Advertisement
ಅವರು ಬುಧವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ಶ್ರೀ ಲಲಿತಾ ಪಂಚಮಿ ಮಹೋತ್ಸವ, ಶ್ರೀ ಚಂಡಿಕಾಯಾಗ, ಶ್ರೀ ಹನುಮಗಂಗಾ ಪುಷ್ಕರಿಣಿ ಸಮರ್ಪಣೆ ಕಾರ್ಯಕ್ರಮದ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ವಿದುಷಿ ಸಾವಿತ್ರಿ ಈಶ್ವರ ಭಟ್ ಅಮೈ, ಚಿತ್ರನಟ-ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ, ತುಳು ನಾಟಕ ರಚನೆಕಾರ- ನಿರ್ದೇಶಕ- ನಿರ್ಮಾಪಕ ಕೃಷ್ಣ ಜಿ. ಮಂಜೇಶ್ವರ, ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ, ಅಬ್ಬಕ್ಕ ಟಿ.ವಿ.ಯ ಆಡಳಿತ ನಿರ್ದೇಶಕ ಶಶಿಧರ ಪೊಯ್ಯತ್ತ ಬೈಲ್, ಯಕ್ಷಗಾನ ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲು ಅವರನ್ನು ಸ್ವಾಮೀಜಿಯವರು ಶ್ರೀ ಗುರುದೇವಾನುಗ್ರಹ ಪುರಸ್ಕಾರ ನೀಡಿ ಗೌರವಿಸಿದರು. ಶ್ರೀ ಹನುಮಗಂಗಾ ಪುಷ್ಕರಣಿಯ ಪ್ರಾಯೋಜಕರಾದ ಮುಂಬಯಿಯ ಉದ್ಯಮಿ ವಾಮಯ್ಯ ಬಿ. ಶೆಟ್ಟಿ-ರೇವತಿ ವಾಮಯ್ಯ ಶೆಟ್ಟಿ ದಂಪತಿ, ತಾಂತ್ರಿಕ ನಿರ್ವಹಣೆ ಮಾಡಿದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಶೋಕ್ ಕುಮಾರ್ ಎ. ಅವರನ್ನು ಸ್ವಾಮೀಜಿ ಗೌರವಿಸಿದರು.
Related Articles
Advertisement
ಪ್ರಮೀಳಾ ಬಾಕ್ರಬೈಲ್ ಹಾಗೂ ಶೋಭಾ ಬಾಕ್ರಬೈಲ್ ಅವರಿಗೆ ನೆರೆ ಪರಿಹಾರ ವಿತರಿಸಲಾಯಿತು.
ರೇಣುಕಾ ಎಸ್. ಶೆಟ್ಟಿ ಆಶಯಗೀತೆ ಹಾಡಿ, ಯಶವಂತ ವಿಟ್ಲ ನಿರೂಪಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾ ಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ವಂದಿಸಿದರು. ಸಾಯೀಶ್ವರಿ ಪಟ್ಲ, ಒಡಿಯೂರು ಶ್ರೀ ವಿ.ಸೌ.ಸ. ನಿ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ನಿತ್ಯಾನಂದ ಶೆಟ್ಟಿ ಮನವಳಿಕೆ, ಒಡಿಯೂರು ಜೈ ಗುರುದೇವ ಕಲಾಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಟಿ., ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ತಾ| ವಿಸ್ತರಣಾಧಿಕಾರಿ ಸದಾಶಿವ ಅಳಿಕೆ, ಒಡಿಯೂರು ಶ್ರೀ ಗುರುದೇವ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಯಪ್ರಕಾಶ್ ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಪ್ರೌಢಶಾಲಾ ಶಿಕ್ಷಕಿ ಸವಿತಾ ಅವರು ಶ್ರೀ ಗುರುದೇವಾನುಗ್ರಹ ಪುರಸ್ಕೃತರ ಪರಿಚಯ ಮಾಡಿದರು.
ಮೊಬೈಲ್ ಕೈಯಲ್ಲಿ, ಮಗು ರಿಕ್ಷಾದಲ್ಲಿ !ಇಂದು ಹೆತ್ತವರಿಗೆ ಮಕ್ಕಳಿಗಿಂತ ಮೊಬೈಲ್ ಹೆಚ್ಚು ಪ್ರಿಯವಾಗಿದೆ. ರಾತ್ರಿ-ಹಗಲು ಮೊಬೈಲಿನಲ್ಲೇ ಸಮಯ ಕಳೆಯುತ್ತಾರೆ. ಮಕ್ಕಳಿಗೆ ಸಮಯ ನೀಡುತ್ತಿಲ್ಲ. ಇತ್ತೀಚೆಗೆ ಮಗುವಿನೊಂದಿಗೆ ರಿಕ್ಷಾದಲ್ಲಿ ತೆರಳಿದ್ದ ಮಹಿಳೆ ರಿಕ್ಷಾದಿಂದಿಳಿದು ಮೊಬೈಲಲ್ಲಿ ಮಾತನಾಡುತ್ತ ಹೋಗಿದ್ದರು. ಮಗು ರಿಕ್ಷಾದಲ್ಲೇ ಬಾಕಿಯಾಗಿತ್ತು. ರಿಕ್ಷಾ ಚಾಲಕ ಮಗುವನ್ನು ಆಕೆಯ ಕೈಯಲ್ಲಿಟ್ಟು ಹೋದುದರಿಂದ ಅನಾಹುತ ಸಂಭವಿಸಲಿಲ್ಲ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು. ಅಖಂಡ ಭಾರತ
ಸಂತನಿಗೂ ಸಮಾಜದ ಋಣವಿದೆ. ಸನಾತನ ಸಂಸ್ಕೃತಿಯನ್ನು ಉಳಿಸಿದಾಗ ದೇಶ ಬೆಳಗಬಹುದು. ಅದಕ್ಕಾಗಿ ನಾವೆಲ್ಲರೂ ಸಂಸ್ಕೃತಿಯ ವಾರಸುದಾರರಾಗಬೇಕು. ಬದುಕು ಕಲೆಯಾಗಬೇಕು. ಕೌಶಲದಿಂದ ತುಂಬಿರಬೇಕು. ಅಖಂಡ ಭಾರತವನ್ನು ಕಾಣುವಂತಾಗಬೇಕು.
-ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಸಂಸ್ಥಾನ