Advertisement

ಚೇತರಿಕೆ ಪ್ರಮಾಣ ಶೇ.27.52ಕ್ಕೆ ಏರಿಕೆ

01:23 AM May 05, 2020 | Sriram |

ಹೊಸದಿಲ್ಲಿ: ಮೂರನೇ ಹಂತದ ಲಾಕ್‌ಡೌನ್‌ಗೆ ದೇಶ ಕಾಲಿಡುತ್ತಿದ್ದಂತೆ ಕೋವಿಡ್‌-19ದಿಂದ ಗುಣಮುಖರಾಗುತ್ತಿ ರುವವರ ಪ್ರಮಾಣ ಹೆಚ್ಚಿದೆ ಎಂಬ ಸಮಾಧಾನಕರ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ.

Advertisement

ದೇಶಾದ್ಯಂತ ಗುಣ ಹೊಂದುತ್ತಿರುವ ಸೋಂಕುಪೀಡಿತರ ಪ್ರಮಾಣ ಶೇ.27.52 ಕ್ಕೇರಿದ್ದು, 24 ತಾಸುಗಳ ಅವಧಿಯಲ್ಲಿ ಸಾವಿರ ಮಂದಿ ಸಂಪೂರ್ಣ ಚೇತರಿಕೆ ಕಂಡು ಮನೆಗೆ ತೆರಳಿದ್ದಾರೆ. ಒಟ್ಟಾರೆ ದೇಶಾ ದ್ಯಂತ 11,761 ಮಂದಿ ಗುಣಮುಖರಾಗಿದ್ದಾರೆ. ಅಲ್ಲದೆ ಸಾವಿನ ಪ್ರಮಾಣವು ಕೇವಲ ಶೇ.3.2ರಷ್ಟಿದ್ದು, ಇದು ಜಗತ್ತಿನಲ್ಲೇ ಅತ್ಯಂತ ಕನಿಷ್ಠ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ತಿಳಿಸಿದ್ದಾರೆ.

ಸೋಂಕು ದ್ವಿಗುಣ ಪ್ರಮಾಣದಲ್ಲೂ ಸುಧಾರಣೆಯಾಗಿದೆ. ಈಗ ಸೋಂಕು ಪೀಡಿತರ ಸಂಖ್ಯೆ ದುಪ್ಪಟ್ಟಾಗಲು 12 ದಿನಗಳು ಬೇಕಾಗುತ್ತಿವೆ ಎಂದು ಸಚಿವಾ ಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಮಾಹಿತಿ ನೀಡಿದ್ದಾರೆ. ಆದರೆ ದೇಶದಲ್ಲಿ ಸೋಮವಾರ ಒಂದೇ ದಿನ 2,553 ಪ್ರಕರಣಗಳು ಪತ್ತೆಯಾಗಿವೆ. 72 ಮಂದಿ ಸಾವಿಗೀಡಾಗಿದ್ದಾರೆ.

20 ತಂಡಗಳ ರಚನೆ
ಸುಮಾರು 20 ಕೇಂದ್ರ ತಂಡಗಳನ್ನು ರಚಿಸಲಾಗಿದ್ದು, ಇವು ಹೆಚ್ಚು ಪ್ರಕರಣಗಳು ಇರುವೆಡೆ ತೆರಳಿ, ಸೋಂಕು ಪ್ರಸರಣ ತಡೆಗೆ ಸಂಬಂಧಿಸಿ ಸ್ಥಳೀಯಾಡಳಿತಗಳಿಗೆ ನೆರವಾಗಲಿದೆ ಎಂದೂ ಲವ ಅಗರ್ವಾಲ್‌ ಮಾಹಿತಿ ನೀಡಿದ್ದಾರೆ.

ಸೋಂಕು ಹೆಚ್ಚಳ ಸಾಧ್ಯತೆ
ಲಾಕ್‌ಡೌನ್‌ ಸಡಿಲಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅಗರ್ವಾಲ್‌, ಕೋವಿಡ್‌-19ದಂಥ ಸೋಂಕುಗಳ ವಿಚಾರದಲ್ಲಿ ಸಾಮಾಜಿಕ ಅಂತರವನ್ನು ಪಾಲಿಸದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಇತಿ ಹಾಸವೇ ಹೇಳುತ್ತಿದೆ. ಹಾಗಾಗಿ ಲಾಕ್‌ಡೌನ್‌ ಸಡಿಲಿಕೆಯು ದೇಶಾದ್ಯಂತ ಸೋಂಕಿನ ಹೆಚ್ಚಳಕ್ಕೆ ಕಾರಣವಾಗುವ ಭೀತಿಯಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next