Advertisement

ಕೃಷಿ ಸಂಸ್ಕೃತಿಯಿಂದ ಜಾನಪದ ಉಗಮ; ಎಸ್‌.ಬಾಲಾಜಿ

04:00 PM Mar 30, 2022 | Team Udayavani |

ಬಾಗಲಕೋಟೆ: ಕೃಷಿ ಸಂಸ್ಕೃತಿಯಿಂದ ಜಾನಪದ ಉಗಮವಾಗಿದ್ದು ಜಾನಪದ ಕಲಾವಿದರ ಬಗ್ಗೆ ಸರಕಾರ ನಿರ್ಲಕ್ಷ ಭಾವನೆ ತೋರುತ್ತಿದೆ ಎಂದು ಕನ್ನಡ ಜಾನಪದ ಪರಿಷತ್‌ ರಾಜ್ಯಾಧ್ಯಕ್ಷ ಡಾ|ಎಸ್‌.ಬಾಲಾಜಿ ಆರೋಪಿಸಿದರು.

Advertisement

ತಾಲೂಕಿನ ಅನಗವಾಡಿ ಬಿ.ಎನ್‌. ಖೋತ ಇಂಟರ್‌ನ್ಯಾಶನಲ್‌ ಪಬ್ಲಿಕ್‌ ಸ್ಕೂಲ್‌ ಆವರಣದಲ್ಲಿ ಕನ್ನಡ ಜಾನಪದ ಪರಿಷತ್‌ ತಾಲೂಕ ಘಟಕ ಉದ್ಘಾಟನೆ, ಪದಗ್ರಹಣ, ಕೃತಿ ಬಿಡುಗಡೆ ಮತ್ತು ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಜಾನಪದ ಪರಿಷತ್‌ ಕಲಾವಿದರ ದಾಖಲೀಕರಣ, ಕಲೆ ಮತ್ತು ಕಲಾವಿದರ ಸಂರಕ್ಷಣೆ ಮೂಲ ಉದ್ದೇಶವಾಗಿದೆ ಎಂದು ಜಾನಪದ ಆಯಾಮಗಳ ಉಳಿವಿಗಾಗಿ ನಾಡಿನಾದ್ಯಂತ ಜಾನಪದ ಪರಿಷತ್‌ ಸುಮಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಪಕ್ಕದ ರಾಜ್ಯಗಳಲ್ಲಿ ಸರಕಾರಗಳು ಕಲಾವಿದರಿಗೆ 10 ಸಾವಿರ ರೂ. ವರೆಗೆ ಮಾಸಾಶನ ನೀಡುತ್ತಿದ್ದಾರೆ. ನಮ್ಮ ರಾಜ್ಯ ಸರಕಾರ 2 ಸಾವಿರ ಮಾತ್ರ ನೀಡುತ್ತಿದ್ದು, ಅದನ್ನು 5 ಸಾವಿರವರೆಗೆ ವಿಸ್ತರಿಸಬೇಕೆಂದು ಆಗ್ರಹಿಸುತ್ತದೆ.

ಕಲಾವಿದರು ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಕಲಾವಿದರು ಜೀವ ಬಿಟ್ಟರು. ಅವರ ಕಡೆಗೆ ಸರಕಾರ ಗಮನ ಹರಿಸಲಿಲ್ಲ. ಕಲಾವಿದರಿಗೆ ನೆರವು ನೀಡುತ್ತೇವೆ ಎಂದು ಭರವಸೆ ನೀಡಿದ ಸರಕಾರ ಸಹಾಯವೇ ಮಾಡಲಿಲ್ಲ. ರಾಜ್ಯದಲ್ಲಿ ಎಷ್ಟು ರಂಗಭೂಮಿ, ವೃತ್ತ ರಂಗಭೂಮಿ ಕಲಾವಿದರು ಇದ್ದಾರೆ. ಅವರ ಸಾಮಾಜಿಕ ಮತ್ತು ಆರ್ಥಿಕತೆಯ ಕುರಿತು ಸರಕಾರ ಸಮೀಕ್ಷೆ ಮಾಡಬೇಕೆಂದು ಜಾನಪದ ಪರಿಷತ್‌ ಆಗ್ರಹಿಸುತ್ತದೆ ಎಂದರು.

ಸಾಹಿತಿ-ಪತ್ರಕರ್ತ ಡಿ. ಎಂ. ಸಾವಕಾರ ರಚಿತ ರಾಜಪಥ ಹಾಗೂ ಹೊಸ ಹೆಜ್ಜೆ ಕೃತಿಯನ್ನು ಮಾಜಿ ಸಚಿವ ಎಸ್‌. ಆರ್‌. ಪಾಟೀಲ ಬಿಡುಗಡೆ ಮಾಡಿ ಮಾತನಾಡಿದರು. ಕುಂದರಗಿ ಚರಂತಿಮಠದ ವಿಶ್ವನಾಥ ದೇವರು ಸಾನ್ನಿಧ್ಯ ವಹಿಸಿದ್ದರು. ಬನಶಂಕರಿದೇವಿ ವಿದ್ಯಾ ಸಂಸ್ಥೆಯ ಕಾರ್ಯಾಧ್ಯಕ್ಷ ಬಸವರಾಜ ಖೋತ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ|ರಾಜಶೇಖರ ಮಠಪತಿ (ರಾಗಂ) ಕೃತಿಗಳ
ಪರಿಚಯ ಮಾಡಿ ಮಾತನಾಡಿದರು.

Advertisement

ಜಿಲ್ಲಾಧ್ಯಕ್ಷ ಡಿ.ಎಂ.ಸಾಹುಕಾರ, ತಾಲೂಕಾಧ್ಯಕ್ಷ ಬಸವರಾಜ ದಾವಣಗೇರಿ, ಆನಂದ್‌ ಜಡಿಮಠ, ಸಿ.ಆರ್‌.ಸೋರಗಾವಿ, ಕಸಾಪ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಿ.ಕೆ. ತಳವಾರ್‌, ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ವೀರೇಂದ್ರ ಶೀಲವಂತ, ಎಸ್‌.ಎಂ. ಕಟಗೇರಿ, ಸಿದ್ದಪ್ಪ ಬಿದರಿ, ಕೆ.ಎಸ್‌. ಸೋಮನಕಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next