ಬೆಳಗಾವಿ: 2024 ರ ಲೋಕಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ಎರಡು ಸೇರಿ ದೇಶದಲ್ಲಿ ಒಟ್ಟು 50 ಹೊಸ ರಾಜ್ಯಗಳು ಉದಯವಾಗಲಿವೆ ಎಂದು ಅರಣ್ಯ ಸಚಿವ ಉಮೇಶ ಕತ್ತಿ ಹೊಸ ಬಾಂಬ್ ಸಿಡಿಸಿದರು. ನಗರದಲ್ಲಿ ಬುಧವಾರ ನ್ಯಾಯವಾದಿಗಳ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು ಉತ್ತರ ಕರ್ನಾಟಕ ಸೇರಿದಂತೆ ಎರಡು ರಾಜ್ಯಗಳು ಹೊಸದಾಗಿ ಅಸ್ತಿತ್ವಕ್ಕೆ ಬರಲಿವೆ ಎಂದರು.
2024 ರ ಚುನಾವಣೆ ನಂತರ ಮೋದಿ ಅವರೇ ಹೊಸ ರಾಜ್ಯಗಳನ್ನು ಪ್ರಕಟಿಸಲಿದ್ದಾರೆ. ಉತ್ತರಪ್ರದೇಶದ ದಲ್ಲಿ ನಾಲ್ಕು, ಮಹಾರಾಷ್ಟ್ರ ದಲ್ಲಿ ಮೂರು ಹಾಗೂ ಕರ್ನಾಟಕದಲ್ಲಿ ಎರಡು ರಾಜ್ಯಗಳು ಅಸ್ತಿತ್ವಕ್ಕೆ ಬರಲಿವೆ ಎಂದರು.
ಬೆಳಗಾವಿ ಸುವರ್ಣ ವಿಧಾನಸೌಧ ಹೊಂದಿದೆ. ಧಾರವಾಡದಲ್ಲಿ ಹೈಕೋರ್ಟ್ ಇದೆ. ಕಿತ್ತೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಚಿಂತನೆ ನಡೆದಿದ್ದು ಉತ್ತರ ಕರ್ನಾಟಕ ಎಲ್ಲ ಸೌಲಭ್ಯಗಳನ್ನು ಹೊಂದಿದಂತಾಗಿದ್ದು ನೂತನ ರಾಜ್ಯ ಆಗುವದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರು.
ಇದನ್ನೂ ಓದಿ : ಅಗ್ನಿಪಥ್ ಯೋಜನೆ ತರಲು ಹೇಳಿದವರು ಯಾರು? : ಹೆಚ್ ಡಿಕೆ ಪ್ರಶ್ನೆ
ಬೆಂಗಳೂರು ಈಗಾಗಲೇ ತುಂಬಿ ಹೋಗಿದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಸಂಚಾರ ಸಮಸ್ಯೆ ವಿಪರೀತ ವಾಗಿದೆ. ಒಂದು ಕಿಲೋಮೀಟರ್ ದೂರ ಹೋಗಲು ತಾಸು ಗಟ್ಟಲೇ ಟ್ರಾಫಿಕ್ ದಲ್ಲಿ ಸಿಲುಕಬೇಕಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಉತ್ತರ ಕರ್ನಾಟಕ ರಾಜ್ಯ ಸ್ಥಾಪನೆ ಮಾಡುವುದರಲ್ಲಿ ಯಾವ ತಪ್ಪಿಲ್ಲ. ಅದಕ್ಕೆ ಎಲ್ಲರೂ ಕೂಡಿ ಪ್ರಯತ್ನಿಸಬೇಕು ಎಂದರು.