Advertisement

ಆಧುನಿಕತೆಯ ಬೇರು ಹಳತರಲ್ಲಿದೆ : ವಿಜಯ್‌ ರಾಘವೇಂದ್ರ

11:15 PM Jan 17, 2020 | Sriram |

ಉಡುಪಿ: ಭಾಷೆ, ಬಟ್ಟೆ, ಅನುಕೂಲತೆಗಳನ್ನು ಹೆಚ್ಚಿಸಿಕೊಂಡ ಕೂಡಲೇ ನಾವು ಆಧುನಿಕರಾಗುವುದಿಲ್ಲ. ಹಳೆಯದನ್ನೂ ಅನುಸರಿಸುತ್ತ ಇವತ್ತಿಗೂ ಬೇಕಾಗುವಂತೆ ಬದುಕುವುದೇ ಆದರ್ಶ ಜೀವನ. ಆಧುನಿಕತೆಯ ಬೇರು ಹಳತರಲ್ಲಿದೆ ಎಂದು ಖ್ಯಾತ ಚಲನಚಿತ್ರ ನಟ ವಿಜಯ ರಾಘವೇಂದ್ರ ಹೇಳಿದರು.

Advertisement

ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯು ಆಯೋಜಿಸಿದ್ದ “ಕಟ್ಟೆ ಪಂಚಾತಿಕೆ ‘ಸಾಧಕರೊಂದಿಗೆ ಮಾತುಕತೆ ಸರಣಿಯ ಎರಡನೇ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ದುಡ್ಡು ಮತ್ತು ಅಭಿರುಚಿಯ ಕುರಿತು ಅನೇಕರಲ್ಲಿ ಗೊಂದಲಗಳಿವೆ. ಹಣದ ಹಿಂದೆ ಹೋದಾಗ ಬುದ್ಧಿ ಕೆಲಸ ಮಾಡುತ್ತದೆಯೇ ವಿನಾ ಮನಸ್ಸು ಜತೆಗಿರುವುದಿಲ್ಲ. ನಮ್ಮ ಆಸಕ್ತಿಯ ಹಿಂದೆಯೇ ಬಿದ್ದಾಗ ಕಷ್ಟಗಳೂ ಕೇವಲವಾಗಿ ಬಿಡುತ್ತವೆ. ಎತ್ತರದ ಸಾಧನೆ ಸಾಧ್ಯ. ಸೋಲು ಬದುಕಿನ ಒಂದು ಭಾಗವಷ್ಟೇ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಜಿ. ವಿಜಯ ಅಧ್ಯಕ್ಷತೆ ವಹಿಸಿದ್ದರು. ಮಾಲ್ಗುಡಿ ಡೇಯ್ಸ… ಚಿತ್ರದ ನಿರ್ದೇಶಕ ಕಿಶೋರ್‌ ಮೂಡಬಿದ್ರೆ, ನಿರ್ಮಾಪಕ ರವಿಶಂಕರ್‌, ನಾಯಕಿ ಗ್ರೀಷ್ಮಾ ಉಪಸ್ಥಿತರಿದ್ದರು.

ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಅಧ್ಯಕ್ಷ ಶ್ರೇಯಸ್‌ ಕೋಟ್ಯಾನ್‌ ನಿರೂಪಿಸಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಹಿಮಾ ಶೆಣೈ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next