ಶಿವಮೊಗ್ಗ: ಮತಾಂಧ ಮುಸಲ್ಮಾನರ ದೊಂಬಿ ಹಾಗೂ ಗುಂಡಾಗಿರಿಯನ್ನು ಉಳಿದ ಮುಸ್ಲಿಮರು ಖಂಡಿಸಬೇಕು ಎಂದು ಬೆಂಗಳೂರಿನ ಡಿಜೆ ಹಳ್ಳಿಯಲ್ಲಿನ ಗಲಭೆ ವಿಚಾರವಾಗಿ
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಾನು ಎಲ್ಲಾ ಮುಸಲ್ಮಾನರು ಗೂಂಡಾಗಳು ಎನ್ನುವುದಿಲ್ಲ. ಅವರಲ್ಲೂ ಸೌಮ್ಯ ಸ್ವಭಾವದವರಿದ್ದಾರೆ. ಶಾಸಕ ಶ್ರೀನಿವಾಸ ಅವರ ಮನೆ, ಕಛೇರಿ ಧ್ವಂಸ ಅಗಿದ್ದು ಬಹಳ ನೋವಾಗಿದೆ ಎಂದರು.
ಆದರೇ ಘಟನೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಒಂದು ಪ್ರತಿಕ್ರಿಯೆ ನೀಡಿಲ್ಲ. ಡಿ.ಕೆ.ಶಿವಕುಮಾರ್ ಅವರೇ ಇದನ್ನಾದರೂ ಖಂಡಿಸಿ, ನಿಮ್ಮ ಮನೆಗೆ ಬೆಂಕಿ ಹಚ್ಚಿದ್ದಾಗ ಮಾತ್ರ ನೀವು ಖಂಡಿಸುತ್ತೀರಾ..? ಎಂದು ಪ್ರಶ್ನಿಸಿದ್ದಾರೆ.
ಕೆಲವು ಮುಸಲ್ಮಾನರ ದುಷ್ಕ್ರತ್ಯ ಹಾಗೂ ಮತಾಂಧ ಭಾವನೆ ಹೋಗೋವರೆಗೂ ದೇಶದಲ್ಲಿ ಶಾಂತಿ ಇರಲ್ಲ. ಮತಾಂಧರನ್ನು ಬಗ್ಗು ಬಡಿಯದಿದ್ದರೇ ನಮ್ಮ ಮನೆಗೆ ಬೆಂಕಿ ಹಚ್ಚುವ ಸ್ಥಿತಿ ಬರುತ್ತದೆ. ಗುಂಡಾಗಿರಿ, ಕೊಲೆ, ಧ್ವಂಸ ಮಾಡೋಕೆ ಮತಾಂಧ ಮುಸಲ್ಮಾನರು ಈ ದೇಶದಲ್ಲಿ ರೆಡಿಯಿದ್ದಾರೆ ಎಂದು ಕಿಡಿಕಾರಿದರು.
ಎಸ್ ಡಿಪಿಐ ನಂತವು ಜುಜಬಿ ಸಂಘಟನೆಗಳು, ಅವುಗಳೇನು ಸಾಧನೆ ಮಾಡಿಲ್ಲ. ಧಾಂದಲೆ, ಗಲಭೆ ಮಾಡಿ ಹೆಸರು ಮಾಡೋರ ಬಗ್ಗೆ ನಾನು ಕೇಳಿದ್ದೇನೆ. ಮತಾಂಧ ಎಸ್ ಡಿಪಿಐ ಅವರಿಗೆ ಜೈಲಿಗೆ ಹೋಗೋದು, ಹೊರಗೆ ಬರೋದು ಕೆಲಸವಾಗಿಬಿಟ್ಟಿದೆ. ಅವರಿಗೆ ಮಾನ ಮರ್ಯಾದೆ ಕೂಡ ಇಲ್ಲ.
ದೇಶದ ಭವಿಷ್ಯದ ದೃಷ್ಟಿಯಿಂದ ಮತಾಂಧರ ವಿರುದ್ದ ದೇಶದ ಜನರು ಒಂದಾಗಬೇಕು. ಮತಾಂಧ ಮುಸಲ್ಮಾನರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ ಎಂದ ಈಶ್ವರಪ್ಪ ತಿಳಿಸಿದರು.