Advertisement
ರವಿವಾರದಿಂದ ಸೋಮವಾರಕ್ಕೆ 24 ಗಂಟೆಗಳ ಅವಧಿಯಲ್ಲಿ 57,469 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿ ದ್ದಾರೆ. ಈ ಮೂಲಕ ಗುಣಮುಖ ಪ್ರಮಾಣ ಶೇ.75.27ಕ್ಕೇರಿದೆ. ಈವರೆಗೆ ವಾಸಿಯಾದವರ ಸಂಖ್ಯೆ 23.38 ಲಕ್ಷದ ಆಸುಪಾಸಿನಲ್ಲಿದ್ದರೆ, ಸಕ್ರಿಯ ಸೋಂಕಿತರ ಸಂಖ್ಯೆ 7.10 ಲಕ್ಷದ ಆಸುಪಾಸಿನಲ್ಲಿದೆ. ಅಲ್ಲದೆ, ದೇಶದಲ್ಲಿ ಕೊರೊನಾ ದಿಂದ ಮೃತಪಟ್ಟವರ ಪ್ರಮಾಣ ಶೇ.1.85ಕ್ಕಿಳಿದಿದೆ ಎಂದು ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರವಿವಾರ ಒಂದೇ ದಿನ 6.09 ಲಕ್ಷ ಸ್ಯಾಂಪಲ್‌ಗಳ ಪರೀಕ್ಷೆ ನಡೆದಿದ್ದು, ಈವರೆಗೆ ದೇಶಾದ್ಯಂತ 3.59 ಕೋಟಿ ಸ್ಯಾಂಪಲ್‌ಗಳ ಪರೀಕ್ಷೆ ಪೂರ್ಣಗೊಂಡಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ಈ ಮೂಲಕ ಪ್ರತಿ 10 ಲಕ್ಷ ಜನಸಂಖ್ಯೆಗೆ ಪರೀಕ್ಷಾ ಪ್ರಮಾಣ 26,016ಕ್ಕೆ ಏರಿದಂತಾಗಿದೆ.
Related Articles
ರವಿವಾರ ಬೆಳಗ್ಗೆ 8ರಿಂದ ಸೋಮವಾರ ಬೆಳಗ್ಗೆ 8ರವರೆಗೆ ದೇಶದಲ್ಲಿ 61,408 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ 836 ಸೋಂಕಿತರು ಮೃತಪಟ್ಟಿದ್ದಾರೆ ಎಂದೂ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೃತ 836 ಮಂದಿಯ ಪೈಕಿ ಅತಿ ಹೆಚ್ಚು ಅಂದರೆ 258 ಮಂದಿ ಮಹಾರಾಷ್ಟ್ರದ ವರಾದರೆ, 97 ಮಂದಿ ತಮಿಳುನಾಡು,
93 ಆಂಧ್ರ, 68 ಮಂದಿ ಕರ್ನಾಟಕದವರು ಎಂದೂ ಅವರು ಹೇಳಿದ್ದಾರೆ.
Advertisement