Advertisement
ದೇಶದಲ್ಲಿ ಸಾಮಾಜಿಕ ಬದಲಾವಣೆ ಅಂದರೆ ಒಂದು ಚೌಕಟ್ಟನ್ನು ಹಾಕಿಕೊಂಡು ಯಾರೋ ಹೇಳಿದ ಹಾದಿ ಹಿಡಿದು ಹೊರಟಿದ್ದೇವೆ. ತಪ್ಪು ಗ್ರಹಿಕೆ ಮತ್ತು ಉಹಾಪೋಹದ ಮಾತುಗಳನ್ನು ಕೇಳುತ್ತಾ ಸ್ವಂತ ಆಲೋಚನೆ ಇಲ್ಲದೆ, ಅದೇ ಸರಿ ಎಂದು ಹೊರಟಿದ್ದೇವೆ. ಅದು ಸರಿ ಮಾಡಿಕೊಂಡಾಗ ಮಾತ್ರ ನಾವು, ಮೊದಲು ಬದಲಾವಣೆ ಕಾಣಲು ಸಾಧ್ಯ.
Related Articles
Advertisement
ಪ್ರಶ್ನಿಸಿ? :
ನಾವು ಯಾವುದೇ ವಿಚಾರವನ್ನು ಜೀವನದಲ್ಲಿ ರೂಢಿಸಿಕೊಳ್ಳುವ ಮುನ್ನ ಅದರ ಬಗ್ಗೆ ಪ್ರಶ್ನಿಸಿಕೊಳ್ಳಬೇಕಿದೆ. ಅದು ಸಾಮಾಜಿಕ ಸಾಮರಸ್ಯಕ್ಕೆ ಒಳಿತಾಗಬಹುದೇ ಅಥವಾ ನನ್ನ ಆದರ್ಶ ಜೀವನಕ್ಕೆ ಪೂರಕವಾಗಬಲ್ಲುದೇ ಎಂದು ಗಮನಹರಿಸಬೇಕಿದೆ. ಇದರಿಂದ ನಾವು ನಮ್ಮನ್ನು ನಾವು ಪ್ರಶ್ನಿಸಿ, ಸ್ವವಿಮರ್ಶೆ ಮಾಡಿಕೊಂಡಾಗ ಮಾತ್ರ ನಮ್ಮ ವಿಚಾರ ಮತ್ತು ಜೀವನ ಮಾದರಿಯಾಗಬಲ್ಲುದು. ಇದರಿಂದ ಬದಲಾವಣೆ ಸಾಧ್ಯವಾಗಬಹುದು. ಯುವಜನರಿಂದ ಮುಖ್ಯವಾಗಿ ಸಮಾಜವನ್ನು ಕಟ್ಟುವ ಒಂದುಗೂಡಿಸುವ ಬದಲಾವಣೆ ತರುವ ಅವಕಾಶವಿದೆ. ಹಾಗಾಗಿ ಯಾವುದು ತಪ್ಪು, ಯಾವುದು ಸರಿ ಎನ್ನುವಂತದ್ದು ಯುವಜನರು ತೀರ್ಮಾನಿಸಬೇಕು. ಬೇರೆಯವರು ಹೇಳಿದ್ದನ್ನು ಅವರದ್ದೇ ಪಾಲಿಸಿದರೆ ನಾವು ಗುಲಾಮರಾಗುವುದರಲ್ಲಿ ಸಂದೇಹವಿಲ್ಲ. ನಿಜವಾಗಿಯೂ ದೇಶ, ಸಮಾಜ ಏನು ಎನ್ನುವಂಥದ್ದು ನಾವು ಅರಿತುಕೊಳ್ಳೋಣ. ನಮ್ಮ ಜೀವನದ ಮೊದಲ ಪಾಠ ನಮ್ಮ ಬದುಕು ನಾವು ಬಂದಂತಹ ಕುಟುಂಬದ ಹಿನ್ನೆಲೆ ನಡವಳಿಕೆ. ಜನರೊಂದಿಗಿನ ಬೆಳೆಸುವ ಪ್ರೀತಿ, ವಿಶ್ವಾಸ, ಮಾನವ ಪರವಾದ ಕಾಳಜಿ. ಇನ್ನೊಬ್ಬರ ಕಷ್ಟಗಳನ್ನು ಪರಿಗಣಿಸಿ ನಮ್ಮ ಕಷ್ಟ ಎಂದುಕೊಂಡು ಅದನ್ನು ಪರಿಹರಿಸಿಕೊಂಡಾಗ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಈ ಎಲ್ಲ ಆಲೋಚನೆಗಳನ್ನು ಇಟ್ಟುಕೊಂಡು ಮುಂದೆ ಸಾಗೋಣ.
ಶಂಕರ್ ಡಿ. ಸುರಳ್
ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕೊಪ್ಪಳ