ಕಟಪಾಡಿ: ರಂಗಭೂಮಿ ಮಾನವನ ಜೀವನ ಕ್ರಮದ ಪ್ರತಿಬಿಂಬ. ಭೂಮಿಯ ಮೇಲೆ ಜೀವಿಗಳ ಉದಯವಾದಾಗಿನಿಂದಲೇ ರಂಗಭೂಮಿ ಹುಟ್ಟಿ ಬೆಳೆಯಲು ಆರಂಭಿಸಿತು.ಇಂತಹ ರಂಗಭೂಮಿಯು ಆರೋಗ್ಯವಂತ, ಕ್ರಿಯಾಶೀಲತೆ, ಸೂಕ್ಷ್ಮಮತಿಯನ್ನು ಮಕ್ಕಳಲ್ಲಿ ರೂಪಿಸಬಲ್ಲುದು ಎಂದು ರಂಗ ಶಿಕ್ಷಕ ಮತ್ತು ರಂಗಕರ್ಮಿ ನೀನಾಸಂ ವೆಂಕಟೇಶ್ ಈಡಿಗರ ಹೇಳಿದರು.
ಅವರು ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಸ್ನೇಹ ಜೀವಿ ಉಡುಪಿ ಆಯೋಜಿಸಿದ್ದ ರಂಗಭೂಮಿ ಪರಿಕಲ್ಪನೆ ಮತ್ತು ಸಾಹಿತ್ಯ ದ ಬಗ್ಗೆ ವಿಚಾರ ಗೋಷ್ಠಿ ಮತ್ತು ಸಂವಾದ ನಡೆಸಿ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಮಕ್ಕಳ ಸರ್ವಾಂಗೀಣ ಪ್ರಗತಿಗೆ ಸಮಾಜದ ಸ್ವಾಸುಕ್ಕೆ, ನೆಮ್ಮದಿಯ ಬದುಕಿಗೆ, ಸಾಹಿತ್ಯ- ಭಾಷೆ – ರಂಗ ಚಟುವಟಿಕೆ ಅತ್ಯಗತ್ಯ. ಸಾಹಿತ್ಯವು ನಟನ ಭಾಷಾ ಶುದ್ಧಿಗೆ, ಕೀಳರಿಮೆಯ ವಿನಾಶಕ್ಕೆ ವರವಾಗಿ ಪರಿಣಮಿಸಿದೆ.ಇಂತಹ ಸೂಕ್ಷ್ಮ ಸಂವೇದನೆಯುಳ್ಳ ಕ್ರೀಯಾಶೀಲ ಚಟುವಟಿಕೆಗಳ ಮೂಲಕ ಮಕ್ಕಳ ಮಾನಸಿಕ ಮತ್ತು ಬೌದ್ದಿಕ ಮಟ್ಟವನ್ನು ವೃದ್ದಿಸಿ ನಾಡಿಗೆ ಉತ್ತಮ ಮಾನವ ಸಂಪತ್ತನ್ನು ನೀಡಲು ಹೊರಟ ಸ್ನೇಹಜೀವಿ ಸಂಘಟನೆಯ ಕಾರ್ಯ ಶ್ಲಾಘಿಸಿದರು.
ಸಾಹಿತಿ, ಕಲಾವಿದರಾದ ರಾಜ್‌ಗೊàಪಾಲ ಶೇಟ್, ಕೃಷ್ಣರಾಜ್ ಭಟ್, ರಾಘವೇಂದ್ರ ರಾವ್, ಕೆ. ಸ್ವರಾಜ್‌ಲಕ್ಷ್ಮಿ ಅವರನ್ನು ಸಮ್ಮಾನಿಸಲಾಯಿತು.
ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಧರ್ಮದರ್ಶಿ ನವೀನ್ ಆಚಾರ್ಯ, ಮಾಜಿ ಧರ್ಮದರ್ಶಿ ಪಡುಕುತ್ಯಾರು ಸದಾಶಿವ ಆಚಾರ್ಯ, ಕಾಪು ವಿಧಾನಸಭಾ ಕ್ಷೇತ್ರ ವಿಶ್ವಬ್ರಾಹ್ಮಣ ಯುವ ಸಂಘಟನೆಯ ಅಧ್ಯಕ್ಷ ಗಣೇಶ ಆಚಾರ್ಯ ಉಚ್ಚಿಲ, ಉದ್ಯಮಿ ಇನ್ನಂಜೆ ಪ್ರಕಾಶ್ ಆಚಾರ್ಯ, ರಂಗಕರ್ಮಿ ಯೋಗೀಶ್ ಕೊಳಲಗಿರಿ, ಕ.ಸಾ.ಪ. ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ರಮೇಶ ಆಚಾರ್ಯ ಬಂಟಕಲ್ಲು, ಪ್ರಕಾಶ್ ನಾಯಕ್ ವೇದಿಕೆಯಲ್ಲಿದ್ದರು.
ಚೈತ್ರಾ ಸ್ವಾಗತಿಸಿದರು.ಸಂಗೀತಾ ಪರಿಚಯಿಸಿದರು. ಪ್ರಜ್ಞಾ ವಂದಿಸಿದರು. ರಂಗಸ್ನೇಹಿ ಗಣೇಶ್ ರಾವ್ ಎಲ್ಲೂರು ಕಾರ್ಯಕ್ರಮ ಸಂಯೋಜಿಸಿದರು.