ಕೋಳಿತ್ಯಾಜ್ಯ, ತರಕಾರಿ ಮೊಟ್ಟಿಗಳ ತ್ಯಾಜ್ಯ, ಪ್ಲಾಸ್ಟಿಕ್ ಸೇರಿದಂತೆ ನಾನಾ ರೀತಿಯ ಕಸಗಳನ್ನು ಪೇಟೆಯಲ್ಲಿರುವ ಅಂಗಡಿ ಹೊಟೇಲಿನವರು ಇಲ್ಲಿ ತಂದು ಎಸೆಯುವುದರಿಂದ ತ್ಯಾಜ್ಯರಾಶಿ ಬೃಹದಾಕಾರವಾಗಿ ಬೆಳೆಯುತ್ತ ಹೋಗುತ್ತಿದೆ. ತ್ಯಾಜ್ಯ ರಾಶಿಯಲ್ಲಿರುವ ಕರಗದ ಪ್ಲಾಸ್ಟಿಕ್‌ಗಳು ದನಕರುಗಳ ಆಹಾರವಾಗುತ್ತಿದೆ. ಈಗ ಮಳೆ ಸಂದರ್ಭ ಸೊಳ್ಳೆಗಳು ಉತ್ಪತ್ತಿ ಯಾಗುವುದರಿಂದ ಪರಿಸರದ ಜನರಿಗೆ ಸಾಂಕ್ರಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
Advertisement
ಬೀದಿ ನಾಯಿಗಳ ಕಾಟ..ತ್ಯಾಜ್ಯದಿಂದಾಗಿ ಸಾಕಷ್ಟು ದುರ್ಗಂಧ ಸುತ್ತಮುತ್ತಲಿನ ಪರಿಸರದಲ್ಲಿ ಹರಡಿದ್ದು ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಕೊಳೆತ ತ್ಯಾಜ್ಯಗಳನ್ನು ಕಾಗೆಗಳು ತಿನ್ನಲು ಎಳೆದಾಡಿ ಪರಿಸ್ಥಿತಿ ಉಲ್ಬಣಿಸಲು ಕಾರಣವಾಗಿದೆ. ನಾಯಿಗಳು ಆಹಾರ ಹುಡುಕುತ್ತಾ ತ್ಯಾಜ್ಯಗಳನ್ನು ಎಳೆದಾಡುತ್ತಿದ್ದು ಒಂದಕ್ಕೊಂದು ಜಗಳವಾಗುತ್ತಿರುವುದು ಈ ದಾರಿಯಲ್ಲಿ ಸಾಗಲು ಭೀತಿ ಉಂಟಾಗಿದೆ.
ಹೊರವಲಯದ ಜನರು ಬಂದು ಇಲ್ಲಿ ಗೋಣಿ ಚೀಲದಲ್ಲಿ ತಂದು ಎಸೆಯುತ್ತಾರೆ. ಇಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ರಸ್ತೆ ಬದಿ ತ್ಯಾಜ್ಯ ಎಸೆಯುವವರ ವಿರುದ್ದ ನಗರಸಭೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಭಾಗದಲ್ಲಿ ಕಸ ಎಸೆಯದಂತೆ ಆ ಜಾಗವನ್ನು ಸ್ವಚ್ಚಗೊಳಿಸಿ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕಾಗಿದೆ.
– ಮಂಜು ಕೊಳ ,ಸ್ಥಳೀಯರು