Advertisement
ಬಿಲ್ವದ ಹಣ್ಣಿನಲ್ಲಿ ಏನೇನಿದೆ?ಬಿಲ್ವ ಫಲದಲ್ಲಿ ಹೇರಳವಾದ ಪೋಷಕಾಂಶಗಳು ಇರುವುದರಿಂದ ಆಹಾರವಾಗಿಯೂ ಉಪಯುಕ್ತವಾಗಿದೆ. 100 ಗ್ರಾಂ ಹಣ್ಣಿನ ತಿರುಳಿನಲ್ಲಿ ತೇವಾಂಶ 62.2 ಗ್ರಾಂ, ಸಸಾರಜನಕ 1.8 ಗ್ರಾಂ, ಮೇದಸ್ಸು 0.39ಗ್ರಾಂ ಖನಿಜಪದಾರ್ಥ 1.7 ಗ್ರಾಂ, ನಾರು 2.2 ಗ್ರಾಂ, ಶರ್ಕರ ಪಿಷ್ಟ 31.8 ಗ್ರಾಂ, ಸುಣ್ಣ 0.09 ಗ್ರಾಂ, ರಂಜಕ 0.05 ಗ್ರಾಂ, ಕಬ್ಬಿಣ 0.3 ಗ್ರಾಂ, “ಎ’ ಜೀವಸತ್ವ 186 ಐ.ಯು, ರೈಬೋಪ್ಲವಿನ್ 1.19ಮಿ.ಗ್ರಾಂ,ಥಯಾಮಿನ್ 0.13 ಮಿ.ಗ್ರಾಂ, ನಿಯಾಸಿನ್ 1.10 ಮಿ.ಗ್ರಾಂ, ನಿಕೋಟಿನ್ ಆಮ್ಲ 0.09 ಮಿ.ಗ್ರಾಂ, ಸಿ ಜೀವಸತ್ವ 15 ಮಿ.ಗ್ರಾಂ ಪೋಷಕಾಂಶಗಳಿರುತ್ತವೆ. 100 ಗ್ರಾಂ ಹಣ್ಣಿನ ತಿರುಳನ್ನು ತಿನ್ನುವುದರಿಂದ 129 ಕ್ಯಾಲೋರಿಗಳು ದೇಹಕ್ಕೆ ಸಿಗುತ್ತದೆ. ಅತಿಸಾರ, ರಕ್ತಾತಿಸಾರ ಮತ್ತು ಆಮಶಂಕೆ ಭೇದಿಯಲ್ಲಿ ಬಿಲ್ವದ ಅಪಕ್ವ ಫಲವು ಹೆಚ್ಚು ಪರಿಣಾಮಕಾರಿಯಾಗಿದೆ.
ತಿರುಳನ್ನು ನೀರಿನಲ್ಲಿ ಕದಡಿ ಹಾಲು ಮತ್ತು ಸಕ್ಕರೆ ಸೇರಿಸಿ ಕುಡಿಯುವುದರಿಂದ ಮೂತ್ರ ಸರಾಗವಾಗಿ ಹೋಗುತ್ತದೆ. ಹಣ್ಣಿನ ತಿರುಳಿಗೆ ಹಾಲಿನ ಕೆನೆ ಸೇರಿಸಿ ತಿನ್ನುವುದರಿಂದ ಮೆದುಳು ಮತ್ತು ಹೃದಯ ಬಲಗೊಳ್ಳುತ್ತವೆ. ರಕ್ತ ಹಿನತೆ ಕಡಿಮೆಯಾಗುವುದು. ಪಕ್ವ ಹಣ್ಣಿನ ತಿರುಳನ್ನು ತಲೆಗೆ ಹಚ್ಚಿ ಸ್ವಲ್ವ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ತಲೆ ಹೊಟ್ಟು ನಿವಾರಣೆಯಾವುದು ಮಾತ್ರವಲ್ಲದೇ ಕೂದಲು ಹೊಳಪನ್ನು ಪಡೆಯುತ್ತದೆ. ನೋವು ಶಮನ
ಬೇರು ಮತ್ತು ತೊಗಟೆಯ ಕಷಾಯವನ್ನು ತಯಾರಿಸಿಕೊಂಡು ಕುಡಿಯುವುದರಿಂದ ಉದ್ವೇಗ ಕಡಿಮೆಯಾಗುವುದಲ್ಲದೆ ಹೃದಯಕ್ಕೂ ಒಳ್ಳೆಯದು. ಎಲೆಯನ್ನು ಅರೆದು ನೋವಿರುವ ಜಾಗಕ್ಕೆ ಕಟ್ಟಿದರೆ ನೋವು ಶಮನವಾಗುವುದು. ಬಿಲ್ವ ಪತ್ರೆಯ ರಸವನ್ನು ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿ ಸೇವಿಸುವುದರಿಂದ ಬೊಜ್ಜು ಕಡಿಮೆಯಾಗುವುದು.
Related Articles
Advertisement