Advertisement
ಇದು ಸತ್ಯವೂ ಕೂಡ. ಆದರೆ ಹೊರದೇಶಗಳು ರಸ್ತೆ ಅಭಿವೃದ್ಧಿಗೊಳಿಸುವುದರ ಜತೆಗೆ ಅಪಘಾತಗಳ ತಡೆಗೆ ವಿನೂತನ ಯೋಜನೆಗಳನ್ನು ಹೊರ ತಂದಿವೆ. ಹೌದು ಅತಿಯಾದ ವೇಗದಿಂದ ನಿಯಂತ್ರಣ ತಪ್ಪಿ ಕಮರಿಗೆ ಬೀಳುವುದನ್ನು ತಪ್ಪಿಸಲು ಕೊರಿಯಾ ದೇಶದಲ್ಲಿ ಆವಿಷ್ಕರಿಸಿದ ಯುರೆಥೇನ್ ರೋಲರ್ಸ್ ಎಲ್ಲ ದೇಶಗಳಿಗೂ ಅಳವಡಿಸಲು ಅನುಕರಣೀಯವಾಗಿದೆ. ಇದು ಕೂಡ ಸಂಚಾರ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಬೇಕಾದ ಮಾದರಿ ಯೋಜನೆಯಾಗಿದೆ. ಈ ಯೋಜನೆಯ ಉಪಯೋಗವೇನು, ಇದರ ಬಗೆಗಿನ ಮಾಹಿತಿ ತಿಳಿಯುವುದು ಅತ್ಯಗತ್ಯ.
ರೋಲಿಂಗ್ ಬ್ಯಾರಿಯರ್ಸ್ ಅನಿಯಂತ್ರಿತ ಚಲಿಸುವ ವಾಹನಗಳನ್ನು ಮರು ನಿರ್ದೇಶಿಸಲು ಮತ್ತು ಅದನ್ನು ಮತ್ತೆ ಸಮತೋಲನಗೊಳಿಸಲು ರಸ್ತೆ ಸುರಕ್ಷತೆಗೆ ಇತ್ತೀಚಿನ ಉದಯೋನ್ಮುಖ ತಂತ್ರಜ್ಞಾನಗಳು ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಹೊಸ ಮಾರ್ಗವೇ ಯುರೆಥೇನ್ ರೋಲರ್ಸ್. ಆದಾಗ್ಯೂ, ಕೊರಿಯಾ ದೇಶದಲ್ಲಿ ಆವಿಷ್ಕರಿಸಿದ ಯುರೆಥೇನ್ ರೋಲರ್ಸ್ ಅನಿಯಂತ್ರಿತ ಚಲಿಸುವ ವಾಹನಗಳನ್ನು ಮರು ನಿರ್ದೇಶಿಸಲು ಮತ್ತು ಅದನ್ನು ಮತ್ತೆ ಸಮತೋಲನಗೊಳಿಸಲು ಅಪಘಾತಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಈ ರೋಲಿಂಗ್ ಅಡೆತಡೆಗಳು ಅಪಘಾತದ ಸಮಯದಲ್ಲಿ ಮೆತ್ತನೆಯ ಪರಿಣಾಮವನ್ನು ಒದಗಿಸುತ್ತವೆ. ಹೆಚ್ಚಿನ ವೇಗದ ಪರಿಣಾಮವನ್ನು ಕಡಿಮೆ ಮಾಡುತ್ತವೆ. ಜಿಗಿತದಿಂದ ವಸ್ತು ಸ್ಥಿತಿಸ್ಥಾಪಕತ್ವವನ್ನು ರೂಪಿಸುತ್ತದೆ ಮತ್ತು ಇತರ ಕಾರ್ಯಕ್ಷಮತೆಯ ಗುಣಲಕ್ಷಣಗಳನ್ನು ಹೊಂದಿದ್ದು ಅದು ಪ್ರಯಾಣಿಕರಿಗೆ ಹೆಚ್ಚಿನ ಗಾಯವಾಗುವುದನ್ನು ತಪ್ಪಿಸುತ್ತದೆ. ಇದು ಒಂದು ರೀತಿಯಲ್ಲಿ ಮುಂದುವರಿದ ತಂತ್ರಜ್ಞಾನದಿಂದ ಕೂಡಿದ್ದು ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಈ ಯೋಜನೆಯೂ ಎಲ್ಲ ದೇಶಗಳಿಗೆ ಪೂರಕವಾಗಲಿದೆ. ನಮ್ಮ ನಗರದಲ್ಲೂ ಅಳವಡಿಕೆಯಾಗಲಿ
ರೋಲಿಂಗ್ ಬ್ಯಾರಿಯರ್ಸ್ ನಮ್ಮ ನಗರದಲ್ಲೂ ಪರಿಚಯ ಮಾಡಿಸಬಹುದು. ನಮ್ಮಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವಾಗ ಇಂತಹ ವಿನೂತನ ಯೋಜನೆಗಳು ಬಂದರೆ ನಗರ ದೃಷ್ಟಿಕೋನದಲ್ಲಿ ಉತ್ತಮವಾಗಬಹುದು.
Related Articles
ಈ ರೋಲರ್ ಅಡೆತಡೆಗಳ ಅನುಷ್ಠಾನವು ಸಮತಟ್ಟಾದ ರಸ್ತೆಗಳು, ಬಾಗಿದ ರಸ್ತೆ ವಿಭಾಗಗಳು, ಇಳಿಜಾರುಗಳು, ಪಾರ್ಕಿಂಗ್ ಗ್ಯಾರೇಜ್‌ನಲ್ಲಿ ಪ್ರವೇಶದ್ವಾರಗಳು, ನಿರ್ಗಮನ ಇಳಿಜಾರು ಇತ್ಯಾದಿಗಳಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Advertisement
- ವಿಶ್ವಾಸ್ ಅಡ್ಯಾರ್