Advertisement

ಮಕ್ಕಳ ಪಾಲನೆಯಲ್ಲಿ ತಾಯಂದಿರ ಪಾತ್ರ ಹೆಚ್ಚು

12:43 PM Mar 08, 2018 | Team Udayavani |

ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಗ್ರಾಮದ ಜ್ಞಾನ ಜ್ಯೋತಿ ಶಾಲೆ ಆವರಣದಲ್ಲಿ ವಿಶ್ವ ಜನಸೇವಾ ಸಂಸ್ಥೆ ವತಿಯಿಂದ ಮಾತೃ ಮಿಲನ್‌ ಹಾಗೂ ಚಿಣ್ಣರಿಗೆ ಕೈ ತುತ್ತಿನ ಊಟ ಕಾರ್ಯಕ್ರಮ ನಡೆಯಿತು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗುಲಬರ್ಗಾ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ| ವೀರಣ್ಣ ದಂಡೆ, ಮಕ್ಕಳ ಪಾಲನೆ ಪೋಷಣೆಯಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಕರೆ ನೀಡಿದರು.

ಜಾನಪದ ಅಕಾಡೆಮಿ ಸದಸ್ಯ ಪ್ರಕಾಶ ಕನ್ನಳ್ಳಿ ಮಾತನಾಡಿ, ಮಕ್ಕಳಲ್ಲಿ ಹುದಗಿದ ಪ್ರತಿಭೆ ಗುರುತಿಸಲು ಪ್ರದರ್ಶನ
ಅಗತ್ಯವಾಗಿದೆ ಎಂದು ಹೇಳಿದರು. ಗುಲಬರ್ಗಾ ವಿಶ್ವ ವಿದ್ಯಾಲಯ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಜಯಶ್ರೀ ದಂಡೆ ಮಾತನಾಡಿ, ತಾಯಂದಿರು ತಮ್ಮ ಮಕ್ಕಳಿಗೆ ಜೀಜಾಬಾಯಿಯಂತೆ ಆದರ್ಶ ಗುಣಗಳನ್ನು ಬೆಳಸಬೇಕು ಎಂದು ಸಲಹೆ ನೀಡಿದರು.

ಮಾತೃ ಮಿಲನ ಕುರಿತು ಪೂಜಾ ಭಂಕಲಗಿ ಉಪನ್ಯಾಸ ನೀಡಿದರು. ಸಂಸ್ಥೆ ಉಪಾಧ್ಯಕ್ಷೆ ಸಿದ್ದಮ್ಮ ಸ್ಥಾವರಮಠ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ತಾಯಿಂದರು ಮಕ್ಕಳಿಗೆ ಕೈ ತುತ್ತು ಊಟ ಮಾಡಿಸಿ ಸಂಭ್ರಮಿಸಿದರು.
 
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನಾ ಧಿಕಾರಿ ಬಾಸ್ಕರ್‌ ಪಟಗಾರ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ, ಸೇಡಂ ಸಾಹಿತಿ ಲಿಂಗಾರಡ್ಡಿ ಸೇರಿ, ಗ್ರಾಪಂ ಅಧ್ಯಕ್ಷ ಸಾಬಣ್ಣ ಸಂಕನೂರ, ಮುಖಂಡರಾದ ಬಸಣ್ಣ ಭಜಂತ್ರಿ, ಪಂಚಾಕ್ಷರಿ ಪೂಜಾರಿ, ನಾಗಮ್ಮ ಚಿತ್ತಾಪುರಕರ್‌ ಇದ್ದರು. ಶಾಲೆ ಮುಖ್ಯಶಿಕ್ಷಕ ಲಿಂಗಣ್ಣ ಮಲ್ಕನ್‌ ಸ್ವಾಗತಿಸಿದರು. ಸಂಗೀತಾ ಬೇಲಿ ನಿರೂಪಿಸಿದರು. ಮಹಾಲಕ್ಷ್ಮೀ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next