ಬೆಳ್ಮಣ್: ಇತ್ತೀಚೆಗೆ ಮುಂಡ್ಕೂರು ಗ್ರಾಮ ಪಂಚಾಯತ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಜಯ ಗಳಿಸಿದ್ದ ಸೂರಜ್ ಸಾಲ್ಯಾನ್ ಸಮಾಜಮುಖೀ ಚಿಂತನೆಗೆ ತನ್ನನ್ನು ತೊಡಗಿಸಿದ್ದು ಸ್ವಂತ ಖರ್ಚಿನಲ್ಲಿ ಸ್ಥಳೀಯ ಯುವಕರ ಜತೆ ಸೇರಿ ನಾನಿಲ್ತಾರು ರಸ್ತೆಯ ಹೊಂಡ ಗುಂಡಿ ಮುಚ್ಚಿದ್ದಾರೆ.
ರಸ್ತೆಯಲ್ಲಿ ಹೊಂಡಗಳು ಬಿದ್ದರೆ ಸಾಮಾನ್ಯವಾಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ರಸ್ತೆಯ ಹೊಂಡ ಮುಚ್ಚಲಾಗುತ್ತದೆ. ಆದರೆ ಮುಂಡ್ಕೂರು ಗ್ರಾಮದಲ್ಲಿ ಇಲಾಖೆ ಹಾಗೂ ಅಧಿಕಾರಿಗಳನ್ನು ಕಾಯದೇ ಯುವಕರೇ ರಸ್ತೆ ಹೊಂಡ ಮುಚ್ಚಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಬೆಳ್ಮಣ್‌ನಿಂದ ಮುಂಡ್ಕೂರು ಮಾರ್ಗವಾಗಿ ಬಜ್ಪೆ ಮಂಗಳೂರು ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ ನಾನಿನ್ತಾರು ಸೇತುವೆಯ ಬಳಿಯಲ್ಲಿ ಬƒಹತ್ ಗಾತ್ರದ ಹೊಂಡ ನಿರ್ಮಾಣವಾಗಿದ್ದು ವಾಹನ ಸವಾರರಿಗೆ ಸಮಸ್ಯೆಯಾಗುತ್ತಿತ್ತು. ಹಲವು ವಾಹನ ಸವಾರರು ಹೊಂಡದ ಪರಿವೆ ಇಲ್ಲದೆ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದು ನಿತ್ಯ ಒಂದಲ್ಲ ಒಂದು ಅವಘಡಗಳು ಇಲ್ಲಿ ಮಾಮೂಲಾಗಿತ್ತು. ಇದನ್ನು ಮನಗಂಡ ಮುಂಡ್ಕೂರು ನಾನಿಲ್ತಾರಿನ ಯುವಕರ ತಂಡ ಯಾವುದೇ ಅ ಧಿಕಾರಿಗಳನ್ನು ಕಾಯದೆ ತಾವೇ ಸ್ವತಃ ಖರ್ಚಿನಲ್ಲಿ ಹೊಂಡಕ್ಕೆ ಕಾಂಕ್ರೀಟ್ ಹಾಕಿ ಮುಚ್ಚಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ನಾನಿಲ್ತಾರು ಸೇತುವೆಯ ಇಳಿಜಾರು ಪ್ರದೇಶವಾಗಿದ್ದು ಬೆಳ್ಮಣ್ ಕಡೆಯಿಂದ ಮುಂಡ್ಕೂರಿನತ್ತ ಬರುವ ವಾಹನಗಳು ಅತ್ಯಂತ ವೇಗವಾಗಿ ಬರುತ್ತಿದ್ದು ಹೊಂಡದ ಪರಿವೆ ಇಲ್ಲದೆ ನಿತ್ಯ ಅಪಘಾತಗಳು ನಡೆಯುತ್ತಿದ್ದವು. ಈಗಾಗಲೇ ಹಲವು ಬೆ„ಕ್ ಸವಾರರು ಬಿದ್ದು ಗಾಯಗೊಂಡಿದ್ದರು. ರಸ್ತೆಯಲ್ಲಿ ಹೊಂಡ ಬಿದ್ದು ಹಲವು ತಿಂಗಳು ಕಳೆದರೂ ಸಂಬಂಧಪಟ್ಟವರು ಸ್ಪಂದಿಸದ ಹಿನ್ನೆಲೆಯಲ್ಲಿ ನಾನಿಲ್ತಾರಿನ ಯುವಕರ ತಂಡ ಹೊಂಡ ಮುಚ್ಚುವ ಕಾರ್ಯಕ್ಕೆ ಮುಂದಾಗಿತ್ತು. ನೂತನವಾಗಿ ಮುಂಡ್ಕೂರು ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಸೂರಾಜ್ ಸಾಲ್ಯಾನ್‌ರವರ ಈ ಜನಪರ ಕಾಳಜಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಸ್ವಂತ ಖರ್ಚಿನಲ್ಲಿ ಕೆಲಸ
ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕೆಲಸ ಮಾಡಿದ್ದೇವೆ. ರಸ್ತೆಯಲ್ಲಿ ಹೊಂಡ ಬಿದ್ದು ಹಲವು ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಯುವಕರ ತಂಡದೊಂದಿಗೆ ನಮ್ಮದೇ ಖರ್ಚಿನಲ್ಲಿ ಹೊಂಡವನ್ನು ಮುಚ್ಚುವ ಕೆಲಸ ಮಾಡಿದ್ದೇವೆ.
– ಸೂರಜ್ ಸಾಲ್ಯಾನ್,
ಗ್ರಾ.ಪಂ. ಸದಸ್ಯ ಮುಂಡ್ಕೂರು.