Advertisement
ಸದನದಲ್ಲಿ ಸಚಿವರು ನೀಡಿದ ಈ ಹೇಳಿಕೆಯಿಂದ ಆಕ್ರೋಶ ಗೊಂಡ ಬಿಜೆಪಿ ಸದಸ್ಯರು, ಕೂಡಲೇ ಸುತ್ತೋಲೆ ವಾಪಸ್ ಪಡೆದು ಎಲ್ಲಾ ಸಮುದಾಯಗಳ ಮುಗಟಛಿರ ವಿರುದಟಛಿ ದಾಖಲಿಸಿರುವ ಕೇಸ್‌ಗಳನ್ನು ವಾಪಸ್ ಪಡೆಯುವ ಕುರಿತು ಸುತ್ತೋಲೆ ಹೊರಡಿಸಬೇಕೆಂದು ಆಗ್ರಹಿಸಿದರು. ಅಲ್ಲದೆ, ಈ ಸರ್ಕಾರದ ಅಲ್ಪಸಂಖ್ಯಾತರ ತುಷ್ಠಿಕರಣ ನೀತಿಯಿಂದ ಜಾತಿ ಕಲಹ, ಕೋಮು ವೈಷಮ್ಯ ಉಂಟಾಗುತ್ತಿದೆ. ಜಾತಿ, ಧರ್ಮಗಳಲ್ಲಿ ಒಡಕು ಮೂಡಿಸುವ ಬದಲು ಎಲ್ಲರನ್ನೂ ಒಂದೇ ರೀತಿ ನೋಡಬೇಕು ಎಂದು ಒತ್ತಾಯಿಸಿದರು. ಮಧ್ಯಪ್ರವೇಶಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಸುತ್ತೋಲೆ ವಾಪಸ್ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು. ಅದನ್ನು ಸದನದಲ್ಲಿ ಹಾಜರುಪಡಿಸುವಂತೆ ಜಗದೀಶ ಶೆಟ್ಟರ್ಆಗ್ರಹಿಸಿದರು. ಈ ಬಗ್ಗೆ ನಂತರ ಮಾಹಿತಿ ನೀಡುವುದಾಗಿ ಸಚಿವರು ಹೇಳಿದರು.
ಪಡೆಯದೇ ಇದ್ದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
Related Articles
ಅಂದು
ಈ ಹಿಂದೆ 2017ರ ಡಿಸೆಂಬರ್ 22ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಕಣ್‌ತಪ್ಪಿನಿಂದ ಅಲ್ಪಸಂಖ್ಯಾತ ಸಮುದಾಯ ಎಂದಾಗಿದೆ.
ಸುತ್ತೋಲೆಯಲ್ಲಿದ್ದ “ಕೋಮು ಗಲಭೆ ಗಳಲ್ಲಿ ಮತ್ತು ಇತರೆ ಪ್ರಕರಣ ಗಳಲ್ಲಿ ಮುಗ್ದ ಅಲ್ಪಸಂಖ್ಯಾತ ಸಮುದಾಯದವರ ವಿರುದಟಛಿ ದಾಖ
ಲಾಗಿರುವ ಪ್ರಕರಣ ಗಳನ್ನು ಅಭಿಯೋಜನೆಯಿಂದ ಹಿಂಪಡೆ ಯುವ ಬಗ್ಗೆ’ ಎಂದಿದ್ದ ವಾಕ್ಯವನ್ನು “ಕೋಮು ಗಲಭೆಗಳಲ್ಲಿ ಮತ್ತು ಇತರೆ
ಪ್ರಕರಣಗಳಲ್ಲಿ ಮುಗ್ದ ಜನರ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆ ಯುವ ಬಗ್ಗೆ’ ಎಂದು ಬದಲಾಯಿಸಿ
ಹೊಸದಾಗಿ ಶನಿವಾರ ಸುತ್ತೋಲೆ ಹೊರಡಿಸಲಾಗಿದೆ.
Advertisement
ಇಂದು ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನ್ಯಾ.ಸಾಚಾರ್ ಸಮಿತಿ ವರದಿ ಜಾರಿ ಕುರಿತು ಸಚಿವ ರಮೇಶ್‌ಕುಮಾರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿತ್ತು. ಈ ಮಧ್ಯೆ ಕೆಲವರು ಕೋಮು ಗಲಭೆಗೆ ಸಂಬಂಧಿಸಿದಂತೆ ಅಮಾಯಕ ಅಲ್ಪಸಂಖ್ಯಾತರ ವಿರುದಟಛಿ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಸಂಪುಟ ಉಪಸಮಿತಿ ಗೃಹ ಇಲಾಖೆಗೆ ಕಳುಹಿಸಿತ್ತು. ಅದರಂತೆ ಕೋಮು ಗಲಭೆ ಗಳಲ್ಲಿ ಮತ್ತು ಇತರೆ ಪ್ರಕರಣಗಳಲ್ಲಿ ಮುಗ್ದ ಅಲ್ಪಸಂಖ್ಯಾತ ಸಮುದಾಯದವರ ವಿರುದ್ದ ದಾಖಲಾಗಿರುವ ಪ್ರಕರಣ ಗಳನ್ನು ಅಭಿಯೋಜನೆ ಯಿಂದ ಹಿಂಪಡೆಯುವ ಬಗ್ಗೆ ಮಾಹಿತಿ ಕೇಳಿ ಸುತ್ತೋಲೆ ಹೊರಡಿಸಲಾಗಿತ್ತು. ಈ ಸುತ್ತೋಲೆ ಹಿಂಪಡೆದಿಲ್ಲ. ಬೇರೆಯವರೂ ಕೂಡ ಈ ಕುರಿತು ಮನವಿ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು.