Advertisement

ಸಮಾಜ ತಿದ್ದುವಲ್ಲಿ ಪತ್ರಿಕೆ ಪಾತ್ರ ಹಿರಿದು

09:25 AM Jul 29, 2019 | Suhan S |

ಯಲ್ಲಾಪುರ: ಸಮಾಜದ ಬಗ್ಗೆ ಕಳಕಳಿ ಹೊಂದಿದ ಪತ್ರಕರ್ತ ಸೂಕ್ಷ್ಮ ಮನೋಭಾವ ಹೊಂದಿರುವ ಮೂಲಕ ಪ್ರತಿಯೊಂದನ್ನೂ ವಿಮರ್ಶಾತ್ಮಕವಾಗಿ ಗ್ರಹಿಸಿ ಸ್ವೀಕರಿಸುವ ಮನೋಭಾವದ ಪ್ರವೃತ್ತಿಯನ್ನು ಹೊಂದಿರಬೇಕು. ತನ್ನಿಚ್ಚೆ ಬಿಂಬಿಸದೇ ಸಮಾಜಮುಖೀ ವಿಚಾರಧಾರೆ ಆತನದ್ದಾಗಿರಬೇಕು ಎಂದು ಹಿರಿಯ ರಂಗಕರ್ಮಿ ರಂಗಸಮೂಹದ ಅಧ್ಯಕ್ಷ ರಾಮಕೃಷ್ಣ ಧುಂಡಿ ಹೇಳಿದರು.

Advertisement

ರವಿವಾರ ತಾಲೂಕಿನ ಮಂಚಿಕೇರಿಯ ಉಮಾಶಂಕರ ಆವಾರದದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಗೌರವ ಸಂಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಹಾಗೂ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ಪದ್ಮಾಕರ ಫಾಯ್ದೆ ಇಂದಿನ-ಮುಂದಿನ ಪತ್ರಕರ್ತರಿಗೆ ಆದರ್ಶಪ್ರಾಯರಾಗಿದ್ದಾರೆ. ಇಳಿವಯಸ್ಸಿನ ಕಷ್ಟವನ್ನರಿತ ಸಂಘಟನೆ ಅವರ ಮನೆಯಲ್ಲಿಯೇ ಸನ್ಮಾನಿಸುವ ಮೂಲಕ ಔಚಿತ್ಯಪೂರ್ಣ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ ಎಂದರು.

ಹಿರಿಯ ಪತ್ರಕರ್ತ, ನಿವೃತ್ತ ಶಿಕ್ಷಕ ಪದ್ಮಾಕರ ಫಾಯ್ದೆ ಹಾಗೂ ಪತ್ನಿ ಜಯಶ್ರೀ ದಂಪತಿಯನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಉದಯವಾಣಿ ಪತ್ರಿಕಾ ವಿತರಕ ಮುರಳಿಧರ ಹೆಗಡೆ ಅವರನ್ನು ಗೌರವಿಸಲಾಯಿತು. ಭೈರುಂಬೆಯ ಪತ್ರಿಕಾ ವಿತರಕ ಪರಮಾನಂದ ಹೆಗಡೆ ಅವರು ಪದ್ಮಾಕರ ಫಾಯ್ದೆ ದಂಪತಿಯನ್ನು ಇದೇ ಸಂದರ್ಭದಲ್ಲಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿದ ಪದ್ಮಾಕರ ಫಾಯ್ದೆ ಮಾತನಾಡಿ, ತಾವು ಕಳೆದ ಹಲವು ವರ್ಷಗಳಿಂದ ಶಿಕ್ಷಕ ವೃತ್ತಿ ಹಾಗೂ ಪತ್ರಿಕಾ ರಂಗದ ಜೊತೆಗೆ ನಾಣ್ಯ, ಅಂಚೆಚೀಟಿ, ಚಿತ್ರಗಳ ಸಂಗ್ರಹವನ್ನೂ ಹವ್ಯಾಸವಾಗಿ ಬೆಳೆಸಿಕೊಂಡು ಬಂದಿದ್ದೇನೆ. ಇವುಗಳ ಸಂಗ್ರಹ ದೊಡ್ಡ ಪ್ರಮಾಣದಲ್ಲಿ ತಮ್ಮಲ್ಲಿದ್ದು, ಅದನ್ನು ಪ್ರದರ್ಶಿಸುವ, ಸಂರಕ್ಷಿಸುವುದಕ್ಕೆ ಅವಕಾಶ ಸಿಗುವಂತಾಗಬೇಕು. ಈ ಹವ್ಯಾಸ ಮತ್ತು ಸಂಗ್ರಹ ನನ್ನೊಂದಿಗೆ ಕಳೆದು ಹೋಗಕೂಡದು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ ಮಾತನಾಡಿ, ಕೆಲ ಆದರ್ಶಗಳು, ಆದರ್ಶವ್ಯಕ್ತಿಗಳು ನಮ್ಮೆದುರಿಗಿದ್ದರೂ ನಾವು ಲಕ್ಷಿಸುವುದಿಲ್ಲ. ಅಂಚೆ ಕಾರ್ಡ್‌ಪತ್ರ ಮತ್ತು ಪತ್ರಿಕಾ ವರದಿ ಕಟಿಂಗ್ಸ್‌ ಮೂಲಕ ವ್ಯವಸ್ಥೆ ಸರಿಪಡಿಸುವ ಕಾಯಕವನ್ನು ಮಾಡಿದ್ದರು ಎಂದ ಅವರು ಇವರ ಬದುಕು ಮತ್ತು ಹವ್ಯಾಸ ಮುಂದಿನವರಿಗೆ ಮಾದರಿಯಾಗಬೇಕು ಎಂದರು.

ಬರಹಗಾರ, ಕವಿ ಗಣಪತಿ ಬಾಳೆಗದ್ದೆ, ಸಹಕಾರಿ ರಾಘವೇಂದ್ರ ಭಟ್ಟ ಹಾಸಣಗಿ, ಡಾ| ಪ್ರಸನ್ನ ಫಾಯ್ದೆ ಸಾಂದರ್ಭಿಕವಾಗಿ ಮಾತನಾಡಿದರು. ಶಿಕ್ಷಕ ಪ್ರವೀಣ ಫಾಯ್ದೆ, ಜಲಸೇವಕ ಸುಬ್ರಾಯ ಮಂಜಾ ನಾಯ್ಕ ಮಂಚಿಕೇರಿ ಇದ್ದರು.

ಪತ್ರಕರ್ತ ಸುಬ್ರಾಯ ಬಿದ್ರೆಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಅಣಲಗಾರ, ಗಣಪತಿ ಹಾಸ್ಪುರ ಸನ್ಮಾನಪತ್ರ ವಾಚಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರ್ಯದರ್ಶಿ ದತ್ತಾತ್ರೇಯ ಕಣ್ಣಿಪಾಲ ನಿರ್ವಹಿಸಿದರು. ಸದಸ್ಯ ಕೆ.ಎಸ್‌. ಭಟ್ಟ ಆನಗೋಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next