Advertisement
ತುಳು ಹಾಗೂ ಇತರೆ ಪ್ರಾದೇಶಿಕ ಭಾಷೆಗಳ ಚಿತ್ರಗಳನ್ನು ಸೇರಿಸಿದರೆ, ಸಂಖ್ಯೆ 70 ದಾಟುತ್ತದೆ. ಅಲ್ಲಿಗೆ ಕಳೆದ ವರ್ಷಕ್ಕಿಂತ ಈ ವರ್ಷ 16 ಸಿನಿಮಾಗಳ ಬಿಡುಗಡೆ ಕಡಿಮೆಯಾಗಿವೆ.
Related Articles
ಏಳು ಸಿನಿಮಾಗಳು ಬಿಡುಗಡೆಯಾಗಿವೆ.
Advertisement
“ರಾಜ್‌ಕುಮಾರ’, “ಹೆಬ್ಬುಲಿ’ ಚಿತ್ರಗಳು ದೊಡ್ಡ ಮಟ್ಟದ ಯಶಸ್ಸು ಕಂಡರೆ, ಸದ್ಯ “ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಶೇಷವೆಂದರೆ, ಈ ವರ್ಷವೂ ಕಳೆದ ವರ್ಷದಂತೆ ಮೇ ಹೊತ್ತಿಗೆ ಶಿವರಾಜಕುಮಾರ್ ಅವರ ಎರಡು ಚಿತ್ರಗಳು ಬಿಡುಗಡೆಯಾಗಿವೆ.
ಈ ಐದು ತಿಂಗಳಲ್ಲಿ ಬಿಡುಗಡೆಯಾದ ಒಂದಷ್ಟು ಸಿನಿಮಾಗಳು ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದವು. ಟ್ರೇಲರ್, ಹಾಡು ನೋಡಿದವರಿಗೆ ಸಹಜವಾಗಿಯೇ ಆ ಸಿನಿಮಾಗಳ ಬಗ್ಗೆ ನಿರೀಕ್ಷೆ, ಕುತೂಹಲ ಹೆಚ್ಚಿತ್ತು. ಆದರೆ, ಚಿತ್ರ ಬಿಡುಗಡೆಯಾದ ಮೇಲೆ ಆ ಚಿತ್ರಗಳು ನಿರೀಕ್ಷೆಯ ಮಟ್ಟ ತಲುಪಲಿಲ್ಲ.
“ಚಕ್ರವರ್ತಿ’, “ಪುಷ್ಪಕ ವಿಮಾನ’, “ಎರಡನೇ ಸಲ’, “ಮಾಸ್ತಿಗುಡಿ’, “ಉರ್ವಿ’, “ರೋಗ್’ ಸೇರಿದಂತೆ ಒಂದಷ್ಟು ಸಿನಿಮಾಗಳು ನಾನಾ ಕಾರಣಗಳಿಂದಾಗಿ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಇದು ಒಂದಾದರೆ, ಈ ಐದು ತಿಂಗಳಲ್ಲಿ ಒಂದಷ್ಟು ಪ್ರಯೋಗಗಳ ಮೂಲಕ ಕೆಲವು ಸಿನಿಮಾಗಳು ಸುದ್ದಿಯಾಗಿ ಚರ್ಚೆಯ ವಸ್ತುವಾಗಿದ್ದನ್ನು ಇಲ್ಲಿ ಗಮನಿಸಬಹುದು.
“ಪುಷ್ಪಕ ವಿಮಾನ’, “ರಾಗ’, “ಬ್ಯೂಟಿಫುಲ್ ಮನಸುಗಳು’, “ಅಲ್ಲಮ’, “ಚೌಕ’, “ಅಮರಾವತಿ’, “ಶುದಿಟಛಿ’ ಚಿತ್ರಗಳು ತಮ್ಮ ಕಥಾವಸ್ತುವಿನಿಂದಾಗಿ ಚರ್ಚೆಗೆ ಗ್ರಾಸವಾಗಿದ್ದವು. ಇಲ್ಲಿನ ಚಿತ್ರಗಳು ಕಮರ್ಷಿಯಲ್ ಆಗಿ ಯಶಸ್ಸು ಕಾಣದೇ ಹೋದರೂ ವಿಭಿನ್ನ ಪ್ರಯತ್ನಗಳ ಮೂಲಕ ಗಮನ ಸೆಳೆದಿದ್ದನ್ನು ಅಲ್ಲಗಳೆಯುವಂತಿಲ್ಲ.
ಕೆಲವು ವರ್ಷಗಳು ಹೊಸಬರ ಪಾಲಿಗೆ ಆಶಾದಾಯಕ ಹಾಗೂ ಸಾಕಷ್ಟು ಯಶಸ್ಸನ್ನು ತಂದುಕೊಟ್ಟರೆ ಈ ಐದು ತಿಂಗಳಲ್ಲಿ ಅಂತಹ ಯಾವುದೇ ಯಶಸ್ಸು ಹೊಸಬರಿಗೆ ಸಿಕ್ಕಿಲ್ಲ ಎಂಬುದು ಕೂಡಾ ಗಮನಾರ್ಹ ಅಂಶ. ಐದು ತಿಂಗಳಲ್ಲಿ ಸ್ಟಾರ್‌ಗಳ ಹವಾ ಜೋರಾಗಿ ನಡೆದಿದೆ ಎಂದರೆ ತಪ್ಪಲ್ಲ. ಕಲೆಕ್ಷನ್ ವಿಷಯದಲ್ಲೂ ತಮ್ಮ ಸಿನಿಮಾಗಳ ದಾಖಲೆಗಳನ್ನು ತಾವೇ ಮುರಿಯುತ್ತಾ ಮುಂದೆ ಸಾಗುತ್ತಿದ್ದಾರೆ. ಇದು ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಷಯದಿಂದ ಆಶಾದಾಯಕ ಬೆಳವಣಿಗೆಯಾದರೆ, ಸ್ಟಾರ್ ಗಳು ಕೂಡಾ ಕಮರ್ಷಿಯಲ್ ಜೊತೆ ಜೊತೆಗೆ ಹೊಸ ಬಗೆಯ ಕಥೆಗಳನ್ನು ಮಾಡಿದ್ದಾರೆ. ಅಂದಹಾಗೆ, ಐದು ತಿಂಗಳಾದರೂ ಅಕೌಂಟ್ ಓಪನ್ ಮಾಡದ ಸ್ಟಾರ್ ನಟ ಎಂದರೆ ಉಪೇಂದ್ರ ಹಾಗೂ ಯಶ್. ಈ ಐದು ತಿಂಗಳಲ್ಲಿ ಉಪೇಂದ್ರ ಅವರ ಯಾವುದೇ ಸಿನಿಮಾಗಳು ಬಿಡುಗಡೆಯಾಗಿಲ್ಲ. ಆದರೆ, ಅವರು ಒಪ್ಪಿಕೊಂಡ ಸಾಕಷ್ಟು ಹೊಸ ಹೊಸ ಸಿನಿಮಾಗಳು ಸುದ್ದಿಯಾದುವು. ಯಶ್ ಅವರ “ಕೆಜಿಎಫ್’ ಚಿತ್ರೀಕರಣದಲ್ಲಿದೆಯಷ್ಟೇ.
ಇದು ಐದು ತಿಂಗಳ ಕಥೆಯಾದರೆ ಮುಂದೆ ಸಾಕಷ್ಟು ಹೊಸಬರ ಹಾಗೂ ಸ್ಟಾರ್ ನಟರ ಮತ್ತಷ್ಟು ಸಿನಿಮಾಗಳು ಬಿಡುಗಡೆಯಾಗಲಿವೆ. ಶಿವರಾಜಕುಮಾರ್ ಅವರ “ಲೀಡರ್’, “ಟಗರು’, ಮುರುಳಿಯ “ಮμ¤’, ದರ್ಶನ್ “ತಾರಕ್’, ಸುದೀಪ್ “ದಿ ವಿಲನ್’, ವಿಜಯ್“ಕನಕ’, ಪುನೀತ್ “ಅಂಜನಿಪುತ್ರ’, ಗಣೇಶ್ “ಮುಗುಳುನಗೆ’ ಸೇರಿದಂತೆ ಸಾಕಷ್ಟು ನಿರೀಕ್ಷಿತ ಚಿತ್ರಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿವೆ. ಸ್ಟಾರ್‌ಗಳ ಹವಾದ ಮುಂದೆ ಹೊಸಬರ “ಉಸಿರಾಟ’ ಹೇಗಿರುತ್ತೋ ನೋಡಬೇಕು. – ರವಿಪ್ರಕಾಶ್ ರೈ