Advertisement

ಸಮಾಜದ ಏಳಿಗೆಗೆ ಮಾಧ್ಯಮಗಳ ಪಾತ್ರ ಬಹುಮುಖ್ಯ

05:45 PM Mar 28, 2021 | Team Udayavani |

ಮಂಡ್ಯ: ಸಮಾಜವನ್ನು ಉತ್ತಮ ರೀತಿಯಲ್ಲಿಕೊಂಡೊಯ್ಯಲು ಮಾಧ್ಯಮಗಳ ಪಾತ್ರ ಬಹುಮುಖ್ಯವಾಗಿದೆ. ಆದರೆ ಸಾಮಾಜಿಕ ಮಾಧ್ಯಮದಿಂದಹಲವು ತೊಂದರೆಗಳು ಹೆಚ್ಚಾಗಿ ಕಂಡು ಬರುತ್ತಿದೆಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ಕರ್ನಾಟಕಮಾಧ್ಯಮ ಅಕಾಡೆಮಿ ಬೆಂಗಳೂರು, ಕರ್ನಾಟಕಕಾರ್ಯನಿರತ ಪತ್ರಕರ್ತರ ಸಂಘ, ವಾರ್ತಾ ಮತ್ತುಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಶನಿವಾರನಡೆದ “ಸಾಮಾಜಿಕ ಮಾಧ್ಯಮದ ವಿಶ್ವಾಸಾರ್ಹತೆಮತ್ತು ಜವಾಬ್ದಾರಿ’ ಕುರಿತು ವಿಚಾರ ಸಂಕಿರಣಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಶಾಸಕ ಸಿ.ಎಸ್‌.ಪುಟ್ಟರಾಜು ಮಾತನಾಡಿ, ಪ್ರಸ್ತುತಸಾಮಾಜಿಕ ಮಾಧ್ಯಮ ಸಾಕಷ್ಟು ಪ್ರಭಾವ ಹೊಂದಿದ್ದು,ಬಹುಬೇಗ ಜನರನ್ನು ತಲುಪುತ್ತಿದೆ ಎಂದು ಹೇಳಿದರು.ಶಾಸಕ ಕೆ.ಅನ್ನದಾನಿ ಮಾತನಾಡಿ, ಸೋಷಿಯಲ್‌ಮೀಡಿಯಾದಲ್ಲಿ ತಕ್ಷಣಕ್ಕೆ ಮಾಹಿತಿ ಸಿಗುತ್ತಿದೆ. ಅದುವೇಗವಾಗಿ ತಲುಪುತ್ತಿದೆ. ಆದರೆ, “ಅತಿವೇಗ ತಿಥಿ ಬೇಗ’ಎಂಬ ಭಾವನೆ ಮೂಡಿದೆ. ಅದು ಯಾವಾಗ ನಿಲ್ಲುತ್ತದೆಎಂಬುದು ಗೊತ್ತಿಲ್ಲ.

ಜವಾಬ್ದಾರಿ ಎಂಬುದು ಎಲೆಕ್ಟ್ರಾನಿಕ್‌ ಮತ್ತು ಮುದ್ರಣ ಮಾಧ್ಯಮಗಳಿಗೆ ಮಾತ್ರ ಇದೆಎಂದರು. ಶಾಸಕರಾದ ಮರಿತಿಬ್ಬೇಗೌಡ, ಕೆ.ಸುರೇಶ್‌ಗೌಡ, ಮುಡಾ ಅಧ್ಯಕ್ಷ ಶ್ರೀನಿವಾಸ್‌, ಜಿಪಂ ಸಿಇಒಎಸ್‌.ಎಂ.ಜುಲ್‌ಫಿಖಾರ್‌ ಉಲ್ಲಾ, ಮಾಧ್ಯಮಆಕಾಡೆಮಿ ಕಾರ್ಯದರ್ಶಿ ರೂಪಾ, ವಾರ್ತಾ ಧಿಕಾರಿಟಿ.ಕೆ.ಹರೀಶ್‌, ರಾಜಾÂಧ್ಯಕ್ಷ ಶಿವಾನಂದ ತಗಡೂರುರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಜಿಲ್ಲಾಧ್ಯಕ್ಷಚಿಕ್ಕಮಂಡ್ಯ ನವೀನ್‌, ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್‌, ಪ್ರಧಾನ ಕಾರ್ಯದರ್ಶಿ ಮೋಹನ್‌ರಾಜ್‌ ಸೇರಿದಂತೆ ಮತ್ತಿತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next