Advertisement

ಸಂಗೀತಕ್ಕೆ ಬುನಾದಿ ಹಾಕಿದ್ದು ಭಜನೆ, ನಿಮ್ಮೆಲ್ಲರ ಹಾರೈಕೆ ಇರಲಿ: ಸಂದೇಶ್ ನೀರ್ ಮಾರ್ಗ

06:35 PM Dec 14, 2021 | Team Udayavani |

ಮಣಿಪಾಲ: ಎದೆ ತುಂಬಿ ಹಾಡುವೆನು ಇದು ಸಂಗೀತ ಸಾಮ್ರಾಜ್ಯದಲ್ಲಿ ಅದ್ಭುತ ಪ್ರತಿಭೆಗಳನ್ನು ಕರುನಾಡಿಗೆ ಪರಿಚಯಿಸಿದ ಸಂಗೀತ ಕಾರ್ಯಕ್ರಮ. ಈ ವೇದಿಕೆಯಲ್ಲಿ ಹಲವು ಪ್ರತಿಬೆಗಳ ಸಮಾಗಮದ ಜೊತೆಗೆ ತಮ್ಮದೇ ವೈಶಿಷ್ಟ್ಯದಿಂದ ಮಿಂಚಿದ ಮಂಗಳೂರಿನ ಕುವರ ಸಂದೇಶ್‌ ನೀರ್‌ಮಾರ್ಗ.

Advertisement

ಉದಯವಾಣಿ.ಕಾಮ್‌ ನ ತೆರೆದಿದೆ ಮನೆ ಬಾ ಅಥಿತಿ ಫೇಸ್‌ ಬುಕ್‌ ಲೈವ್ ಕಾರ್ಯಕ್ರಮದಲ್ಲಿ ಕರಾವಳಿಯ ಪ್ರತಿಭೆ ಸಂದೇಶ್‌ ನೀರ್‌ಮಾರ್ಗ ತಮ್ಮ ಜೀವನದ ಹಲವು ಮಜಲುಗಳ ಕಿರುನೋಟ ಇಲ್ಲಿದೆ…

ದಕ್ಷಿಣ ಕನ್ನಡ ಜಿಲ್ಲೆಯ ನೀರ್‌ಮಾರ್ಗ ದ ಸಂದೇಶ್‌ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಎಸ್.ಪಿ ಬಾಲಸುಬ್ರಮಣ್ಯಂ ನಡೆಸಿಕೊಡುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಎಸ್ ಪಿಬಿಯವರ ಅನುಪಸ್ಥಿತಿಯಲ್ಲಿ ನಡೆದರೂ ಕಳೆದೊಂದು ವರ್ಷದಿಂದ ಸಂದೇಶ್‌ ತಮ್ಮ ಪ್ರಾದೇಶಿಕ ಸೊಗಡಿನಲ್ಲಿ ಹಾಡಿ ಜನರ ಮನಗೆದ್ದು ಈಗ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ.

ಸಂದೇಶ್ ಮೂಲತಃ ಬಡ ಕುಟುಂಬದ ಯುವಕನಾದರೂ ಬಾಲ್ಯದಲ್ಲಿ 6 ವರ್ಷದವನಿದ್ದಾಗಲೇ ನಾಗರಾಜ್‌ ಎಂಬೊಬ್ಬ ಹಿರಿಯರ ಮಾರ್ಗದರ್ಶನದಿಂದ ಹತ್ತಿರದ ಭಜನಾ ಮಂದಿರದಲ್ಲಿ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೇ ಅವರ ಸಂಗೀತ ಪ್ರತಿಭೆಗೆ ಬುನಾದಿ ಎನ್ನುತ್ತಾರೆ ಸಂದೇಶ್.‌

ಕ್ರಮೇಣ ಬಾಲ್ಯದಲ್ಲಿ ಓದಿನ ಜೊತೆಗೆ ಭಜನೆಯೂ ಕಲಿಕೆಯ ಭಾಗವಾಯಿತು ಅದೇ ಮುಂದೆ ಕೈ ಹಿಡಿಯಿತು. ಬಿಎ ಪದವಿಧರರಾದ ಸಂದೇಶ್‌ ತಮ್ಮ ಓದಿನ ಜೊತೆಗೆ ಸಂಗೀತ ಕಚೇರಿಗಳಲ್ಲಿ ಹಾಡುತ್ತಿದ್ದರು. 7 ವರ್ಷಗಳ ಸತತ ಕಾರ್ಯಕ್ರಮಗಳನ್ನು ತಾವೇ ಒಂದು ತಂಡ ಕಟ್ಟಿ ಆ ಗೆಳೆಯರ ಬಳಗದೊಂದಿಗೆ ನೀಡುತ್ತಿದ್ದದ್ದು ಈಗಲೂ ಕರಾವಳಿಯಲ್ಲಿ ಅದು ಅದ್ಭುತ ನೆನಪುಗಳಾಗಿ ಉಳಿದಿದೆ. ಈ ಹವ್ಯಾಸಕ್ಕೆ ಅಪ್ಪ ಅಮ್ಮ  ಮತ್ತು ಹೆಂಡತಿಯ ಸಹಕಾರವನ್ನು ಸಂದೇಶ್‌ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಾರೆ.

Advertisement

ಮೊದಲ ಲಾಕ್‌ ಡೌನ್‌ನಲ್ಲಿ ಸಂಗೀತ ಕಾರ್ಯಕ್ರಮಗಳಿಲ್ಲದೆ ಸಂದೇಶ್‌ ತಮ್ಮ ಹೊಟ್ಟೆಪಾಡಿಗಾಗಿ ರಿಕ್ಷಾವನ್ನು ಬಾಡಿಗೆ ಪಡೆದು ಅದರಲ್ಲಿ ದುಡಿಯುತ್ತಿದ್ದರು. ಕ್ರಮೇಣ ಅದು ಕೈ ಹಿಡಿಯದಿದ್ದಾಗ ಮೀನು ಮಾರಟಕ್ಕೆ ಮುಂದಾಗುತ್ತಾರೆ.‌ ಇದು ಕಳೆದು ಸ್ವಲ್ಪ ಸಮಯದಲ್ಲೆ ಕೋವಿಡ್‌ನ ಎರಡನೇ ಅಲೆಗೆ ಎಲ್ಲರೂ ತತ್ತರಿಸಿದಂತೆ ಪ್ರತಿಭೆಯನ್ನು ಮುಂದುವರಿಸಲೂ ಆಗದೇ ದುಡಿಮೆಗೆ ಬೇರೆ ದಾರಿಯನ್ನು ಹುಡುಕುತ್ತಾರೆ. ಈ ವೇಳೆ ಜೊಮಾಟೋ ದಲ್ಲಿ ಡೆಲಿವರಿ ಬಾಯಿ ಆಗಿ ಬೆಳಗ್ಗೆ ಏಳರಿಂದ ರಾತ್ರಿ ಹತ್ತರ ವರೆಗೆ ಸತತ 2 ತಿಂಗಳು ದುಡಿದಿದ್ದರು.

ಆಗ ತೆರೆದುಕೊಂಡ ಭಾಗ್ಯದ ಬಾಗಿಲು ಕಲರ್ಸ್ ಕನ್ನಡದಲ್ಲಿನ ಸಂಗೀತ ಕಾರ್ಯಕ್ರಮ ಎದೆತುಂಬಿ ಹಾಡುವೆನು ಆಡಿಷನ್‌ಗೆ ಪಾಲ್ಗೊಳ್ಳಲು ಬಂದ ಆ ಒಂದು ಕರೆ ಇಂದು ಉಯವಾಣಿಯ ತೆರೆದಿದೆ ಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರೆಗೆ ಜನರ ಮನೆ ಮಗನಾಗಿ ಕರಾವಳಿಯ ಪ್ರತಿಭೆ ಸಂದೇಶ್‌ ನೀರ್ಮಾರ್ಗ ಸ್ಪೂರ್ತಿಯ ಚಿಲುಮೆಯಾಗಿ ಉಳಿಯುವಂತೆ ಮಾಡಿದೆ. ಇದು ಕಲರ್ಸ್‌ ಕನ್ನಡ ವಾಹಿನಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಫೈನಲ್ ಗೆ ತಲುಪಿದ ಸಂದೇಶ್‌ ಅವರ ಜೀವನ ಸಂದೇಶ ಮತ್ತು ಸಂಗೀತ ಪಯಣ. ಈ ಪಯಣಕ್ಕೆ ತೆರೆದಿದೆ ಮನ ಫೇಸ್‌ ಬುಕ್‌ ಲೈವ್‌ನಲ್ಲಿ ಹಲವು ಅಭಿಮಾನಿಗಳು ಹಾರೈಸಿ ಶುಭಕೋರಿದ್ದಾರೆ ಮತ್ತು ಊರಿನ ಹಲವರು ದೈವ ದೇವರಿಗೆ ಹರಕೆ ಹೇಳಿ ತಮ್ಮ ಕರಾವಳಿ ಪ್ರತಿಭೆಯ ಪ್ರಯತ್ನಕ್ಕೆ ಸಾಥ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next