ಕನ್ನಡವನ್ನು ರಕ್ಷಣೆ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತ ಬಂದಿದ್ದು ಹೆಮ್ಮೆ
ಪಡುವಂತಹದ್ದಾಗಿದೆ ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ , ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
Advertisement
ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಲಾವಿದರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಾಡಬೇಕು. ಕನ್ನಡವೇ ಧರ್ಮ, ಕನ್ನಡವೇ ಜಾತಿ, ಕನ್ನಡವೇ ದೇವರು ಎಂದು ಭಾವಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಗೌರವದೊಂದಿಗೆ ಮುನ್ನಡೆದಿದೆ ಎಂದರು.
Related Articles
ಗೌರವಾಧ್ಯಕ್ಷ ಎಚ್.ಎಸ್. ಢವಳಗಿ ಮಾತನಾಡಿ, ಕನ್ನಡ ಭಾಷೆಯಲ್ಲಿ ಸೂಕ್ಷ್ಮತೆ ಅಡಗಿದೆ. ಕನ್ನಡ ಭಾಷೆಯಲ್ಲಿ
ಭುವನೇಶ್ವರಿ ದೇವಿಯನ್ನು ಪೂಜಿಸುವುದರೊಂದಿಗೆ ತಾಯಿಯ ಸ್ವರೂಪವನ್ನು ಕಾಣುತ್ತಿದ್ದೇವೆ.
Advertisement
ಇಂದಿನ ದಿನಮಾನದಲ್ಲಿ ಕೆಲವೆಡೆ ಪ್ರಜ್ಞಾವಂತ ಪಾಲಕರೇ ಕನ್ನಡ ಭಾಷೆಯನ್ನು ಪರಕೀಯರ ಭಾಷೆಯಂಬಂತೆಕಾಣುತ್ತಿರುವದು ವಿಷಾದಕರ ಸಂಗತಿಯಾಗಿದೆ. ಮಕ್ಕಳಲ್ಲಿ ತುಂಬುತ್ತಿರುವ ಇಂಗ್ಲಿಷ್ ವ್ಯಾಮೋಹ ಅತಿ
ಕೆಟ್ಟ ಸಂಸ್ಕೃತಿಯನ್ನು ಕಲಿಸುತ್ತಿದೆ. ಅನ್ಯಭಾಷೆ ಕಡೆಗಣಿಸಿ ದ್ವೇಷಿಸುವ ಅಗತ್ಯ ನಮಗಿಲ್ಲ. ಕನ್ನಡ ಭಾಷೆ ಮಾತನಾಡಲು ಬರೆಯಲು ಅನುಕೂಲವಾದಂತಹ ಭಾಷೆಯಾಗಿದೆ. ಕನ್ನಡ ಭಾಷೆ ಉಳಿವಿಗಾಗಿ ಬೆಳವಣಿಗೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಹಗಲಿರುಳು ದುಡಿಯುತ್ತಾ ಸಾಗಿದ್ದು ಶ್ಲಾಘನೀಯ ಎಂದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಕರವೇ ತಾಲೂಕು ಉಪಾಧ್ಯಕ್ಷ
ಜೈಭೀಮ ಮುತ್ತಗಿ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ
ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಯಿತು. ಖಾಸತೇಶ್ವರ ಮಠದ ವಿಶ್ವನಾಥ ವಿರಕ್ತಮಠ, ಮುಸ್ಲಿಂ ಧರ್ಮಗುರು ಸೈಯದ್ ಶಕೀಲಹ್ಮದ್ ಖಾಜಿ ಸಾನ್ನಿಧ್ಯ
ವಹಿಸಿದ್ದರು. ನಿಸಾರ ಬೇಪಾರಿ, ಅಕ್ಕಮಹಾದೇವಿ ಕಟ್ಟಿಮನಿ, ಪ್ರಭುಗೌಡ ಮದರಕಲ್ಲ, ಮಂಜೂರಲಿ ಬೇಪಾರಿ, ಪ್ರಶಾಂತ ಹಾವರಗಿ, ಜಿ.ಟಿ. ಘೋರ್ಪಡೆ, ಇಬ್ರಾಹಿಂ ಮನ್ಸೂರ, ಮಶಾಕ ಚೋರಗಸ್ತಿ, ಬಸವರಾಜ ಅಗ್ನಿ, ಶಬ್ಬೀರ್ ಲಾಹೋರಿ, ಇಬ್ರಾಹಿಂ ಡೋಣಿ, ಇಮಿ¤ಯಾಜ್ ಮೀರ್ ಜಮಾದಾರ, ಪ್ರಭುಗೌಡ ಪಾಟೀಲ, ಮಹಾದೇವ ರಾವಜಿ, ವಿನೋದ ದಳವಾಯಿ, ಸಾವಿತ್ರಿ ತಳವಾರ, ಜಾಕೀರ್ ಬಡಗಣ, ನಬಿ ಲಾಹೋರಿ, ಅಬು ಲಾಹೋರಿ, ಟಿಪ್ಪು ಕಾಳಗಿ, ಮಂಜು ಬಡಿಗೇರ, ಅಜೀಜ್ ಮನ್ಸೂರ, ಇಬ್ರಾಹಿಂ ಪಟ್ಟೆವಾಲೆ, ಅಜೀಜ್ ಮನ್ಸೂರ, ಈಶ್ವರ ಹೂಗಾರ, ಅಯೂಬ ವಠಾರ, ಶೌಕತ್ ಲಾಹೋರಿ, ಅನಿಲ ಗೊಟಗುಣಕಿ, ಜಗನ್ನಾಥ ಮಸರಕಲ್ಲ, ಲಾಳೇಮಶಾಕ ಜಮಾದಾರ, ಭೀಮರಾಯ ಅತ್ತೂರ, ಚಂದಪ್ಪಗೌಡ ಬಿರಾದಾರ, ಆಸೀಫ್ ಲಾಹೋರಿ, ಇಮಾಮ ಹುಸೇನ ಸೂಳೆಭಾವಿ, ಬಂದು ಬೇಪಾರಿ, ಮದರಶಾ ಮಕಾಂದಾರ ಇದ್ದರು. ಎಚ್.ವೈ. ಬಸರಿಕಟ್ಟಿ ನಿರೂಪಿಸಿದರು