ಸುಬ್ರಹ್ಮಣ್ಯ: ಮುಜರಾಯಿ ಇಲಾಖೆಗೆ ಸೇರಿದ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆದಾಯ ಏಳು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. 2017-18ನೇ ಆರ್ಥಿಕ ವರ್ಷದ ಆದಾಯ 95.92 ಕೋಟಿ ರೂ. ದಾಟಿದ್ದು, ಈ ಆರ್ಥಿಕ ವರ್ಷದಲ್ಲಿ ಅದು 100 ಕೋಟಿ ರೂ. ದಾಟುವ ನಿರೀಕ್ಷೆ ಇದೆ.
Advertisement
ನಾಗಾರಾಧನೆಗೆ ಪ್ರಸಿದ್ಧಿ ಪಡೆದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ದೇಗುಲದ ನಿತ್ಯದ ಸೇವೆಗಳಲ್ಲಿಯೂ ವೃದ್ಧಿ ಕಾಣುತ್ತಿರುವುದರಿಂದ ಆದಾಯ ಜಾಸ್ತಿಯಾಗುತ್ತಿದೆ. 2016-17ರ ಆರ್ಥಿಕ ವರ್ಷದಲ್ಲಿ ದೇಗುಲ 89 ಕೋಟಿ ರೂ. ಆದಾಯ ದಾಖಲಿಸಿತ್ತು. ಈ ಸಲ ಅದು 96 ಕೋಟಿ ರೂ.ಗಳನ್ನು ಸಮೀಪಿಸಿದೆ. ಒಂದೇ ವರ್ಷದಲ್ಲಿ 7 ಕೋಟಿ ರೂ. ಏರಿಕೆ ಕಂಡಿದೆ. ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಯಲ್ಲಿ ಅತಿ ಹೆಚ್ಚು ಅದಾಯವುಳ್ಳ ಸಿರಿವಂತ ದೇಗುಲ ಎಂಬ ಹೆಗ್ಗಳಿಕೆಯನ್ನು 7 ವರ್ಷಗಳಿಂದ ಕಾಯ್ದುಕೊಂಡು ಬಂದು ಈ ಸಲವೂ ಅಗ್ರಸ್ಥಾನ ಕಾಯ್ದುಕೊಂಡಿದೆ. ಹರಕೆ ಸೇವೆ, ಕಾಣಿಕೆ ಡಬ್ಬಿ, ಛತ್ರಗಳ ಬಾಡಿಗೆ ಮತ್ತು ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತದೆ.
ಅರ್ಥಿಕ ವರ್ಷಗಳಲ್ಲಿ 2006-07ರಲ್ಲಿ ಆದಾಯ 19.76 ಕೋಟಿ ರೂ., 2007 -08 ರಲ್ಲಿ 24.44 ಕೋ. ರೂ., 2008-09ರಲ್ಲಿ 31 ಕೋ. ರೂ., 2009-10ರಲ್ಲಿ 38.51 ಕೋ. ರೂ., 2011-12ರಲ್ಲಿ 56.24 ಕೋ. ರೂ., 2012-13ರಲ್ಲಿ 66.76 ಕೋ. ರೂ., 2013-14ರಲ್ಲಿ 68 ಕೋ. ರೂ., 2014-15ರಲ್ಲಿ 77.60 ಕೋ. ರೂ., 2015-16ರಲ್ಲಿ 88.83 ಕೋ. ರೂ. ಹಾಗೂ 2016-17ರಲ್ಲಿ 89.65 ಕೋ. ರೂ. ಆದಾಯ ಗಳಿಸಿತ್ತು.
ಸುಮಾರು 450ಕ್ಕೂ ಅಧಿಕ ಕಾಯಂ ಸಿಬಂದಿ ಹಾಗೂ 200ಕ್ಕೂ ಅಧಿಕ ದಿನಗೂಲಿ ಕಾಯಂ ಸಿಬಂದಿ ಹಾಗೂ 200ಕ್ಕೂ ಅಧಿಕ ದಿನಗೂಲಿ ಸಿಬಂದಿ ದೇಗುಲದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ಅವರ ವಾರ್ಷಿಕ ವೇತನಕ್ಕಾಗಿ 6.58 ಕೋಟಿ ರೂ., ವಾರ್ಷಿಕ ಜಾತ್ರೆಗೆ 68ರಿಂದ 70 ಕೋಟಿ ರೂ., ಅನ್ನಸಂತರ್ಪಣೆಗೆ 5.54, ಕೋಟಿ ರೂ., ಆನೆ ಹಾಗೂ ಜಾನುವಾರು ರಕ್ಷಣೆಗಾಗಿ 6.57 ಕೋಟಿ ರೂ. ಖರ್ಚಾಗುತ್ತಿದೆ. ಆದಾಯ ತೆರಿಗೆ ಕಟ್ಟುವ ದೇವಸ್ಥಾನ
ಸುಬ್ರಹ್ಮಣ್ಯ ದೇವಸ್ಥಾದ ಆದಾಯವು 95 ಕೋಟಿ ಕೋ. ದಾಟಿದ್ದರೂ ಸರಕಾರದ ನಿಯಮದಂತೆ ಇಲಾಖೆಯ ವಂತಿಗೆಯಾಗಿ ಆದಾಯದ ಶೇ. 10ರಷ್ಟು ಹಣವನ್ನು ದೇಗುಲದವರು ಸರಕಾರಕ್ಕೆ ನೀಡಬೇಕಿದೆ. ಧಾರ್ಮಿಕ ಧತ್ತಿ ಇಲಾಖೆಯ ಬೆಂಗಳೂರು ಪ್ರಧಾನ ಕಚೇರಿಗೆ ಈ ಹಣ ಸಂದಾಯವಾಗುತ್ತಿದೆ. 2000ನೇ ಇಸ್ವಿಯಲ್ಲಿ 8 ಕೋಟಿ ರೂ.ಗಳಿಷ್ಟಿದ್ದ ಆದಾಯ, 2007-08ರಲ್ಲಿ 24.44 ಕೋಟಿ ರೂ.ಗೆ ಏರಿಕೆಯಾಯಿತು. ಅಲ್ಲಿಂದ ಈಚೆಗೆ ಸುಬ್ರಹ್ಮಣ್ಯವು ರಾಜ್ಯದ ಶ್ರೀಮಂತ ದೇವಾಲಯವಾಗಿ ಗುರುತಿಸಿಕೊಂಡಿದೆ. 2017-18ರ ಆರ್ಥಿಕ ವರ್ಷದಲ್ಲಿ ಸರ್ಪ ಸಂಸ್ಕಾರ ಸೇವೆಗಳ ಸಂಖ್ಯೆ 50 ಸಾವಿರ ದಾಟಿದೆ. ದಿನಕ್ಕೆ ಸರಾಸರಿ 500 ಆಶ್ಲೇಷಾ ಬಲಿ ನಡೆದಿವೆ. ಮಹಾಪೂಜೆ, ಪಂಚಾಮೃತ ಮಹಾಅಭಿಷೇಕ, ತುಲಾಭಾರ ಸೇವೆ, ಶೇಷ ಸೇವೆಗಳ ಪ್ರಮಾಣದಲ್ಲೂ ಹೆಚ್ಚಳವಾಗುತ್ತಿದೆ. ಬ್ರಹ್ಮರಥೋತ್ಸವ ಸೇವೆಯನ್ನು 2017ರಲ್ಲಿ 9 ಭಕ್ತರು ನೆರವೇರಿಸಿದ್ದಾರೆ.
Related Articles
ದೇವಸ್ಥಾದ ಆದಾಯವು 95 ಕೋಟಿ ಕೋ. ದಾಟಿದ್ದರೂ ಸರಕಾರದ ನಿಯಮದಂತೆ ಇಲಾಖೆಯ ವಂತಿಗೆಯಾಗಿ ಆದಾಯದ ಶೇ. 10ರಷ್ಟು ಹಣವನ್ನು ದೇಗುಲ ಸರಕಾರಕ್ಕೆ ನೀಡಬೇಕಿದೆ. ಧಾರ್ಮಿಕ ಧತ್ತಿ ಇಲಾಖೆಯ ಬೆಂಗಳೂರು ಪ್ರಧಾನ ಕಚೇರಿಗೆ ಈ ಹಣ ಸಂದಾಯವಾಗುತ್ತಿದೆ. 2000ನೇ ಇಸ್ವಿಯಲ್ಲಿ 8 ಕೋಟಿ ರೂ.ಗಳಿಷ್ಟಿದ್ದ ಆದಾಯ, 2007-08ರಲ್ಲಿ 24.44 ಕೋಟಿ ರೂ.ಗೆ ಏರಿಕೆಯಾಯಿತು.
Advertisement
100 ಕೋ. ರೂ. ದಾಟುವ ವಿಶ್ವಾಸ ದೇಶ – ವಿದೇಶಗಳಿಂದ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಭಕ್ತರ ಸಂಖ್ಯೆ ಹೆಚ್ಚಾದಂತೆ ಸೇವೆಗಳ ಸಂಖ್ಯೆಯೂ ವೃದ್ಧಿಸಿ ಆದಾಯ ಪ್ರಮಾಣ ಹೆಚ್ಚಿದೆ. ಶಿರಾಡಿ ಘಾಟಿ ಬಂದ್ ಆಗಿ ಭಕ್ತರ ಸಂಖ್ಯೆ ನಿರೀಕ್ಷಿತ ಪ್ರಮಾಣಕ್ಕೆ ತಲುಪದಿದ್ದರೂ ಆದಾಯದಲ್ಲಿ ಗಮನಾರ್ಹ ವ್ಯತ್ಯಾಸ ಆಗಿಲ್ಲ. ಕ್ಷೇತ್ರದಲ್ಲಿ ಸವಲತ್ತು ಹೆಚ್ಚಳಕ್ಕೆ ಕ್ರಮ ವಹಿಸಿದ್ದು, ಮುಂದಿನ ವರ್ಷ ಆದಾಯ 100 ಕೋ. ರೂ. ತಲುಪುವ ವಿಶ್ವಾಸವಿದೆ.
– ನಿತ್ಯಾನಂದ ಮುಂಡೋಡಿ, ದೇಗುಲದ ವ್ಯವಸ್ಥಾಪನ ಸಮಿತಿ, ಅಧ್ಯಕ್ಷ