ಸಿರವಾರ: ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದ್ದು ಎಂದು ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಮಹಿಳಾ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ “ನಾ ನಾಯಕಿ-ನಾರಿಶಕ್ತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಇಂದಿರಾ ಗಾಂಧಿ, ಸೋನಿಯಾ ಗಾಂಧಿಯಂತಹ ಧಿಧೀಮಂತ ನಾಯಕರ ಪಕ್ಷ. ನಮ್ಮ ಪಕ್ಷದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ನೀಡಲಾಗಿದೆ. ತಾಲೂಕು ಅಧ್ಯಕ್ಷೆ ರೇಣುಕಾ ಅವರು ಮಹಿಳೆಯರನ್ನು ಸಂಘಟಿಸುವುದರ ಮೂಲಕ ತಾವು ಸಹ ಪುರುಷರಿಗೆ ಕಡಿಮೆ ಇಲ್ಲ ಎಂಬುವುದನ್ನು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವುದರ ಮೂಲಕ ತೋರಿಸುತ್ತಿರುವುದು ಶ್ಲಾಘನೀಯ ಎಂದರು.
ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಎನ್ ಮಾತನಾಡಿ, ಮಹಿಳೆಯರು ಪುರುಷರ ಸರಿಸಮಾನವಾಗಿ ಪಕ್ಷ ಸಂಘಟನೆಗೆ ದುಡಿಯಬೇಕು. ಮಹಿಳಾ ಪದಾಧಿಕಾರಿಗಳು ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು. ಮುಂಬರುವ ಎಲ್ಲ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಮಹಿಳೆ ಪಾತ್ರ ಪ್ರಮುಖವಾದದ್ದು ಎಂಬುವುದನ್ನು ತೋರಿಸಬೇಕು. ಮಹಿಳಾ ಘಟಕದ ಬೆಳವಣಿಗೆಗೆ ಪಕ್ಷದ ಹಿರಿಯರ ಸಹಕಾರವು ಅಗತ್ಯ ಎಂದರು.
ಹಿರಿಯ ಮುಖಂಡ ಚುಕ್ಕಿ ಸೂಗಪ್ಪ ಸಾಹುಕಾರ, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ ಬೆಣ್ಣೆ ಮಾತನಾಡಿದರು. ಪ್ರತಿಭಾರೆಡ್ಡಿ, ಮುಖಂಡರಾದ ಶಿವುಕುಮಾರ ಚುಕ್ಕಿ, ಕಲ್ಲೂರು ಬಸವರಾಜ ನಾಯಕ, ರಮೇಶ ದರ್ಶನಕರ್, ದಾನನಗೌಡ, ಶಿವಶರಣ ಅರಕೇರಿ, ಅನಿತಾ ಗಣದಿನ್ನಿ, ಚಂದ್ರಕಲಾ ಇದ್ದರು.