Advertisement
ಮೂರ್ತಿಗಳಿಗೆ ಮುಕ್ತಿ ಎಂದು? ಕುತುಬ್ ಮಿನಾರ್‌ನ ಅನತಿ ದೂರದಲ್ಲಿಯೇ ಇರುವ ಮಸೀದಿಯ ಗೋಡೆಗಳಿಗೆ ಅಂಟಿಕೊಂಡಿರುವಂತೆ ಗಣೇಶನ 2 ಶಿಲ್ಪಗಳಿವೆ. ಒಂದಕ್ಕೆ ಉಲ್ಟಾ ಗಣೇಶ ಮತ್ತೊಂದಕ್ಕೆ ಪಂಜರದ ಗಣೇಶ ಎಂಬ ಹೆಸರಿವೆ. ಉಲ್ಟಾ ಗಣೇಶನು ತಲೆಕೆಳಗಾಗಿರುವ ಗಣೇಶ ಮೂರ್ತಿಯಾಗಿದ್ದು ಇದು ಉಬ್ಬು ಶಿಲ್ಪದ ಮಾದರಿಯಲ್ಲಿದೆ. ಇದು ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ಖುವಾತ್ ಉಲ್ ಇಸ್ಲಾಂ ಎಂಬ ಮಸೀದಿಯ ದಕ್ಷಿಣ ದಿಕ್ಕಿನ ಗೋಡೆಯಲ್ಲಿ ಅಡಕವಾಗಿದೆ. ಮತ್ತೊಂದು, ಇದೇ ಮಸೀದಿಯ ಮತ್ತೊಂದು ಪಾರ್ಶ್ವದಲ್ಲಿ ನೆಲಕ್ಕಿಂತ ಕೆಲವು ಇಂಚು ಎತ್ತರದಲ್ಲಿದೆ. ಈ ಮೂರ್ತಿಯನ್ನು ಯಾರೂ ಸ್ಪರ್ಶಿಸಬಾರದು ಎಂದು ಗಣೇಶ ಮೂರ್ತಿಗಳಲ್ಲೊಂದಕ್ಕೆ ಕಬ್ಬಿಣದ ಪಂಜರ ಜೋಡಿಸಿರುವ ಕಾರಣ ಅದಕ್ಕೆ ಪಂಜರದ ಗಣೇಶ ಎಂಬ ಹೆಸರು ಬಂದಿದೆ.
ಗಣೇಶನ ಮೂರ್ತಿಗಳಲ್ಲದೇ, ಇಲ್ಲಿ ಅನೇಕ ಶಿಲ್ಪಗಳಿವೆ. ರಾಮಾಯಣ ಪುರಾಣ ಬಿಂಬಿಸುವ ಶಿಲ್ಪಗಳೂ ಇವೆ. ವಿಕಾರಗೊಂಡ ದೈವ ಶಿಲ್ಪಗಳಂತೂ ಸಾಕಷ್ಟಿವೆ. ಸರಪಳಿ ಗಂಟೆಗಳ ಶಿಲ್ಪವಂತೂ ನೋಡುಗರ ಮನ ತಣಿಸುತ್ತವೆ. ಇತಿಹಾಸಕಾರರ ಭಿನ್ನಮತ
ಕೆಲವು ಇತಿಹಾಸಕಾರರ ಪ್ರಕಾರ, ಮಿನಾರ್ ಇರುವ ಜಾಗದಲ್ಲಿ ಕುತುಬ್ ದೇಗುಲಗಳ ಸಮುಚ್ಚಯವೊಂದಿತ್ತು. ಈ ಬೃಹತ್ ಸ್ತಂಭದ ನಿರ್ಮಾಣಕ್ಕಾಗಿ ಈ ಜಾಗದಲ್ಲಿದ್ದ 27 ಹಿಂದೂ ದೇಗುಲಗಳು ಹಾಗೂ ಒಂದು ಜೈನ ದೇವಾಲಯಗಳನ್ನು ಧ್ವಂಸಗೊಳಿಸಿ, ಅವುಗಳ ಅವಶೇಷಗಳನ್ನು ಬಳಸಿಯೇ ಕುತುಬ್ ಮಿನಾರ್ ಕಟ್ಟಲಾಗಿದೆ ಎಂದು ಹೇಳಲಾಗಿದೆ.
Related Articles
Advertisement