Advertisement

ವಿದೇಶಗಳಲ್ಲೂ ಸ್ವಾತಂತ್ರ್ಯ ಸಂಭ್ರಮ : ಭಾರತಕ್ಕೆ ಶುಭ ಹಾರೈಕೆ

08:29 PM Aug 15, 2021 | Team Udayavani |

ಜೆರುಸಲೆಂ/ಕೊಲೊಂಬೋ: ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿರುವ ಭಾರತೀಯರೂ ಸಂಭ್ರಮದಿಂದ ಆಚರಿಸಿದ್ದಾರೆ. ಆಯಾ ದೇಶಗಳಲ್ಲಿರುವ ರಾಯಭಾರಿ ಕಚೇರಿಗಳು ತ್ರಿವರ್ಣ ಧ್ವಜ ಹಾರಿಸಿ, ದೇಶಕ್ಕೆ ಗೌರವ ಸಲ್ಲಿಸಿದ್ದಾರೆ. ಇಸ್ರೇಲ್‌, ನ್ಯೂಯಾರ್ಕ್‌, ಪೂರ್ವ ಆಫ್ರಿಕಾದ ಸೆಷೆಲ್ಸ್‌ ಮತ್ತು ಮಡಗಾಸ್ಕರ್‌, ಇಂಡೋನೇಷ್ಯಾ, ದಕ್ಷಿಣ ಅಮೆರಿಕದ ಪೆರು ಸೇರಿ ಅನೇಕ ದೇಶಗಳು ತ್ರಿವರ್ಣ ಲೈಟಿಂಗ್‌ ಬೆಳಗಿಸುವ ಮೂಲಕ ಭಾರತಕ್ಕೆ ಶುಭ ಹಾರೈಸಿವೆ.

Advertisement

ಇಸ್ರೇಲ್‌ ನಲ್ಲಿರುವ ಭಾರತೀಯ ರಾಯಭಾರಿ ಸಂಜೀವ್‌ ಸಿಂಗ್ಲಾ ವರ್ಚುವಲ್‌ ವೇದಿಕೆಯಲ್ಲಿ ಧ್ವಜಾರೋಹಣ ನಡೆಸಿಕೊಟ್ಟಿದ್ದಾರೆ. ಶಬರಿಮತಿ ಆಶ್ರಮ ಹಾಗೂ ಇಸ್ರೇಲ್‌ ಮೊದಲ ಪ್ರಧಾನಿ ಬೆನ್‌ ಗುರಯನ್‌ ಡಸರ್ಟ್‌ ಹೋಂನ ವರ್ಚುವಲ್‌ ಪ್ರವಾಸವನ್ನೂ ನಡೆಸಲಾಯಿತು. ಮೊದಲನೇ ವರ್ಲ್ಡ್ ವಾರ್‌ ನಲ್ಲಿ ಇಸ್ರೇಲ್‌ಗೆ ಭಾರತ ಮಾಡಿದ ಸಹಾಯವನ್ನು ಮರೆಯದ ದೇಶವು ತನ್ನ ರಾಷ್ಟ್ರದ ವಿದ್ಯಾರ್ಥಿಗಳ ಪಠ್ಯದಲ್ಲೂ ಅದರ ಕುರಿತಾಗಿ ಉಲ್ಲೇಖೀಸಿದೆ.

ಇದನ್ನೂ ಓದಿ :ಕಲಹ ಪೀಡಿತ ಕಾಬೂಲ್ ನಿಂದ ದೆಹಲಿಗೆ ಬಂದಿಳಿದ 129 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ

ಸ್ಪೇನ್‌ ಮತ್ತು ಲೆಬನಾನ್‌ನ ಭಾರತೀಯ ರಾಯಭಾರಿ ಕಚೇರಿಗಳೂ ಸ್ವಾತಂತ್ರ್ಯ ದಿನವನ್ನು ಆಚರಿಸಿವೆ. ಲೆಬನಾನ್‌ ನಲ್ಲಿ ಭಾರತೀಯ ರಾಯಭಾರಿ ಸುಹೇಲ್‌ ಎ ಖಾನ್‌ ಧ್ವಜಾರೋಹಣ ಮಾಡಿದ್ದು, ರಾಷ್ಟ್ರಪತಿಗಳು ದೇಶವನ್ನುದ್ದೇಶಿಸಿ ಮಾಡಿದ್ದ ಭಾಷಣವನ್ನು ಓದಿದ್ದಾರೆ. ಶ್ರೀಲಂಕಾ ರಾಜಧಾನಿ ಕೊಲೊಂಬೋದಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next