Advertisement

Heavy Rain ಸವಣೂರು-ಬಂಬಿಲ-ಅಂಕತಡ್ಕ ರಸ್ತೆಯಲ್ಲಿ ಕುಸಿಯುತ್ತಿದೆ ಬರೆ

11:19 PM Jul 19, 2024 | Team Udayavani |

ಸವಣೂರು: ಕಡಬ ತಾಲೂಕಿನ ಸವಣೂರು-ಬಂಬಿಲ- ಅಂಕತಡ್ಕ ರಸ್ತೆಯ ನಾಡೋಳಿಯಲ್ಲಿ ಮಳೆಯಿಂದಾಗಿ ಬರೆ ಕುಸಿಯುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ.

Advertisement

ನಾಡೋಳಿಯಲ್ಲಿ ನೂತನ ಸೇತುವೆ ನಿರ್ಮಾಣ ಸಮಯದಲ್ಲಿ ರಸ್ತೆ ಅಗಲಗೊಳಿಸಲು ಹಾಗೂ ಸೇತುವೆಗೆ ಹೊಂದಿಕೊಂಡಂತೆ ರಸ್ತೆ ನಿರ್ಮಿಸಲು ಬೃಹತ್‌ ಬರೆಯನ್ನು ಅಗೆಯಲಾಗಿತ್ತು. ಪರಿಣಾಮವಾಗಿ ದುರ್ಬಲಗೊಂಡ ಬರೆ ಈಗ ಕುಸಿಯುತ್ತಿದೆ. ಬರೆಯ ಮೇಲೆ ವಿದ್ಯುತ್‌ ಕಂಬ ಕೂಡ ಇದ್ದು, ಅದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ವಾಮಂಜೂರು ಕೆತ್ತಿಕಲ್ಲಿನ ಗುಡ್ಡದಲ್ಲಿ ಭೂ ಕುಸಿತ
ಮಂಗಳೂರು: ವಾಮಂಜೂರು ಬಳಿಯ ಕೆತ್ತಿಕಲ್ಲಿನಲ್ಲಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ರಸ್ತೆ ಅಗಲಗೊಳಿಸಲು ಗುಡ್ಡವನ್ನು ಅಗೆದಿರುವ ಭಾಗದಲ್ಲಿ ಶುಕ್ರವಾರ ಸಣ್ಣ ಪ್ರಮಾಣದ ಭೂ ಕುಸಿತ ಉಂಟಾಗಿದೆ.

ಕಾಮಗಾರಿಗಾಗಿ ಗುಡ್ಡದ ಭಾಗವನ್ನು ಹಂತ ಹಂತವಾಗಿ ಅಗೆಯಲಾಗಿದ್ದು, ಶುಕ್ರವಾರ ಸಂಜೆ ವೇಳೆ ಮೇಲಿನ ಭಾಗದಿಂದ ಮಣ್ಣು ಜರಿದು ಬಿದ್ದಿದೆ. ವಿಪರೀತ ಮಳೆಯಿಂದ ಮಣ್ಣು ಸಡಿಲವಾಗಿದ್ದು, ಹಂತ ಹಂತವಾಗಿ ಮಣ್ಣು ಜರಿದು ಬೀಳುತ್ತಿರುವ ದೃಶ್ಯವನ್ನು ಸ್ಥಳೀಯರು ವೀಡಿಯೋ ಮಾಡಿದ್ದಾರೆ. ಜರಿದ ಮಣ್ಣು ಮೇಲ್ಭಾಗದಲ್ಲೇ ನಿಂತಿದ್ದು, ದೊಡ್ಡ ಮಟ್ಟದಲ್ಲಿ ಕುಸಿತ ಉಂಟಾದರೆ ರಸ್ತೆಗೆ ಜರಿದು ಬೀಳುವ ಸಾಧ್ಯತೆಯಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆಯಿಂದಲೇ ತುರ್ತು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಸ್ಥಳದಲ್ಲಿ ಪೊಲೀಸರನ್ನೂ ನಿಯೋಜಿಸಲಾಗಿದೆ.

Advertisement

ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್‌ ಪ್ರಶಾಂತ್‌ ಪಾಟೀಲ್‌, ಉಪ ವಿಭಾಗಾಧಿಕಾರಿ ಹರ್ಷವರ್ಧನ್‌, ಮನಪಾ ಸದಸ್ಯೆ ಹೇಮಲತಾ ಸಾಲ್ಯಾನ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ರಾತ್ರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next