Advertisement

ಸಮಾಜ ಪರಿವರ್ತನೆಯಲ್ಲಿ ಪತ್ರಕರ್ತರ ಪಾತ್ರ ಹಿರಿದು

04:50 PM Mar 22, 2022 | Shwetha M |

ವಿಜಯಪುರ: ಸಮಾಜ ಪರಿವರ್ತನೆಯಲ್ಲಿ ಪತ್ರಕರ್ತರ ಪಾತ್ರ ಬಹುದೊಡ್ಡ ಪಾತ್ರ ನಿರ್ವಹಿಸಲಿದ್ದು, ವಸ್ತುನಿಷ್ಠ ವರದಿ ನೀಡುವ ಮೂಲಕ ಪತ್ರಕರ್ತರು ಪತ್ರಿಕೋದ್ಯಮದ ಘನತೆ ಹೆಚ್ಚಿಸಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಅಭಿಪ್ರಾಯಪಟ್ಟರು.

Advertisement

ನಗರದ ಸುವಿಧಾ ಸಾಮಾಜಿಕ ಸಂಸ್ಥೆ, ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕಕ್ಕೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆ.ಪಿ.ಸಿ.ಸಿ. ವಕ್ತಾರ ಎಸ್‌.ಎಂ. ಪಾಟೀಲ (ಗಣಿಹಾರ) ಮಾತನಾಡಿ, ಪತ್ರಕರ್ತರು ಸಮಾಜದ ಕನ್ನಡಿ ಇದ್ದಂತೆ. ಒಳ್ಳೆಯ ಪತ್ರಕರ್ತರನ್ನು ಸರಕಾರ ಮತ್ತು ಸಮಾಜ ಗೌರವಿಸಬೇಕು. ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಪತ್ರಕರ್ತರು ಮಾಡುತ್ತಿರುವುದು ಅಭಿನಂದನಾರ್ಹರು ಎಂದರು.

ಸುವಿಧಾ ಸಾಮಾಜಿಕ ಸಂಸ್ಥೆಯ ಮುಖ್ಯಸ್ಥ ಫಯಾಜ್‌ ಕಲಾದಗಿ ಮಾತನಾಡಿ, ಪತ್ರಕರ್ತರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಅವರಿಗೆ ಉಚಿತ ವೈದ್ಯಕೀಯ ಸೇವೆ ಸಿಗುವಂತಾಗಬೇಕು ಎಂದರು.

ಅಬ್ದುಲ್‌ ಹಮೀದ್‌ ಮುಶ್ರೀಫ್‌, ಕಾಂತಾ ನಾಯಕ, ಮುಖಂಡ ಅಡಿವೆಪ್ಪ ಸಾಲಗಲ್‌, ನಗರಸಭೆ ಮಾಜಿ ಅಧ್ಯಕ್ಷ ಮಿಲಿಂದ್‌ ಚಂಚಲಕರ, ರಫೀಕ್‌ ಕಾಣೆ, ಅಬ್ದುಲ್‌ ರಜಾಕ್‌ ಹೊರ್ತಿ, ಡಾ| ಅಶೋಕ ಜಾಧವ, ಶಮಿತಾ ಶೆಟ್ಟಿ, ರಾಕೇಶ ಕಲ್ಲೂರ, ವೈಜನಾಥ ಕರ್ಪೂಮಠ, ಮಹಾದೇವ ರಾವಜಿ ಇತರರು ಇದ್ದರು.

Advertisement

ಕಾನಿಪ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಿ.ಬಿ. ವಡವಡಗಿ, ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಉಪಾಧ್ಯಕ್ಷರಾದ ಫಿರೋಜ್‌ ರೋಜಿಂದಾರ, ಪ್ರಕಾಶ ಬೆಣ್ಣೂರು, ಇಂದುಶೇಖರ ಮಣೂರು, ಖಜಾಂಜಿ ರಾಹುಲ್‌ ಆಪ್ಟೆ ಅವರನ್ನು ಸನ್ಮಾನಿಸಲಾಯಿತು.

ಮೊಹಮ್ಮದ್‌ ನಸೀಮ ರೋಜಿನಾರ, ಎಚ್‌.ಎಸ್‌. ಕಬಾಡೆ, ಎ.ಎ. ಜಾಹಗೀರದಾರ, ಐ.ಸಿ. ಪಠಾಣ, ಶಿವಾನಂದ ದುದ್ದಗಿ, ಶಫೀಕ್‌ ಜಾಹಗೀರದಾರ, ಬಸವರಾಜ ಬಿ.ಕೆ., ಇಲಿಯಾಸ್‌ ಸಿದ್ದೀಕಿ, ರಜಾಕ್‌ ಕಾಖಂಡಕಿ, ಡಿ.ಎಸ್‌. ಫೀರಜಾದೆ, ಫಿದಾ ಕಲಾದಗಿ, ಫೀರಾ ರೋಜಿನಾರ, ಪ್ರದೀಪ ಹಳಗುಣಕಿ, ಹಸನ್‌ ಕಲಾದಗಿ, ಲತೀಪ್‌ ಕಲಾದಗಿ, ಹಾಸಿಮ ಕಲಾದಗಿ, ಸುಜಾತಾ ಶಿಂದೆ, ಮಂಜುಳಾ ಜಾಧವ, ಇರ್ಪಾನ ಜಾಹಗೀರದಾರ, ಅನ್ನಾನ ಅತ್ತಾರ, ಪವಿತ್ರ ಶಿಂದೆ, ಸುಸ್ಮಿತಾ ಹಡಪದ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next