Advertisement

ಸ್ವಾತಂತ್ರ್ಯಾ ಹೋರಾಟದಲ್ಲಿ ಪತ್ರಕರ್ತರ ಪಾತ್ರವೂ ಮಹತ್ವದ್ದು

12:47 PM Aug 16, 2018 | Team Udayavani |

ಔರಾದ: ದೇಶಕ್ಕೆ ಸ್ವಾತಂತ್ರ್ಯಾ ಕಲ್ಪಿಸಿಕೊಡುವಲ್ಲಿ ಸ್ವಾತಂತ್ರ್ಯಾ ಹೋರಾಟಗಾರರು ಎಷ್ಟು ಮಹತ್ವದ ಪಾತ್ರ ವಹಿಸಿದ್ದರೊ ಅದರಂತೆ ಅಂದಿನ ದಿನಗಳಲ್ಲಿ ಪತ್ರಕರ್ತರೂ ಕೂಡ ಅಷ್ಟೇ ಮಹತ್ವದ ಪಾತ್ರ ವಹಿಸಿದ್ದರು ಎಂದು ಶಾಸಕಪ್ರಭು ಚವ್ಹಾಣ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಬುಧವಾರ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ 72ನೇ ಸ್ವಾತಂತ್ರ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಅಂದಿನ ದಿನಗಳಲ್ಲಿ ವ್ಯಾಪಾರಕ್ಕಾಗಿ ಬಂದು ದೇಶದ ಆಳ್ವಿಕೆ ನಡೆಸಿದ ಬ್ರಿಟಿಷರನ್ನು ಭಾರತದಿಂದ ಓಡಿಸಲು ಕನ್ನಡಗರು ಮಾಡಿದ ಹೋರಾಟ ಆರಂಭಿಸಿ ಸ್ವಾತಂತ್ರ್ಯಾ ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.

ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪಠ್ಯ, ಕ್ರೀಡೆಯೊಂದಿಗೆ ನಿತ್ಯ ದೇಶಭಕ್ತಿ, ದೇಶಾಭಿಮಾನ, ಸ್ವಾತಂತ್ರ್ಯಾ
ಹೋರಾಟಗಾರರ ಆದರ್ಶಗಳ ಬಗ್ಗೆ ಪರಿಚಯಿಸುವುದು ಅವಶ್ಯ ಎಂದರು. ಮುರ್ಕಿ ಗ್ರಾಮದಲ್ಲಿ ನಡೆದ ಘಟನೆ ಕುರಿತು
ಖಂಡಿಸಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಹಾಗೂ ಒಳ್ಳೆಯ ವಿಷಯಗಳನ್ನು ಮಾತ್ರ ಚರ್ಚೆ ಮಾಡಿ ಎಂದರು. ಘಟನೆ
ಕುರಿತು ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸಿ, ಮುರ್ಕಿ ಗ್ರಾಮಸ್ಥರನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಕಸಾಪ ತಾಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ ಉಪನ್ಯಾಸ ನೀಡಿ, ದೇಶದ ಇತಿಹಾಸದ ಬಗ್ಗೆ ಪ್ರತಿಯೊಬ್ಬರು ಅರಿತು ಉತ್ತಮ
ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಹೇಳಿದರು.

ಸನ್ಮಾನ: ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳನ್ನು ತಾಲೂಕು ಆಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು.  ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿಕೊಂಡು ಸಣ್ಣ ವಯಸ್ಸಿನಲ್ಲಿಯೇ ಗೌರವ ಡಾಕ್ಟರೇಟ್‌ ಪದವಿ ಪಡೆದ ಶಿಕ್ಷಕ ಶಾಲೀವಾನ ಉದಗೀರೆ, ರಾಷ್ಟ್ರ ಮಟ್ಟದ ಕರಾಟೆಯಲ್ಲಿ ಬಂಗಾರದ ಪದಕ ಗೆದ್ದ ಕಸ್ತೂರಿಬಾ ಶಾಲೆಯ ಮಕ್ಕಳನ್ನು ಸನ್ಮಾನಿಸಲಾಯಿತು.

ಪಟ್ಟಣ ಪಂಚಾಯತ ಅಧ್ಯಕ್ಷ ಸುನೀಲಕುಮಾರ ದೇಶಮುಖ, ಜಿಪಂ ಸದಸ್ಯೆ ಸುರೇಖಾ ಭೋಸ್ಲೆ, ಮಾರುತಿ ಚವ್ಹಾಣ, ತಹಶೀಲ್ದಾರ ಎಂ. ಚಂದ್ರಶೇಖರ, ಸಿಪಿಐ ರಮೇಶಕುಮಾರ ಮೈಲುರಕರ್‌, ತಾಪಂ ಇಒ ಜಗನಾಥ ಮೂರ್ತಿ, ಬಿಇಒ ಚವ್ಹಾಣಶೆಟ್ಟಿ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಸದಸ್ಯರು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next