Advertisement
ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದು, ಕಿಡಿಗೇಡಿಗಳು ಕೋಳಿತ್ಯಾಜ್ಯ, ಕಸದ ರಾಶಿ, ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆದ ಪರಿಣಾಮ ದುರ್ನಾತ ಹಬ್ಬಿದೆ. ಸ್ಥಳೀಯಾಡಳಿತ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಫಲ ಕಂಡಿಲ್ಲ. ಸಂಘ ಸಂಸ್ಥೆಗಳ ಸ್ವತ್ಛತಾ ಕಾರ್ಯ ನಡೆಸುವ ಬೆನ್ನಲ್ಲೇ ಕಿಡಿಗೇಡಿಗಳು ತ್ಯಾಜ್ಯ ಎಸೆದು ಮತ್ತೆ ಗಲೀಜು ಉಂಟು ಮಾಡುತ್ತಿದ್ದಾರೆ.
ಆಹಾರ ತಿಂದುಂಡ ಪ್ಲಾಸ್ಟಿಕ್ ಪರಿಕರಗಳ ಜತೆಗೆ ಕೋಳಿ ತ್ಯಾಜ್ಯವನ್ನು ನಡು ರಸ್ತೆಯಲ್ಲೇ ಎಸೆದಿದ್ದಾರೆ. ಹೀಗಾಗಿ ಹಲವು ಮೀಟರ್ ದೂರ ವಾಸನೆ ಹಬ್ಬಿದೆ. ಸ್ಥಳೀಯಾಡಳಿತ ಸಿಸಿ ಕೆಮರಾ ಅಳವಡಿಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.