Advertisement

ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ಗೆ 5 ವರ್ಷ ಜೈಲು, 50 ಲಕ್ಷ ದಂಡ

10:44 PM Apr 28, 2019 | Team Udayavani |

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕರೊಬ್ಬರಿಗೆ ಐದು ವರ್ಷ ಜೈಲು ಹಾಗೂ 50 ಲಕ್ಷ ರೂ.ದಂಡ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

Advertisement

ಕೆನರಾ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್‌ ಎಚ್‌.ಎಸ್‌ ಈಶ್ವರ್‌ ಶಿಕ್ಷೆಗೆ ಗುರಿಯಾದವರು. ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಕೆನರಾ ಬ್ಯಾಂಕ್‌ ಮ್ಯಾನೇಜರ್‌ ಆಗಿದ್ದ ಎಚ್‌.ಎಸ್‌.ಈಶ್ವರ್‌ ಅವರ ನಿವಾಸ ಮತ್ತು ಅವರ ಕಚೇರಿಗಳ ಮೇಲೆ 2014ರಲ್ಲಿ ದಾಳಿ ನಡೆಸಿ ದಾಖಲೆ ಸಂಗ್ರಹಿಸಿದ್ದ ಸಿಬಿಐ ಅಧಿಕಾರಿಗಳು, ತನಿಖೆ ನಡೆಸಿ 2016ರಲ್ಲಿ ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಸ್‌.ಎಚ್‌ ಪುಷ್ಪಾಂಜಲಿ ದೇವಿ ಅವರು, ಈಶ್ವರ್‌ಗೆ ಐದು ವರ್ಷ ಜೈಲು ಹಾಗೂ 50 ಲಕ್ಷ ರೂ.ದಂಡ ವಿಧಿಸಿ ಶನಿವಾರ (ಏ.27) ಆದೇಶ ಹೊರಡಿಸಿದ್ದಾರೆ. ಜತೆಗೆ, ಆರೋಪಿ ಅಧಿಕಾರಿ ಅಕ್ರಮವಾಗಿ ಸಂಪಾದಿಸಿರುವ 4.90 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಕ್ಷಮ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next