ಕಾರ್ಕಳ: ಕಲಾವಿದರ ಬದುಕಿನಲ್ಲಿ ಛಾಯಾ ಚಿತ್ರಗ್ರಾಹಕರ ಪಾತ್ರ ಬಹಳ ಹಿರಿದಾದದು. ಸಿನಿಮಾದ ಯಶಸ್ಸಿನಲ್ಲೂ ಛಾಯಾಚಿತ್ರಗ್ರಾಹಕರ ಸೃಜನಶೀಲತೆ, ಕಲಾತ್ಮಕತೆ, ಕೌಶಲತೆ ಪ್ರಮುಖಪಾತ್ರ ವಹಿಸುವ ಮೂಲಕ ಆತ ಕಲಾವಿದನಲ್ಲಿರುವ ಕಲೆಯನ್ನು ಪ್ರೇಕ್ಷಕನಿಗೆ ತಲುಪಿ ಸುವ ಮಹತ್ ಕಾರ್ಯ ಮಾಡುತ್ತಾನೆ ಎಂದು ಕನ್ನಡ ಚಲನಚಿತ್ರ ರಂಗದ ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ ಹೇಳಿದರು.
ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಕಾರ್ಕಳ ವಲಯದ ವತಿಯಿಂದ ನಗರದ ಗಾಂಧಿ ಮೈದಾನದ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಅತ್ಯಂತ ಸಂಘಟನಾತ್ಮಕವಾಗಿ ಕ್ರೀಯಾಶೀಲವಾಗಿದ್ದು ಇತರ ಸಂಘಗಳಿಗೆ ಮಾದರಿಯಾಗಿ ಗುರುತಿಸಿಕೊಂಡಿದೆ. ಸಂಘದಿಂದ ಇನ್ನಷ್ಟು ಹೆಚ್ಚಿನ ಸಮಾಜಮುಖೀ ಕಾರ್ಯಗಳಾಗಿ ಎಂದು ಅವರು ಆಶಿಸಿದರು.
ಎಸ್‌ಕೆಪಿಎ ಜಿಲ್ಲಾಧ್ಯಕ್ಷ ವಿಲ್ಸನ್ ಗೋನ್ಸಾಲ್ವಿಸ್ ಪಂದ್ಯಾಟವನ್ನು ಉದ್ಘಾಟಿಸಿ, ಶುಭಹಾರೈಸಿದರು. ಗ್ರಾಮ ವಿಕಾಸ ಚಾರಿಟೆಬಲ್ ನಿರ್ದೇಶಕ ಸುನಿಲ್ ಕುಮಾರ್ ಬಜಗೋಳಿ, ಕೆಎಂಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಇಮಿ¤ಯಾಜ್, ಜಿಲ್ಲಾ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಕೋರಿಯ, ಗೌರವಾಧ್ಯಕ್ಷ ಪದ್ಮಪ್ರಸಾದ್ ಜೈನ್, ಕಾರ್ಯದರ್ಶಿ ಸೀತಾರಾಮ, ಕೋಶಾಧಿಕಾರಿ ಯೋಗೀಶ್ ಮೊದಲಾ ದವರು ಉಪಸ್ಥಿತರಿದ್ದರು.
ಎಸ್‌ಕೆಪಿಎ ಕಾರ್ಕಳ ವಲಯದ ಅಧ್ಯಕ್ಷ ಭಾಸ್ಕರ ಕುಲಾಲ್ ಸ್ವಾಗತಿಸಿ, ಪ್ರಸಾದ್ ಐಸಿರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಮಾರೋಪ
ಸಂಜೆ ನಡೆದ ಸಮಾರೋಪದಲ್ಲಿ ಜೈನ್ ಹೊಟೇಲ್ ಮಾಲಕ ಗುಣಪಾಲ ಜೈನ್, ಅಕ್ಷಯ್ ರಾವ್, ಉಡುಪಿ ಕಲ್ಯಾಣಪುರದ ವೈದ್ಯರಾದ ಡಾ| ಆಕಾಶ್ ರಾಜ್, ಜಿಲ್ಲಾ ಸಂಚಾಲಕ ವಿಟuಲ ಚೌಟ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.