Advertisement

ರಷ್ಯಾ-ಉಕ್ರೇನ್ ಯುದ್ಧ: ಬಾಲಕನ ಏಕಾಂಗಿ ಪಯಣ

01:37 AM Mar 08, 2022 | Team Udayavani |
ಉಕ್ರೇನ್‌ನಿಂದ ಹಲವಾರು ನಿರಾಶ್ರಿತರು ನೆರೆಯ ದೇಶಗಳಿಗೆ ಗುಂಪುಗುಂಪಾಗಿ ಹೋಗುತ್ತಿದ್ದಾರೆ. ಆದರೆ, ಉಕ್ರೇನ್‌ನಿಂದ ಇತ್ತೀಚೆಗೆ ಸ್ಲೊವೇಕಿಯಾಗೆ ಬಾಲಕನೊಬ್ಬ ಏಕಾಂಗಿಯಾಗಿ ತೆರಳಿದ್ದಾನೆ. ಕಾರಣಾಂತರ ಗಳಿಂದ ಆತನ ಹೆತ್ತವರು ಆತನ ಜೊತೆಗೆ ಬರಲಾಗಲಿಲ್ಲ.

ಹಾಗಾಗಿ, ಆ ಹುಡುಗ ಒಂಟಿಯಾಗಿ ಬೆನ್ನಿಗೆ ಬ್ಯಾಗೊಂದನ್ನು ಸಿಕ್ಕಿಸಿಕೊಂಡು, ಯುದ್ಧಪೀಡಿತ ಪ್ರದೇಶಗಳಲ್ಲಿ ಒಬ್ಬಂಟಿಯಾಗಿ ನಡೆಯುತ್ತಾ ಸ್ಲೊವೇಕಿಯಾ-ಉಕ್ರೇನ್‌ ಗಡಿಗೆ ತೆರಳಿದ್ದಾನೆ. ದಾರಿಯಲ್ಲಿ ತನಗೇನಾದರೂ ಆದರೆ, ಮನೆಯವರಿಗೆ ಸುದ್ದಿ ಮುಟ್ಟಿಸಲಿ ಎಂಬ ಕಾರಣದಿಂದ ಕೈ ಮೇಲೆ ಹೆತ್ತವರ ಫೋನ್‌ ನಂಬರ್‌ಗಳನ್ನು ಆತ ಬರೆದುಕೊಂಡಿದ್ದ.

Advertisement

ಅಂತೂ ಇಂತು ಸುರಕ್ಷಿತವಾಗಿ ಗಡಿಗೆ ಬಂದ ಆತನನ್ನು ಸ್ಲೊವೇಕಿಯಾದ ಸ್ವಯಂ ಸೇವಕರು ಆಹಾರ, ನೀರು ಕೊಟ್ಟು ಬರಮಾಡಿಕೊಂಡಿದ್ದಾರೆ. ಹುಡುಗ ಸುರಕ್ಷಿತವಾಗಿದ್ದಾನೆಂದು ಅಲ್ಲಿನ ವಿದೇಶಾಂಗ ಇಲಾಖೆ, ಆತನ ಫೋಟೋ ಸಹಿತ ಟ್ವೀಟ್‌ ಮಾಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next