Advertisement

ಕೋರಿಕೆಯೂ, ಕಾಣಿಕೆಯೂ …

08:13 PM Feb 03, 2020 | mahesh |

“ಸಾರಿ ಕಣೋ, ನಿನ್ನ ಮೇಲೆ ಅನಗತ್ಯವಾಗಿ ಸಿಡುಕಿದೆ, ಸಿಟ್ಟಾಗಿದ್ದೆ. ಅನ್ಯಾಯವಾಗಿ ನನ್ನ ಬರ್ತ್‌ ಡೇ ಮೂಡ್‌ನ‌ ಹಾಳು ಮಾಡಿ ನಿನ್ನ ತಲೇನೂ ಕೆಡಿಸಿದ್ದೆ.  ಆದದ್ದಾದರೂ ಏನು ? ನಿನ್ನ ಪ್ರೀತಿಯ ಹುಟ್ಟುಹಬ್ಬದ ಕಾಣಿಕೆಯನ್ನು ಅಷ್ಟು ಕೀಳಾಗಿ ನೋಡಬೇಕಾದ ಪ್ರಮೇಯ ಇರಲಿಲ್ಲ ಅಲ್ವಾ ?

Advertisement

ನನಗೇನಾಗಿತ್ತು ಆಗ ?
ನಿನ್ನ ಮೇಲಿನ ಅತೀವ ಪ್ರೀತಿ, ನಿನ್ನ ಉಡುಗೊರೆ ವಿಶೇಷ ಆಗಿರಬೇಕಿತ್ತು ಎಂಬ ನಿರೀಕ್ಷೆ. ಸದಾ ಜೀನ್ಸ್‌ ತೊಡುವ ನನಗೆ ಗಿಫ್ಟ್ ಪಾಕ್‌ನಲ್ಲಿದ್ದ ಸೀರೆ ಕಂಡು ಕಣ್ಣು ಕೆಂಪಾಗಿತ್ತು. “ಸೀರೆಯಲ್ಲಿ ನೀನು ಬಹಳ ಅಂದವಾಗಿ ಕಾಣುವೆ’ ಎಂದು ಎಷ್ಟು ಪ್ರಾಮಾಣಿಕವಾಗಿ ಹಾರೈಸಿ ಕೊಟ್ಟೆ! ಯಾಕೋ ನನಗೆ ಅಪಥ್ಯವಾಗಿಬಿಡು¤ ಆ ಕ್ಷಣಕ್ಕೆ. ಅದೇ ಕೋಪಕ್ಕೆ ನಿನ್ನನ್ನು ಸರಿಯಾಗಿ ಗಮನಿಸಲಿಲ್ಲ, ಬದಲಾಗಿ ಅಲಕ್ಷ್ಯ ತೋರಿದೆ. ಐ ಯಾಮ್‌ ಎಕ್ಸಿ$óàಮ್ಲಿà ಸಾರಿ. ನೀ ಹೇಳಿದ್ದು ಎಷ್ಟು ನಿಜ ಅನ್ನೋದು ನನ್ನ ಕೋಪ ಕರಗಿದ ಮೇಲೆ ತಿಳಿಯಿತು. ಸೀರೆ ಉಟ್ಟು ಕನ್ನಡಿ ಮುಂದೆ ನಿಂತರೆ, ನನ್ನ ಕಣ್ಣು ನಾನೇ ನಂಬಲಾಗಲಿಲ್ಲ. ಮನೇಲಿ ಎಲ್ಲರೂ “ಲುಕಿಂಗ್‌ ವೆರಿ ಪ್ರಟಿ’ , “ಕ್ಯೂಟ್‌’ ಅಂತೆಲ್ಲ ಹೊಗಳಿಕೆಯ ಮಳೆಯನ್ನೇ ಸುರಿಸಿದರು. ಅಮ್ಮ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, “ನಿನ್ನ ಈ ಸೀರೇಲಿ ನೋಡಿದರೆ ಮದುವೆಗೆ ಹುಡುಗನನ್ನು ನೋಡಬಹುದೇನೋ ಅನ್ಸುತ್ತೆ ‘ಅಂತ ಬೆರಳಲ್ಲೇ ದೃಷ್ಟಿ ತೆಗೆದರು. ನಿನ್ನ ಕಾಣಿಕೆಯ ಹಿಂದಿನ ಕೋರಿಕೆ ಸಮಂಜಸ ಅನ್ನಿಸಿದ್ದು ಆಗಲೇ. ನನ್ನ ತಪ್ಪು ಅರಿವಾಯ್ತು ಕಣೋ.

ನಾಳಿನ ಸೋಶಿಯಲ್ಸ್ ಕ್ಲಾಸ್‌ಗೆ ಇದೇ ಸೀರೆ ಉಟ್ಟು ಬರ್ತೀನಿ, ಓಕೆನಾ ?’

ಅವಳ ಸಂದೇಶಕ್ಕೆ ಕ್ಷಣ ಮಾತ್ರದಲ್ಲಿ ಉತ್ತರ ಬಂದಿತ್ತು…

“ನಿನ್ನದೇ ನಿರೀಕ್ಷೆಯಲ್ಲಿ…’

Advertisement

-ರಾಜಿ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next