ಮಂಗಳೂರು: ನ್ಯಾಯ ಪಡೆಯಲು ಸಾಧ್ಯವಾಗದ ಮಂದಿಗೆ ಕಾನೂನು ನೆರವು ನೀಡುವ ಕಾರ್ಯ ಪ್ಯಾನಲ್ ನ್ಯಾಯವಾದಿಗಳು ಮಾಡು ತ್ತಾರೆ. ನ್ಯಾಯ ನಿರ್ವಹಣೆಯಲ್ಲಿ ಪ್ಯಾನಲ್ ನ್ಯಾಯವಾದಿಗಳ ಕೊಡುಗೆ ಮಹತ್ತರ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್. ಬೀಳಗಿ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ. ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ. ಮತ್ತು ಉಡುಪಿ ಜಿಲ್ಲೆ ಗಳ ವಕೀಲರ ಸಂಘಗಳ ಸಹಯೋಗ ದೊಂದಿಗೆ ಪ್ಯಾನಲ್ ನ್ಯಾಯವಾದಿ ಗಳಿಗೆ ನಗರದ ಎಸ್‌ಡಿಎಂ ಕಾನೂನು ಮಹಾ ವಿದ್ಯಾಲಯದಲ್ಲಿ ಆಯೋಜಿ ಸಿದ್ದ ದ್ವಿದಿನ ತರಬೇತಿ ಕಾರ್ಯಾಗಾರ ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನ ಮತ್ತು ಅನುಭವ ನ್ಯಾಯ ನಿರ್ವಹಣೆ ವ್ಯವಸ್ಥೆಯನ್ನು ಸದೃಢ ಗೊಳಿಸುತ್ತದೆ. ಪ್ರತಿಯೊಬ್ಬರಲ್ಲೂ ಪ್ರತಿಭೆಗಳಿರುತ್ತವೆ. ಆದರೆ ಅವುಗಳ ವಿಕಸನ ಮತ್ತು ಪ್ರಕಟಕ್ಕೆ ಪ್ರೋತ್ಸಾಹದ ಅಗತ್ಯ ಇದೆ. ಹಿರಿಯ ನ್ಯಾಯವಾದಿಗಳ ಜ್ಞಾನ ಮತ್ತು ಅನುಭವವನ್ನು ಕಿರಿಯರು ಪಡೆದು ಕೊಳ್ಳುವಂತಾಗಬೇಕು. ಇದರಿಂದ ನ್ಯಾಯ ವ್ಯವಸ್ಥೆ ಬಲಯುತ ವಾಗುತ್ತದೆ ಎಂದರು.
ಪ್ಯಾನಲ್ ನ್ಯಾಯವಾದಿಗಳ ಸೇವೆ ಇನ್ನಷ್ಟು ಪರಿಣಾಮಕಾರಿಯಾಗಿ ಲಭ್ಯ ವಾಗುವಲ್ಲಿ ಇಂಥ ಕಾರ್ಯಾಗಾರ ಪೂರಕ ಎಂದವರು ಹೇಳಿದರು. ನಿವೃತ್ತ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಐ.ಎಸ್. ಆ್ಯಂಟನಿ ಮುಖ್ಯ ಅತಿಥಿಯಾಗಿದ್ದರು. ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ| ತಾರಾನಾಥ್, ಕಾನೂನಿನ ಗರಿಷ್ಠ ಲಾಭ ಸಮಾಜಕ್ಕೆ ಲಭ್ಯವಾಗುವ ನಿಟ್ಟಿನಲ್ಲಿ ಪ್ಯಾನಲ್ ನ್ಯಾಯವಾದಿಗಳು ಉತ್ತಮ ಸೇವೆಯನ್ನು ನೀಡುತ್ತಾರೆ ಎಂದರು.
ಸ್ವಾಗತಿಸಿ ಪ್ರಸ್ತಾವನೆಗೈದ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿ. ಕಾ. ಸೇ. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲಣ ಗೌಡ ತರಬೇತಿಯ ಉದ್ದೇಶ ವಿವರಿಸಿದರು.
ಉಡುಪಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಉಪಸ್ಥಿತರಿದ್ದರು. ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ವಂದಿಸಿದರು. ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ನಿರೂಪಿಸಿದರು