Advertisement
ಘಟನೆ 1: ಇತ್ತೀಚೆಗೆ ತೃಪ್ತಿ ಹೊಸ ವಿಭಾಗಕ್ಕೆ ವರ್ಗಾವಣೆಯಾಗಿದ್ದಳು. ಮೊದಲು ಕೆಲಸ ಮಾಡು ತ್ತಿರುವ ವಿಭಾಗದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಾ ಳೆಂದು ಹೆಸರು ಪಡೆದುಕೊಂಡವಳು. ಹೊಸ ವಿಭಾಗಕ್ಕೆ ವರ್ಗಾವಣೆಯಾದ ಕೆಲವೇ ದಿನಗಳಲ್ಲಿ ಟೀಮ್ ಮೀಟಿಂಗ್ ಏರ್ಪಡಿಸಲಾಗಿತ್ತು. ಆ ಮೀಟಿಂಗಿನಲ್ಲಿ ಹೊಸತೊಂದು ಪ್ರಾಜೆಕ್ಟನ್ನು ಕಾರ್ಯ ಗತ ಮಾಡುವುದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ತೃಪ್ತಿಯು ಕೂಡ ಮೀಟಿಂಗಿನಲ್ಲಿ ಭಾಗವಹಿಸಿದ್ದಳು.
Related Articles
Advertisement
ಕಾರ್ಪೋರೆಟ್ ಲೋಕದಲ್ಲಿ ಇತ್ತೀಚೆಗೆ ಬಹಳ ಚರ್ಚೆಯಲ್ಲಿರುವ ವಿಷಯ ಮಾನಸಿಕ ಸುಭದ್ರತೆ (ಸೈಕಾಲಾಜಿಕಲ್ ಸೇಫ್ಟಿ). ಮನಃಶಾಸ್ತ್ರದಲ್ಲಿ ಇದೇನು ಹೊಸ ವಿಷಯವಲ್ಲ. 1960ರಲ್ಲಿ ಹಾರ್ವರ್ಡ್ ಯುನಿವರ್ಸಿಟಿ ಮೊದಲ ಬಾರಿಗೆ ಈ ವಿಷಯವನ್ನು ಪರಿಚಯಿಸಿತ್ತು. 1990ರಿಂದ ಈವರೆಗೂ “ನಡವಳಿಕೆ ನಿರ್ವಹಣೆ’ ವಿಷಯದ ಮೇಲೆ ಅನ್ವೇಷಣೆ ನಡೆಯುತ್ತಲೇ ಇದೆ. ಮಾನಸಿಕ ಸುಭದ್ರತೆ ಅಂದರೆ, ವ್ಯಕ್ತಿಯೋರ್ವ ಕೆಲಸದ ಸ್ಥಳದಲ್ಲಿ ಋಣಾತ್ಮಕ ಪರಿಣಾಮಗಳ ಭಯವಿಲ್ಲದೆ ತನ್ನ ವ್ಯಕ್ತಿತ್ವವನ್ನು ಪ್ರಸ್ತುತ ಪಡಿಸುವುದು ಮತ್ತು ಪರಿಸ್ಥಿತಿಯನ್ನು ಎದುರಿಸುವುದು. ಸಾಮಾನ್ಯ ಭಾಷೆಯಲ್ಲಿ ಹೇಳು ವುದಾದರೆ ಹಿಂಜರಿಕೆ ಇಲ್ಲದೆ ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು ಮತ್ತು ಕೆಲಸದಲ್ಲಿ ರಿಸ್ಕ್ ತೆಗೆದುಕೊಳ್ಳುವಾಗ ಋಣಾತ್ಮಕ ಪರಿಣಾಮಗಳ ಬಗ್ಗೆ ಹಾಗೂ ಸುತ್ತಮುತ್ತಲಿನವರ ತಿರಸ್ಕಾರದ ಬಗ್ಗೆ ಭಯ ಹೊಂದದೇ ಇರುವುದು.
ಮಾನಸಿಕ ಸುಭದ್ರತೆಯ ಮನಃಸ್ಥಿತಿ ಸೃಷ್ಟಿಸುವಲ್ಲಿ ಸಂವಹನ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ ಪರಿಸ್ಥಿತಿಗೆ ವ್ಯತಿರಿಕ್ತವಾಗಿದ್ದರೂ ಅದನ್ನು ಗೌರವ ದಿಂದ ಸ್ವೀಕರಿಸುವುದು ಹಾಗೂ ಅದರ ಅನು ಕೂಲ-ಅನನುಕೂಲದ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡುವುದು ಅತ್ಯವಶ್ಯ. ಇಂತಹ ವಾತಾವ ರಣದಲ್ಲಿ ಕಲಿಯುವ ಅವಕಾಶ, ಕೆಲಸದಲ್ಲಿ ಹೊಸತನದ ಪ್ರಯತ್ನ, ಯಥಾಸ್ಥಿತಿಯನ್ನು ಪ್ರಶ್ನಿಸುವ ಮನೋಭಾವ ಹೆಚ್ಚುತ್ತದೆ. ಮಾನಸಿಕ ಸುಭದ್ರತೆಯು ವೈಯಕ್ತಿಕ ಮತ್ತು ಗುಂಪಿನ ಕಾರ್ಯಕ್ಷಮತೆಯ ವೃದ್ಧಿಗೆ ಹಾಗೂ ಸೃಜನಶೀಲ ಕೆಲಸಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡುತ್ತದೆ.
ಎಷ್ಟೋ ಬಾರಿ ಮಕ್ಕಳು ತಮ್ಮ ಇಷ್ಟವಾದ ಹವ್ಯಾಸ ಅಥವಾ ಕ್ಷೇತ್ರವನ್ನು ಪೋಷಕರ ಹತ್ತಿರ ಹೇಳಲು ಹಿಂಜರಿಯುವುದರಿಂದ ಪ್ರತಿಭೆ ಅರಳುವ ಮೊದಲೇ ಕಮರಿ ಹೋಗುತ್ತದೆ. ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದೇ ಫೇಲಾದರೆ ಪೋಷಕರು ನನ್ನನ್ನು ಹೇಗೆ ಸ್ವೀಕರಿಸುತ್ತಾರೋ ಅನ್ನುವ ಭಯ ಮಕ್ಕಳನ್ನು ಕಾಡುತ್ತಿರುತ್ತದೆ. ನದಿಯ ಹರಿವಿನ ನೈಜ ಪಥವನ್ನು ಕೃತಕವಾಗಿ ಬದಲಿಸಿದಾಗ ನೀರಿನ ಹರಿವು ತನ್ನ ನೈಜತೆಯನ್ನು ಹೇಗೆ ಕಳೆದುಕೊಳ್ಳುತ್ತದೆಯೋ ಹಾಗೆಯೇ ಪೋಷಕರ ಒತ್ತಡ ಅಥವಾ ಹೇರಿ ಕೆಯ ಮನೋಭಾವ ಮಕ್ಕಳ ನೈಜ ಪ್ರತಿಭೆ ಮೊಳಕೆಯೊಡೆಯದಂತೆ ಮಾಡಬಹುದು.
ವೈಯಕ್ತಿಕವಾಗಿರಲಿ ಅಥವಾ ವೃತ್ತಿಗೆ ಸಂಬಂಧ ಪಟ್ಟದ್ದೇ ಆಗಿರಲಿ ಜತೆಯಲ್ಲಿರುವವರ ವಿಭಿನ್ನತೆ ಯನ್ನು ಸಹಜವಾಗಿ ಸ್ವೀಕರಿಸಿ, ಅವರನ್ನು ಹಾಗೂ ಅವರ ಯೋಚನೆಯನ್ನು ಗೌರವಿಸಿ ತಪ್ಪೆನಿಸಿದರೆ ಅದನ್ನು ಅವರಿಗೆ ವಿವರಿಸಿ ಅವರ ಆತ್ಮಗೌರವಕ್ಕೆ ಪೆಟ್ಟಾಗದಂತೆ ಜಾಗ್ರತೆ ವಹಿಸಿ ಚರ್ಚೆ ನಡೆಸುವುದು ಅವಶ್ಯ. ಮಾನಸಿಕ ಭದ್ರತೆ ಇಲ್ಲದ ಸಂದರ್ಭದಲ್ಲಿ ಅದನ್ನು ಸಹಜವಾಗಿ ಸ್ವೀಕರಿಸಿ, ನಮ್ಮ ಆತ್ಮವಿಶ್ವಾಸ, ಕೆಲಸಕಾರ್ಯದ ಮೇಲೆ ಪ್ರಭಾವ ಬೀರದಂತೆ ಎಚ್ಚರಿಕೆ ವಹಿಸುವುದು ಅಗತ್ಯ.
ಶಂಕರಿ ಎಸ್. ಹೆಗ್ಡೆ , ಕುಂದಾಪುರ