Advertisement
ಇಲ್ಲಿನ ರಾಷ್ಟ್ರೊತ್ಥಾನ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ ನ ಕೊನೆಯ ದಿನವಾದ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೋವಿಡ್ ನಿಂದಾಗಿ ಶಾಖೆಗಳು ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಆರಂಭಗೊಂಡಿದ್ದು, ಸದ್ಯಕ್ಕೆ ದೇಶಾದ್ಯಂತ ಒಟ್ಟು 54,382 ಆರ್‌ಎಸ್‌ಎಸ್ ಶಾಖೆಗಳು ನಡೆಯುತ್ತಿವೆ. ಈ ಪೈಕಿ 34 ಸಾವಿರ ಪ್ರತಿದಿನ ಶಾಖೆಗಳು, 12,708 ವಾರದ ಶಾಖೆಗಳು ಹಾಗೂ 7900 ತಿಂಗಳ ಶಾಖೆಗಳು ನಡೆಯುತ್ತಿವೆ. 1925 ರಲ್ಲಿ ಆರಂಭಗೊಂಡ ಆರ್‌ಎಸ್‌ಎಸ್ ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ರಚಿಸಿರುವ 6494 ಮಂಡಳಗಳಿಗೆ (ಬ್ಲಾಕ್) ತನ್ನ ಕಾರ್ಯ ವಿಸ್ತರಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
Related Articles
Advertisement
ಈಗಾಗಲೇ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ನಿಮಿತ್ತ ಆರ್‌ಎಸ್‌ಎಸ್ ಕೂಡ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇತರ ಸಂಘಟನೆಗಳ ಜೊತೆ ಕೂಡಿ ಕೆಲಸ ಮಾಡಲಿದೆ. ಕಾಲಾಪಾನಿಯಾದ ಸ್ವಾತಂತ್ರ್ಯ ಸೇನಾನಿಗಳು ಸೇರಿದಂತೆ ತೆರೆಯಲ್ಲಿಯೇ ಕೆಲಸ ಮಾಡಿದ ಅನೇಕರು ಇನ್ನೂ ಪ್ರಚಾರಕ್ಕೆ ಬಂದಿಲ್ಲ. ಅಂತಹ ಮಹನೀಯರಿಗೆ ಈ ಉತ್ಸವದಲ್ಲಿ ಹೆಚ್ಚಿನ ಒತ್ತು ಪ್ರಚಾರ ಸಿಕ್ಕಬೇಕಿದ್ದು, ಈ ಕಾರ್ಯವನ್ನು ಆರ್‌ಎಸ್‌ಎಸ್ ಮಾಡಲಿದೆ ಎಂದರು.
ಪೋಪ್ ಭೇಟಿ ತಪ್ಪಲ್ಲ : ಪ್ರಧಾನಿ ನರೇಂದ್ರ ಮೋದಿ ಅವರು ರೋಮ್‌ನಲ್ಲಿ ಪೋಪ್ ಅವರನ್ನು ಭೇಟಿ ಮಾಡಿದ್ದು ತಪ್ಪಲ್ಲ. ವಸದೈವಕಂ ಕುಟುಂಬಕಂ ಎನ್ನುವ ತತ್ವ ನಮ್ಮದು ಒಂದು ದೇಶದ ಮುಖ್ಯಸ್ಥ ಇನ್ನೊಂದು ದೇಶದ ಮುಖ್ಯಸ್ಥರನ್ನು ಭೇಟಿ ಮಾಡುವುದು ನಾಗರಿಕ ಸಮಾಜದ ಲಕ್ಷಣ, ಎಲ್ಲಾ ಧರ್ಮದ ಜನರನ್ನು ಭೇಟಿಯಾಗುವುದರಲ್ಲಿ ತಪ್ಪಿಲ್ಲ. ಇಷ್ಟಕ್ಕೂ ಪ್ರಧಾನಿ ಜಗತ್ತಿನ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿ ನಮ್ಮ ದೇಶದ ಗೌರವ ಹೆಚ್ಚಿಸಿದ್ದಾರೆ ಎಂದು ಹೊಸಬಾಳೆ ಅವರು ಮೋದಿ-ಪೋಪ್ ಭೇಟಿಯನ್ನು ಸಮರ್ಥಿಸಿಕೊಂಡರು.