ಸಿದ್ದಾಪುರ: ಕುಡುಬಿ ಸಮಾಜದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ವಾಲಂಬನೆಯ ಪ್ರಗತಿಯ ಹಿತದೃಷ್ಟಿಯಿಂದ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕುಡುಬಿ ಸಮಾಜ ಸೌಹಾರ್ದ ಸಹಕಾರಿ ಸಂಘ ಯಶಸ್ವಿಯಾಗಲಿ. ಸಮುದಾಯದ ಪ್ರತಿಯೊಬ್ಬರಿಗೂ ಸಹಕಾರಿ ವ್ಯವಸ್ಥೆಯಲ್ಲಿ ಸೌಲಭ್ಯ ಸಿಗುವಂತಾಗಲಿ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ ಎಸ್.ಕೆ. ಹೇಳಿದರು.
ಅವರು ಆವರ್ಸೆ ಗ್ರಾಮದ ಬಂಡ್ಸಾಲೆ ಶ್ರೀ ಎಸ್.ಎನ್. ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಕುಡುಬಿ ಸಮಾಜ ಸೌಹಾರ್ದ ಸಹಕಾರಿ ಸಂಘ ಆವರ್ಸೆ ಬಂಡ್ಸಾಲೆ ಇದನ್ನು ಉದ್ಘಾಟಿಸಿ, ಮಾತನಾಡಿದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಭದ್ರತಾಕೋಶ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಪಿ. ಜಗನ್ನಾಥ ಶೆಟ್ಟಿ ಅಂಪಾರು ಗಣಕ ಯಂತ್ರ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಕುಡುಬಿ ಸಮಾಜ ಸಂಘದ ಅಧ್ಯಕ್ಷ ಎಂ.ಕೆ. ನಾಯ್ಕ ಮಿಯಾರು ಶೇರುಪತ್ರ ವಿತರಿಸಿದರು. ಬ್ರಹ್ಮಾವರ ಸೈಂಟ್ ಮೇರೀಸ್ ಸಿರಿಯನ್ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ| ವೈ ರವೀಂದ್ರನಾಥ ರಾವ್ ಚುನಾವಣಾ ಪ್ರಮಾಣ ಪತ್ರ ವಿತರಿಸಿದರು. ಕುಡುಬಿ ಸಮಾಜ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಚ್. ಬೆಳ್ಳ ನಾಯ್ಕ ಕೊಕ್ಕರ್ಣೆ ಅಧ್ಯಕ್ಷತೆ ವಹಿಸಿ, ಸಂಘದ ಧ್ಯೇಯೋದ್ದೇಶ ಹಾಗೂ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಅತಿಥಿಗಳಾಗಿ ಕುಂದಾಪುರ ಶಾಸಕ ಶ್ರೀನಿವಾಸ ಶೆಟ್ಟಿ ಹಾಲಾಡಿ, ಉಡುಪಿ ಜಿ.ಪಂ. ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಆವರ್ಸೆ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಕಿರಾಡಿ, ಕಟ್ಟಡ ಮಾಲಕ ಶಂಕರ ಪೂಜಾರಿ ಆವರ್ಸೆ, ಗೋಳಿಯಂಗಡಿ ಶ್ರೀದುರ್ಗಾ ವಿವಿಧೋದ್ದೇಶ ಸಹಕಾರ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮಣ ನಾಯ್ಕ ಆರ್ಡಿ, ಸಮಾಜ ಸೇವಕ ದುಗ್ಗ ನಾಯ್ಕ ಮುದೂರಿ, ಸಂಘದ ಉಪಾಧ್ಯಕ್ಷ ಉಮೇಶ ನಾಯ್ಕ ಕೊಕ್ಕರ್ಣೆ, ನಿರ್ದೇಶಕರಾದ ನಾಗ ನಾಯ್ಕ ಹೆಸ್ಕಾಂದ,
ಗಣೇಶ ನಾಯ್ಕ ಹಿಲಿಯಾಣ, ಅರುಣ ನಾಯ್ಕ ಅಲ್ತಾರು, ಅಣ್ಣಯ್ಯ ನಾಯ್ಕ ಕಿರಾಡಿ, ಚಂದ್ರಶೇಖರ ನಾಯ್ಕ ಹೆಸ್ಕಾಂದ, ಕೃಷ್ಣ ನಾಯ್ಕ ಅಲ್ತಾರು, ಚಂದ್ರ ಜಿ.ನಾಯ್ಕ ಗೋಳಿಯಂಗಡಿ, ಮಾಧವ ನಾಯ್ಕ ಕೊಕ್ಕರ್ಣೆ, ನಾರಾಯಣ ನಾಯ್ಕ ಅಲಾºಡಿ, ಲಕ್ಷ್ಮಣ ನಾಯ್ಕ ಸೂರ್ಗೋಳಿ, ದಿನೇಶ ನಾಯ್ಕ ಆರ್ಡಿ, ಪ್ರೇಮಾ ತಾರಿಕಟ್ಟೆ, ಪವಿತ್ರ ಅಲ್ತಾರು, ಕುಡುಬಿ ಹೋಳಿ ಕೂಡುಕಟ್ಟು ಅಧ್ಯಕ್ಷ ಸಾಂತ ನಾಯ್ಕ ಒಳಬೈಲು, ಸಂಘದ ಲೆಕ್ಕಾಧಿಕಾರಿ ವಿನಯ ಕೊಕ್ಕರ್ಣೆ, ಗುಮಾಸ್ತೆ ರಮ್ಯಾ ಅಮ್ರಕಲ್ಲು ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಸ್ವಸಹಾಯ ಸಂಘಗಳಿಗೆ ದಾಖಲೆ ಪತ್ರ, ಪಿಗ್ಮಿ ಸಂಗ್ರಾಹಕರಿಗೆ ಗಣಕ ಯಂತ್ರ ವಿತರಿಸಿದರು. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸುರೇಶ ನಾಯ್ಕ ಬಿಲ್ಲಾಡಿ ಸ್ವಾಗತಿಸಿದರು. ವೈಷ್ಣವಿ, ರಶ್ಮಿತಾ, ಶ್ರೇಯಾ ಪ್ರಾರ್ಥಿಸಿದರು. ಗಣೇಶ್ ಅರಸಮ್ಮಕಾನು ನಿರೂಪಿಸಿದರು. ಪವಿತ್ರಾ ಅಲ್ತಾರು ವಂದಿಸಿದರು.