ಪಿರಿಯಾಪಟ್ಟಣ: ವೈಯಕ್ತಿಕ ಸ್ವತ್ಛತೆ ಜೊತೆಗೆ ತಮ್ಮ ಗ್ರಾಮಗಳ ಸ್ವತ್ಛತೆಗೆ ಯುವಕರು ಮುಂದಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಕನಸಿನ ಸ್ವತ್ಛ ಭಾರತ ಆಗುವುದರಲ್ಲಿ ಸಂದೇಹವಿಲ್ಲ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್.ಟಿ.ಕೃಷ್ಣಪ್ರಸಾದ್ ಹೇಳಿದರು. ತಾಲೂಕಿನ ಮಲಗನಕೆರೆ ಗ್ರಾಮದಲ್ಲಿ ತಾಲೂಕು ಯುವ ಮೋರ್ಚ ಘಟಕದಿಂದ ಹಮ್ಮಿ ಕೊಂಡಿದ್ದ ಸ್ವತ್ಛ ಭಾರತ ಅಭಿಯಾನ, ಸ್ವತ್ಛ ಭಾರತ- ಸ್ವತ್ಛ ಪಿರಿಯಾಪಟ್ಟಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವತ್ಛ ಭಾರತ ಪರಿಕಲ್ಪನೆಯೇ ಮಹತ್ತರ ವಾದುದು ನರೇಂದ್ರ ಮೋದಿ ಸ್ವತಃ ಪೊರಕೆ ಹಿಡಿದು ಚಾಲನೆ ನೀಡಿದ ದಿನದಿಂದ ದೇಶದಲ್ಲಿ ಸ್ವತ್ಛತೆಯಲ್ಲಿ ಸಂಚಲನ ಮೂಡಿಸಿದೆ. ಗ್ರಾಮದ ಯುವಕರು ಸಂಘಗಳನ್ನು ಕಟ್ಟಿಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯವಾದುದು, ಮುಂದಿನ ದಿನಗಳಲ್ಲಿ ಸಂಸದರ ಅನುದಾನದಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸು ವುದಾಗಿ ತಿಳಿಸಿದರು.
ಗ್ರಾಮದ ಯಜಮಾನರಾದ ವಿಜಯಕುಮಾರ್ ಮಾತನಾಡಿ, ತಾಲೂಕಿನ ಗಡಿ ಗ್ರಾಮವೆಂದು ಜನಪ್ರತಿನಿಧಿಗಳಿಂದ ಹಾಗೂ ಅಧಿಕಾರಿಗಳಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ನಮ್ಮ ಗ್ರಾಮಕ್ಕೆ ಬಿಜೆಪಿ ಯುವ ಮೋರ್ಚಾ ಘಟಕದ ಪದಾಧಿಕಾರಿಗಳು ಹಾಗೂ ಊರಿನ ಯುವಕರು ನಮ್ಮೂರಿನ ಹಬ್ಬದ ಸನಿಹದಲ್ಲೇ ಗ್ರಾಮದ ಚರಂಡಿಗಳಿಗಿಳಿದು ಸ್ವತ್ಛತೆಗೆ ಮುಂದಾಗಿರುವುದು ಸಂತೋಷ ವುಂಟುಮಾಡಿದೆ. ಊರಿನ ಯುವಕರು ಮಾದರಿಯಾಗಿದ್ದು ಅವರೊಂದಿಗೆ ತಾವು ಸಹಕರಿಸಿ ತಿಂಗಳಿಗೊಮ್ಮೆ ಸ್ವತ್ಛತಾ ಕಾರ್ಯ ಕೈಗೊಂಡು ಗ್ರಾಮ ವನ್ನು ಸ್ವತ್ಛ ಗ್ರಾಮ ವಾಗಿಡುವುದಾಗಿ ಹೇಳಿದರು.
ಬಿಜೆಪಿ ತಾ. ಅಧ್ಯಕ್ಷ ಪಿ.ಜೆ.ರವಿ, ಯುವ ಮೋರ್ಚಾ ಅಧ್ಯಕ್ಷ ಲಕ್ಷ್ಮೀನಾರಾಯಣ, ಉಪಾಧ್ಯಕ್ಷ ಮಲ್ಲೇಶ.ಎಸ್, ಪ್ರ.ಕಾರ್ಯದರ್ಶಿ ಮಹೇಶ್, ಕಾರ್ಯದರ್ಶಿ ಆನಂದ್. ಕೆ. ಕಾನೂನು, ಯೋಗೇಶಾರಾಧ್ಯ, ಸೋಮಶೇಖರ್, ವಿಶ್ವನಾಥ.ಪಿ.ವಿ. ಗ್ರಾಮದ ಪಟೇಲ್ ಶಿವಶಂಕರ್, ವಾಟರ್‌ಮನ್ ಲೋಕೇಶ್, ಮುಖಂಡರಾದ ಶಾವಂದಪ್ಪ, ರಾಜಾರಾಧ್ಯ, ವಿಶ್ವನಾಥ, ಮರಿದೇವಾರಾಧ್ಯ, ಬಸವ ಬಳಗ ಹಾಗೂ ಮಹದೇಶ್ವರ ಯುವಕ ಸೇನೆಯ ಯುವಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.