Advertisement

ಎಲ್ಲೆಡೆ ಕುತೂಹಲ ಮೂಡಿಸಿದ ಹೊಸ ‘ಗಜಮುಖನೆ’ಹಾಡು ಬಿಡುಗಡೆ

06:03 PM Sep 08, 2022 | Team Udayavani |

ಮಂಗಳೂರು: ಕರಿಯಜ್ಜೆ ಹಾಡಿನ ಮೂಲಕ ಹೊಸ ಸಂಚಲನ ಸೃಷ್ಡಿಸಿದ್ದ ಡಮರುಗ ಮ್ಯಾಜಿಕಲ್ ಸೌಂಡ್ಸ್ ತಂಡ ತನ್ನ ಹಲವು ಗೀತೆಗಳ ಮೂಲಕ ಜನರ ಮನ ಗೆದ್ದಿದ್ದು ಇದೀಗ ಗಣೇಶ ಚತುರ್ಥಿಯ ಬರುವಿಕೆಯನ್ನು ಜನರು ಕಾಯುತ್ತಿರುವ ವೇಳೆಯಲ್ಲಿ 1972ರಲ್ಲಿ ಬಿಡುಗಡೆಯಾಗಿದ್ದ ದಿವಂಗತ ವಿಜಯ ನರಸಿಂಹ ಸಾಹಿತ್ಯ, ದಿವಂಗತ ಎಂ. ರಂಗ ರಾವ್ ಸಂಗೀತ, ಖ್ಯಾತ ಗಾಯಕಿ ಎಸ್ ಜಾನಕಿಯವರ ಗಾಯನದ 43ವರ್ಷಗಳ ಹಿಂದಿನ ಆದಿ ವಂದಿತನ ಹಳೆಯ ಜನಪ್ರಿಯ ಗಣಮುಖನೆ ಗಣಪತಿಯೇ ಗೀತೆಯನ್ನು ಹೊಸತನದ ಶೈಲಿಯಲ್ಲಿ ಬಿಡುಗಡೆ ಮಾಡಲಾಗಿದೆ.

Advertisement

ಜಿ.ಎಸ್. ಗುರುಪುರ ಇವರ ವಿಭಿನ್ನ ಪರಿಕಲ್ಪನೆಯೊಂದಿಗೆ ಸುಭಾಷ್ ಮಿಜಾರ್ ಸಂಗೀತದಲ್ಲಿ, ಕುಮಾರಿ ಚೈತ್ರಾ ಕಲ್ಲಡ್ಕ ರಾಗಸಂಯೋಜನೆ ಹಾಗೂ ಗಾಯನದಲ್ಲಿ ಶ್ರೀಮತಿ ವೀಣಾ ಸದಾಶಿವ ಮಿಜಾರ್ ಹಾಗೂ ಶ್ರೀಮತಿ ಹೇಮಾ ಸುಭಾಷ್ ಮಿಜಾರ್ ನಿರ್ಮಾಣದಲ್ಲಿ ತಯಾರಿಸಲಾಗಿದ್ದು, ಸ್ಪಿರಿಚುವಲ್ ಫ್ಯೂಷನ್ ರಾಕ್ ರೀತಿಯ ಹಾಡು ಇದಾಗಿದೆ.

ಟೀಸರ್ ಮೂಲಕ ಸದ್ದು ಮಾಡಿ ಎಲ್ಲರಲ್ಲೂ ಕುತೂಹಲ ಮೂಡಿಸಿದ ಈ ಹಾಡನ್ನು ಡಮರುಗ ಮ್ಯಾಜಿಕಲ್ ಸೌಂಡ್ಸ್ ಯೂ ಟ್ಯೂಬ್‌ ಚಾನೆಲ್‌ನಲ್ಲಿ ಮಂಗಳೂರಿನ ಶ್ರೀ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಲೋಕಾರ್ಪಣೆ ಮಾಡಲಾಗಿದ್ದು ಸಂಗೀತ ಪ್ರೀಯರ ಮನ ಗೆಲ್ಲುವಲ್ಲಿ ಯಶಸ್ಸಿಯಾಗಿದೆ ಎಲ್ಲೆಡೆಯಿಂದಲು ಪ್ರಸಂಶೆ ವ್ಯಕ್ತವಾಗತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next