Advertisement

ಬೆಳೆ ರಕ್ಷಣೆಗೆ ಹಾವುಗಳ ಪಾತ್ರ ದೊಡ್ಡದು

04:48 PM Jul 21, 2022 | Team Udayavani |

ಗುಂಡ್ಲುಪೇಟೆ: ಹಾವು ಕಡಿತಕ್ಕೆ ಔಷಧಿಯಿದ್ದು, ಹಾವುಗಳನ್ನು ಕೊಲ್ಲಬಾರದು. ರೈತರ ಬೆಳೆ ಗಳನ್ನು ರಕ್ಷಣೆ ಮಾಡುವಲ್ಲಿ ಹಾವುಗಳ ಪಾತ್ರ ದೊಡ್ಡದಿದೆ. ಹಾವುಗಳು ಇಲ್ಲದಿದ್ದರೆ ಇಲಿಗಳ ಹಾವಳಿ ಹೆಚ್ಚಾಗುತ್ತದೆ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್‌.ಕೆ.ಮಧು ಹೇಳಿದರು.

Advertisement

ತಾಲೂಕಿನ ತೆರಕಣಾಂಬಿ ಗ್ರಾಮದ ಬಲಚವಾಡಿ ಪುಟ್ಟ ಬಸಪ್ಪ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಾವಿನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಸುಮಾರು 278 ಬಗೆಯ ಹಾವುಗಳಿದ್ದು, ಅವುಗಳಲ್ಲಿ ಕೇವಲ 5 ಮಾತ್ರ ವಿಷವುಳ್ಳ ಹಾವಾಗಿದೆ. ನಾಗರಹಾವು, ಕಾಳಿಂಗ ಸರ್ಪ, ಮಂಡಲದ ಹಾವು, ಕಟ್‌ ಹಾವು ಹಾಗು ಸಮುದ್ರದ ಹಾವುಗಳು ಮಾತ್ರ ವಿಷಕಾರಿಯಾಗಿದ್ದು, ಉಳಿದವು ವಿಷ ರಹಿತ ಹಾವುಗಳು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾಳಿಂಗ ಸರ್ಪ ಹಾಗೂ ಹೆಬ್ಟಾವುಗಳು ಗೂಡು ಮಾಡಿ ಮರಿಗಳ ಪೋಷಿಸುವ ವಿಶೇಷ ವಿವರಿಸಿ, ಮಂಡಲದ ಹಾವು ಹಾಗೂ ಹಸಿರು ಹಾವುಗಳು ಮೊಟ್ಟೆಗಳನ್ನಿಡದೆ ಮರಿಹಾಕುವ ಬೆಳವಣಿಗೆ ಬಗ್ಗೆ ತಿಳಿಸಿದರು.

ಬಳಿಕ ತಾವು ಕ್ಯಾಮಾರಾದಲ್ಲಿ ಸೆರೆ ಹಿಡಿದ 30 ಬಗೆಯ ಹಾವುಗಳ ಛಾಯಾಚಿತ್ರ ಪ್ರದರ್ಶಿಸಿ ಅವುಗಳ ವಿಶೇಷತೆಗಳ ಬಗ್ಗೆ ಮಕ್ಕಳಲ್ಲಿ ಹಾವಿನ ಬಗ್ಗೆ ಅರಿವು ಮೂಡಿ ಸಿದರು. ಶಾಲೆಯ ಇಕೋ ಕ್ಲಬ್‌ ಸಂಚಾಲಕಿ ಇಂದಿರಾ, ಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಶ್ರೀನಿವಾಸ್‌ ಸೇರಿದಂತೆ ಸಿಬ್ಬಂದಿ ವರ್ಗದವರು, ಶಾಲಾ ಮಕ್ಕಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next