಾಗಿಸಿಕೊಂಡಿರುವ ಅದರ ತಂತ್ರಜ್ಞಾನ ಕೌಶಲ- ಅದರಲ್ಲೂ ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿ, ಉಗಾಂಡದಲ್ಲಿ ಹೈಜಾಕ್ ಆದ ವಿಮಾನದಿಂದ ತನ್ನವರನ್ನು ಬಿಡಿಸಿಕೊಂಡು ಬಂದ ಇಸ್ರೇಲಿನ “ಆಪರೇಷನ್ ಎಂಟಬೆ’ ಎಂಬ ಪುಸ್ತಕ-ಸಿನಿಮಾಗಳಲ್ಲಿ ಬಣ್ಣನೆಗೊಂಡ ವೀರಗಾಥೆ… ಇವೆಲ್ಲವನ್ನೂ ನಾವು ಅಲ್ಲಲ್ಲಿ ಹೀರಿಕೊಂಡು ಪುಳಕಗೊಳ್ಳುತ್ತ, ಕಟ್ಟಿದರೆ ಇಸ್ರೇಲಿನಂಥ ರಾಷ್ಟ್ರ ಕಟ್ಟಬೇಕು ಅಂತಲೂ ಉದ್ಗರಿಸಿದ್ದೇವೆ. ಕಾರ್ಗಿಲ್‌ನಲ್ಲಿ ನಾವು ಪಾಕಿಸ್ತಾನದ ಆಕ್ರಮಣದ ವಿರುದ್ಧ ಕದನಕ್ಕಿಳಿದಾಗ ಯಾವ ಪಾಶ್ಚಾತ್ಯ ಶಕ್ತಿಗಳೂ ಬೆಂಬಲಿಸಲಿಲ್ಲ. ಆದರೆ ಅಮೆರಿಕದ ಆಕ್ಷೇಪಕ್ಕೂ ಸೊಪ್ಪು ಹಾಕದೇ ನಮಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟಿದ್ದು ಇಸ್ರೇಲ…. 1998ರಲ್ಲಿ ಪೊಖಾನ್‌ನಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಅಮೆರಿಕದ ಮುಂದಾಳತ್ವ ದಲ್ಲಿ ಹೆಚ್ಚಿನ ರಾಷ್ಟ್ರಗಳೆಲ್ಲ ಖಂಡನೆಗಿಳಿದು ದಿಗ್ಬಂಧನಕ್ಕೆ ಮುಂದಾ ದವು. ಇಸ್ರೇಲ್ ಮಾತ್ರ ಖಂಡನೆಗಿಳಿಯದೇ ಮುಗುಳ್ನಕ್ಕು ಪರೋಕ್ಷ ಬೆಂಬಲ ನೀಡಿತು.
Related Articles
ಆಗ ಭಾರತ ಬ್ರಿಟಿಷ್ ಸಾಮ್ರಾಜ್ಯದ ಅಡಿಯಲ್ಲಿತ್ತಷ್ಟೆ. ಎರಡು ವಿಶ್ವಯುದ್ಧಗಳನ್ನು ಬ್ರಿಟಿಷ್ ಮೈತ್ರಿ ಪಡೆಗಳು ಗೆದ್ದಿರುವುದು ಈಗ ಇತಿಹಾಸ. ಆದರೆ ಭಾರತೀಯ ಸೈನಿಕರ ಹೋರಾಟ ಮತ್ತು ಬಲಿದಾನಗಳಿಲ್ಲದೇ ಹೋಗಿದ್ದರೆ ಇವೆರಡೂ ಸಾಧ್ಯವಾಗುತ್ತಿ ರಲಿಲ್ಲ ಅಂತ 1942ರಲ್ಲಿ ಭಾರತೀಯ ಸೇನೆಯ ಕಮಾಂಡರ್ ಇನ್ ಚೀಫ್ ಆಗಿದ್ದ ಫೀಲ್ಡ್ ಮಾರ್ಷಲ್ ಕೌಡ್ ಅಚಿನ್ಲಕ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಇಸ್ರೇಲ್ ವಿಷಯದಲ್ಲಾಗಿದ್ದೂ ಇದೇ. ಯಹೂದಿಗಳಿಗೆ ಅವರದ್ದೇ ಆದ ನೆಲವನ್ನು ದೊರಕಿಸಿಕೊಡುವ ಹೋರಾಟದಲ್ಲಿ ಬ್ರಿಟನ್ ತನ್ನನ್ನು ತಾನು ಗುರುತಿಸಿಕೊಂಡಿತು. ಎಲ್ಲರಿಂದಲೂ ಹಿಂಸೆಗೊಳಗಾಗಿ ಯುರೋಪಿನಲ್ಲಿ ಚದುರಿಹೋಗಿದ್ದ ಯಹೂ ದಿಗಳ ವಲಸೆ ಘರ್ಷಣೆಗಳನ್ನು ತಪ್ಪಿಸುವುದಕ್ಕೆ ಆ ನಿಲುವಿಗೆ ಬರಲೇಬೇಕಾಗಿತ್ತು.
Advertisement
ಆಗ ಪ್ಯಾಲಸ್ತೀನ್ ಎಂದೇ ಕರೆಸಿಕೊಡಿದ್ದ ಯಹೂದಿ ನೆಲದ ಮೇಲೆ ಒಟ್ಟೊಮಾನ್ ತುರ್ಕರ ಅಧಿಪತ್ಯವಿತ್ತು. ಇವರಿಗೆ ಜರ್ಮನಿ ಮತ್ತು ಆಸ್ಟ್ರಿಯಾ ಮಿಲಿಟರಿ ಬೆಂಬಲ. ಇವರ ವಿರುದ್ಧ ಹೋರಾಡುವುದಕ್ಕೆ ಮುಂದಾದ ಬ್ರಿಟಿಷರು ಮೊದಲಿಗೆ ಹೈಫಾ ಎಂಬ ಬಂದರು ಪಟ್ಟಣವನ್ನು ವಶಪಡಿಸಿಕೊಳ್ಳುವುದಕ್ಕೆ ಯೋಜಿಸಿದರು. ಏಕೆಂದರೆ ಅಲ್ಲಿಂದಲೇ ತುರ್ಕರಿಗೆ ಎಲ್ಲ ಪೂರೈ ಕೆಗಳು ಆಗುತ್ತಿದ್ದವು. ಯೋಜನೆಯೇನೋ ಬ್ರಿಟಿಷ್ ಜನರಲ್ ಅಲ್ಲೆನಿºಯದ್ದು. ಆದರೆ ಅದನ್ನು ಸಾಕಾರಗೊಳಿಸುವುದಕ್ಕೆ ಭಾರತದಿಂದ ಹೊರಟವು ಮೂರು ಪಡೆಗಳು.
ಮೈಸೂರು ಮಹಾರಾಜರು ಮತ್ತು ಜೋಧ್‌ಪುರದ ಮಹಾ ರಾಜರು ಕಳುಹಿಸಿಕೊಟ್ಟ ಅಶ್ವದಳ ಮತ್ತು ಕಾಲ್ದಳ. ಹೈದರಾಬಾದ್ ನಿಜಾಮ ಕಳುಹಿಸಿಕೊಟ್ಟ ಇನ್ನೊಂದು ದಳವನ್ನು ಯುದ್ಧ ಕೈದಿಗಳ ವಿಚಾರಣೆಗೆ ನಿಯೋಜಿಸಲಾಗಿತ್ತು. ರಣರಂಗಕ್ಕೆ ಇಳಿದಿದ್ದು ಮೈಸೂರು ಮತ್ತು ಜೋಧ್‌ಪುರದ ಪಡೆಗಳು. ಕುದುರೆ-ಈಟಿ-ಖಡ್ಗಗಳ ಸಾಂಪ್ರದಾ ಯಿಕ ಪಡೆಯೊಂದು ಆಧುನಿಕ ಫಿರಂಗಿ ಗಳನ್ನು ಎದುರಿಸಿ ಜಯ ಸಾಧಿಸಿದ ಉದಾಹರಣೆಯೊಂದನ್ನು ಜಾಗತಿಕ ಸಮರ ಚರಿತ್ರೆಯಲ್ಲಿ ದಾಖಲಿಸಿಬಿಟ್ಟವು ಈ ಭಾರತೀಯ ಪಡೆಗಳು. 1918ರ ಸೆಪ್ಟೆಂಬರ್ 20 ಮತ್ತು 21ರಂದು ನಡೆದ ಸಮರದಲ್ಲಿ ತುರ್ಕರನ್ನು ಹಿಮ್ಮೆಟ್ಟಿಸು ವುದರೊಂದಿಗೆ ಇಸ್ರೇಲಿನ ಸ್ವಾತಂತ್ರ್ಯ ಜ್ಯೋತಿ ಪ್ರಜ್ವಲಿಸುವುದಕ್ಕೆ ಶುರುವಾಯಿ ತೆಂದರೆ ತಪ್ಪಿಲ್ಲ.
ಅದೇನೂ ಸುಲಭದ ತುತ್ತಾಗಿರಲಿಲ್ಲ. ಮಷಿನ್ ಗನ್‌ಗಳೊಂದಿಗೆ ಏರು ಪ್ರದೇಶ ದಲ್ಲಿದ್ದುಕೊಂಡು ಮೇಲುಗೈ ಸಾಧಿಸುತ್ತಿದ್ದರು ತುರ್ಕರು. ತೊರೆ ದಾಟಿ ಬೆಟ್ಟ ಹತ್ತಬೇಕಾದ ಸವಾಲು ಭಾರತೀಯ ಯೋಧರಿಗೆ. ಇವರ ಬಳಿ ಸರಿ ಸಮಾನ ಶಸ್ತ್ರಗಳೂ ಇಲ್ಲ. ಹಾಗೆಂದೇ ದೊಡ್ಡ ಸಂಖ್ಯೆಯಲ್ಲಿ ನಮ್ಮ ಸೈನಿಕರ ಬಲಿದಾನವಾಯಿತು. ಒಂದು ಹಂತದಲ್ಲಿ ಇದು ಆಗುವ ಮಾತಲ್ಲ ಎಂಬ ನಿರ್ಧಾರಕ್ಕೆ ಬಂದ ಬ್ರಿಟಿಷರು, ಪಡೆಗಳನ್ನು ಹಿಂಪಡೆದುಕೊಳ್ಳೋಣ ಎನ್ನುತ್ತಾರೆ. ಮೈಸೂರು ಮತ್ತು ಜೋಧ್‌ಪುರದ ನಾಯಕರು ಈ ಪ್ರಸ್ತಾವವನ್ನು ಖಂಡತುಂಡ ವಿರೋಧಿಸುತ್ತಾರೆ. ಮೇಜರ್ ದಳಪತ್ ಸಿಂಗ್ ಶೆಖಾವತ್ ಹೇಳುತ್ತಾರೆ- “”ರಣರಂಗದಿಂದ ಹಿಂದಕ್ಕೆ ಸರಿಯುತ್ತಿದ್ದೀರಾ ಹೇಡಿಗಳಾ ಎಂದು ಮಾತೆ ಪಾರ್ವತಿ ದೇವಿ ನಮ್ಮ ಕನಸಿನಲ್ಲಿ ಬಂದು ಎಚ್ಚರಿಸಿದ್ದಾಳೆ. ರಣರಂಗದಲ್ಲಿ ಸಾಯುತ್ತೇವೆಯೇ ಹೊರತು ಸೋತವರೆಂಬ ಹಣೆಪಟ್ಟಿ ಹೊತ್ತು ಭಾರತಕ್ಕೆ ಹಿಂತಿರುಗುವುದಿಲ್ಲ.”
ನಂತರ ನಡೆದಿದ್ದು ಪವಾಡವನ್ನು ನಿಜವಾಗಿಸಿದಂಥ ಶೌರ್ಯ. ಎದುರಿನಿಂದ ಜೋಧ್‌ಪುರದ ಸೈನಿಕರು ತುರ್ಕರ ಗುಂಡು ಗಳನ್ನೆದುರಿಸುತ್ತ ಸಾಗಿದರೆ, ಅತ್ತ ಮೈಸೂರಿನ ಯೋಧರು ಇನ್ನೊಂದು ಬದಿಯಿಂದ ಕಡಿದಾದ ಬೆಟ್ಟ ಹತ್ತಿ, ವೈರಿಗಳು ಊಹಿಸಿರದ ರೀತಿ ಅವರನ್ನು ಸುತ್ತುವರೆದು ಅವರದ್ದೇ ಫಿರಂಗಿಗಳನ್ನು ವಶಪಡಿಸಿಕೊಂಡರು. ಜರ್ಮನಿ ಬೆಂಬಲದ ತುರ್ಕರ ಸೇನೆ ಹಿಂದೆ ಸರಿಯಲೇಬೇಕಾಯಿತು. 3 ಸಾವಿರ ಚಿಲ್ಲರೆ ತುರ್ಕರು ಸೆರೆಯಾದರು. 17 ಫಿರಂಗಿ, 12 ಮಷಿನ್‌ಗನ್ ಇತ್ಯಾದಿಗಳನ್ನೆಲ್ಲ ವಶಪಡಿಸಿಕೊಳ್ಳಲಾಯಿತು.
ಆದರೆ ಇವಕ್ಕೆಲ್ಲ ಭಾರತೀಯರೂ ಬೆಲೆ ತೆತ್ತರು. ಮುಂಚೂಣಿ ಯಲ್ಲಿ ಸೆಣೆಸಿದ ದಳಪತ್ ಸಿಂಗ್ ವೀರ ಮರಣವಾಯಿತು. ನಂತರದ ಸಂಘರ್ಷಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಯಹೂದಿ ನೆಲ ಇಸ್ರೇಲಿನ ಉದಯಕ್ಕೆ ಬಲಿದಾನಗೈದ ಭಾರತೀಯ ಯೋಧರ ಸಂಖ್ಯೆ ಬರೋಬ್ಬರಿ 900.
ಈ ಬಲಿದಾನವನ್ನು ಇಸ್ರೇಲ್ ಮರೆತಿಲ್ಲ. ತನ್ನ ಪಠ್ಯಪುಸ್ತಕಗಳಲ್ಲಿ ಹೈಫಾ ವಿಮೋಚನೆಗೆ ಸೆಣೆಸಿದ ಭಾರತೀಯ ವೀರರ ಕತೆಗಳನ್ನು ಅಭಿಮಾನದಿಂದ ಕಟ್ಟಿಕೊಟ್ಟಿದೆ. ಹೈಫಾದಲ್ಲಿ ಬಲಿದಾನಗೈದ ಯೋಧರೆಲ್ಲರ ಹೆಸರು ಕೆತ್ತಿ ಸ್ಮಾರಕವನ್ನೂ ನಿರ್ಮಿಸಿದೆ. ಇತ್ತ, ನವದೆಹಲಿಯಲ್ಲಿ ತೀನ್ ಮೂರ್ತಿ ಚೌಕವು ಹೈಫಾಕ್ಕೆ ತೆರಳಿದ್ದ ಮೂರು ಪಡೆಗಳ ನೆನಪನ್ನೇ ಹೊತ್ತಿದೆ. ಆದರೆ ಈ ಬಗ್ಗೆ ಜನರಿಗೆ ಅಷ್ಟಾಗಿ ಅರಿವು ಮೂಡದ ಕಾರಣ, ಮೊನ್ನೆ ಏಪ್ರಿಲ್‌ನಲ್ಲಷ್ಟೇ ತೀನ್ ಮೂರ್ತಿ ಚೌಕವನ್ನು ತೀನ್ ಮೂರ್ತಿ ಹೈಫಾ ಚೌಕವೆಂದು ಮರು ನಾಮಕರಣ ಮಾಡಲಾಗಿದೆ.
ಭಾರತದ ಪ್ರಧಾನಿಯೊಬ್ಬರು ಇದೇ ಮೊದಲಿಗರಾಗಿ ಕಾಲಿಡು ತ್ತಿರುವ ಇಸ್ರೇಲ್ ಎಂಬ ದೇಶದ ಬುನಾದಿ ಇರುವುದೇ ನಮ್ಮ ಯೋಧರ ಬಲಿದಾನದ ಮೇಲೆ ಎಂಬ ಅರಿವೇ ರೋಮಾಂಚನ. ಇದಕ್ಕೆ ಮೀರಿದ ಸಾರ್ಥಕ್ಯ ಇನ್ನೇನಿದ್ದೀತು?
ಚೈತನ್ಯ ಹೆಗಡೆ