Advertisement

ಅರಮನೆ ಅಂಗಳದಲ್ಲಿ ದಿ ರಾಯಲ್‌ ಕಿಡ್ಸ್‌ ಫೆಸ್ಟ್‌

12:08 PM Nov 19, 2018 | Team Udayavani |

ಮೈಸೂರು: ಪ್ರವಾಸಿಗರಿಂದ ತುಂಬಿರುತ್ತಿದ್ದ ಮೈಸೂರು ಅರಮನೆಯಲ್ಲಿ ಭಾನುವಾರ ಮಕ್ಕಳದೇ ಕಲರವ. ಮಕ್ಕಳ ದಿನಾಚರಣೆ ಅಂಗವಾಗಿ ಭೇರುಂಡ ಸಂಸ್ಥೆಯು ಅರಮನೆ ಅಂಗಳದಲ್ಲಿ ಏರ್ಪಡಿಸಿದ್ದ ರಾಯಲ್‌ ಕಿಡ್ಸ್‌ ಫೆಸ್ಟ್‌ನಲ್ಲಿ ಭಾಗವಹಿಸಿದ ಮಕ್ಕಳು, ಹಾಳೆಯ ಮೇಲೆ ಅರಮನೆ, ಆನೆಯ ಮೇಲೆ ಅಂಬಾರಿ, ರಾಜ-ಮಹಾರಾಜರ ಚಿತ್ರಗಳನ್ನು ಬಿಡಿಸಿ ನೋಡುಗರ ಗಮನ ಸೆಳೆದರು.

Advertisement

ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು, ಚಿತ್ರಪಟವೊಂದರ ಟೋಪಿಗೆ ಬಣ್ಣ ಹಚ್ಚುವ ಮೂಲಕ ಮಕ್ಕಳ ಹಬ್ಬಕ್ಕೆ ಚಾಲನೆ ನೀಡಿ, ಮೈಸೂರಿನ ಪರಂಪರೆಯನ್ನು ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಪೂರಕವಾಗಿವೆ. ಇಂದಿನ ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಮಕ್ಕಳು ಆಗಮಿಸಿರುವುದು ಸಂತಸ ತಂದಿದೆ ಎಂದರು.

ಉದ್ಯಮಿ ಆರ್‌.ಗುರು ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ಸಂತೋಷಗೊಳಿಸುವುದರ ಜೊತೆಗೆ ಅವರಿಗೆ ಪರಂಪರೆಯ ಕುರಿತ ಮಾಹಿತಿ ತಲುಪಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ ಎಂದು ಆಶಿಸಿದರು.

ದಿ ರಾಯಲ್‌ ಕಿಡ್ಸ್‌ ಫೆಸ್ಟ್‌ ಸ್ಪರ್ಧೆಯಲ್ಲಿ ನಗರದ ವಿವಿಧ ಶಾಲೆಗಳಿಂದ 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಚಿತ್ರ ಕಲಾವಿದ ಬಾದಲ್‌ ನಂಜುಂಡಸ್ವಾಮಿ, ಕಲಿಸು ಫೌಂಡೇಷನ್‌ನ ನಿಖೀಲೇಶ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next