Advertisement

“ಪ್ರಜೆಗಳ ಹಕ್ಕನ್ನು ಕಸಿಯಲಾಗದು’

10:34 AM Jul 04, 2017 | Team Udayavani |

ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳಲ್ಲಿ ಪ್ರಜೆಗಳ  ಹಕ್ಕುಗಳನ್ನು ಸಂರಕ್ಷಿಸುವಲ್ಲಿ ನ್ಯಾಯಾಂಗ
ತನ್ನದೇ ಆದ ಮಹತ್ವ ಹೊಂದಿದ್ದು ಬಲಾಡ್ಯರಿಂದ ಅಶಕ್ತರ ಹಕ್ಕುಗಳನ್ನು ಸದಾ ಕಾಪಾಡುತ್ತಿದೆ ಎಂದು ರಾಜ್ಯ ಉತ್ಛ
ನ್ಯಾಯಾಲಯದ ನ್ಯಾಯಮೂರ್ತಿ ಜಯಂತ್‌ ಪಟೇಲ್‌ ತಿಳಿಸಿದರು.

Advertisement

ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ 3ನೇ ಹಂತದ ಜಿಲ್ಲಾ ನ್ಯಾಯಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಬಲಾಡ್ಯರಿಂದ, ಅಧಿಕಾರವಂತರಿಂದ ಪ್ರಜೆಗಳ ಹಕ್ಕನ್ನು ಕಸಿಯಲಾಗದು. ಎಲ್ಲಾ ಪ್ರಜೆಗಳ
ಹಕ್ಕುಗಳ ಸಂರಕ್ಷಕನಾಗಿ ನ್ಯಾಯಾಂಗ ಕಾರ್ಯನಿರ್ವಹಿಸುತ್ತಿದೆ. ಕಾನೂನು ಮೇಲುಗೈ ಪಡೆಯಬೇಕೇ ಹೊರತು,
ಶಕ್ತಿಯೂ ಅಲ್ಲ, ಅಧಿಕಾರವೂ ಅಲ್ಲ ಎಂದು ಹೇಳಿದರು.

ನ್ಯಾಯಾಂಗದಲ್ಲಿ ಕಾರ್ಯನಿರ್ವ ಹಿಸುವವರಿಗೆ 3 ಪ್ರಮುಖ ಲಕ್ಷಣಗಳು ಇರಬೇಕು. ಅದರಲ್ಲಿ ಮೊದಲನೆಯದು
ಸ್ಪಷ್ಟ ನೋಟ. ಕಾನೂನಿನ ಜಾನದೊಂದಿಗೆ ಸಾಮಾಜಿಕ ಹಿನ್ನೆಲೆಯ ಜಾನವೂ ಇರಬೇಕು. ಇಂತಹ ದೃಷ್ಟಿಕೋನ ಇದ್ದಾಗ ಉತ್ತಮ ಕಾರ್ಯ ಮತ್ತು ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತದೆ. ಎರಡನೆಯದು ಜಾಣತನ ಅಥವಾ ವಿವೇಕ. ವಿವೇಕದ ಜಾನವಿದ್ದರೆ ಯಾವುದೇ ಒಂದು ಪ್ರಕರಣ ಎದುರಾದಾಗ ಅದನ್ನು ಹೇಗೆ ನಿಭಾಯಿಸಬೇಕು
ಎಂಬ ಶಕ್ತಿ ಬರುತ್ತದೆ. ಮೂರನೆಯದು ಸಾಮರ್ಥ್ಯ ಅಥವಾ ಧೈರ್ಯ. ಕಾನೂನನ್ನು ಎತ್ತಿಹಿಡಿಯಬೇಕಾದ ಸಂದರ್ಭ ಬಂದಾಗ ಗೊಂದಲಕ್ಕೆ ಒಳಗಾಗುವ ಅವಕಾಶಗಳಿರುತ್ತವೆ. ಅಂತಹ ಸಂದರ್ಭದಲ್ಲಿ ಧೈರ್ಯ ಮತ್ತು ಸಾಮರ್ಥ್ಯವಿದ್ದರೆ ಎಂತಹುದೇ ಪ್ರಕರಣ ಬಂದರೂ ಅದನ್ನು ಆ ಸಾಮರ್ಥ್ಯದಿಂದ ನಿಭಾಯಿಸಬಹುದು ಎಂದು ಹೇಳಿದರು. 

ನ್ಯಾಯಾಂಗದಿಂದ ಜನತೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಜನತೆ ನಿರೀಕ್ಷೆಯನ್ನು ಹುಸಿ ಮಾಡಬಾರದು. ಸಂವಿಧಾನದತ್ತವಾಗಿ ಇರುವ ಅಧಿಕಾರ ಚಲಾಯಿಸಿ ಕಾನೂನಿನ ಪರಿಧಿಯೊಳಗೆ ಎಲ್ಲರೂ ಕೆಲಸ ಮಾಡಬೇಕು.
ತುಮಕೂರಿನಲ್ಲಿ ಇರುವ ನ್ಯಾಯಾಲಯ ಸಂಕೀರ್ಣ ಅತ್ಯಂತ ಉತ್ತಮ ಕಟ್ಟಡವಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಉತ್ತಮ ಕಟ್ಟಡ ನಿರ್ಮಾಣವಾಗಿದೆ. ಇದು ವಕೀಲರಿಗೆ, ನ್ಯಾಯಾಧೀಶರಿಗೆ, ಕಕ್ಷಿದಾರರಿಗೆ ಎಲ್ಲರಿಗೂ ಲಭ್ಯವಾಗುವಂತಾಗಬೇಕು. ಕಟ್ಟಡ ಕೇವಲ ಕಟ್ಟಡವಾಗಬಾರದು. ಅದು ಜಾನ ಮಂದಿರವಾಗಬೇಕು ಎಂದು ಕರೆ ನೀಡಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಹಿಂದಿನ ದಿನಗಳಲ್ಲಿ ಸಣ್ಣ ಕೊಠಡಿಗಳಲ್ಲಿ ಕಾರ್ಯನಿರ್ವಹಿಸಬೇ ಕಾಗಿತ್ತು. ಇದೀಗ ಕಟ್ಟಡಗಳು ವಿಶಾಲವಾಗಿರುವುದರಿಂದ ನ್ಯಾಯಾಧೀ ಶರಿಗೆ, ವಕೀಲರಿಗೆ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಲು ಸಾಧ್ಯವಾಗಿದೆ.
ಕೆ.ಎಚ್‌.ಹರಿಕುಮಾರ್‌, ವಕೀಲರ ಸಂಘದ ಅಧ್ಯಕ್ಷ 

Advertisement
Advertisement

Udayavani is now on Telegram. Click here to join our channel and stay updated with the latest news.

Next